ಆ್ಯಪ್ನಗರ

ಮಳೆಗೂ ತಡೆಯಲಾಗಲಿಲ್ಲ ಟೀಮ್ ಇಂಡಿಯಾ ವರ್ಕೌಟ್!

ಏಕದಿನ ವಿಶ್ವಕಪ್‌ನಲ್ಲಿ ಗುರುವಾರ ವೆಸ್ಟ್‌ಇಂಡೀಸ್ ವಿರುದ್ಧ ನಡೆಯಲಿರುವ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಅಭ್ಯಾಸ ಅವಧಿಗೆ ಮಳೆ ಅಡ್ಡಿಯಾಗಿದೆ. ಹಾಗಿದ್ದರೂ ಭಾರತ ತಂಡದ ಆಟಗಾರರು ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸಿಸುವ ಮೂಲಕಮ ಗಮನ ಸೆಳೆದಿದ್ದಾರೆ.

Vijaya Karnataka Web 25 Jun 2019, 8:15 pm
ಮ್ಯಾಂಚೆಸ್ಟರ್: ಪ್ರಸಕ್ತ ಸಾಗುತ್ತಿರುವ ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಹಾಗೂ ಮಳೆರಾಯ ಉತ್ತಮ ನಂಟನ್ನು ಹೊಂದಿದೆ. ಮಳೆಯಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ರದ್ದುಗೊಂಡರೆ ಕೆಲವು ಬಾರಿ ಅಭ್ಯಾಸ ಅವಧಿಗೂ ಕಾಟ ತಪ್ಪಿದ್ದಲ್ಲ.
Vijaya Karnataka Web team-india-02


ಇದೀಗ ವೆಸ್ಟ್‌ಇಂಡೀಸ್ ವಿರುದ್ಧ ಗುರುವಾರ ನಡೆಯಲಿರುವ ಪಂದ್ಯಕ್ಕೂ ಮುನ್ನ ಮಂಗಳವಾರ ನಡೆಯಬೇಕಾಗಿದ್ದ ಅಭ್ಯಾಸ ಅವಧಿಕ್ಕೂ ಮಳೆಯ ಕಾಟವಾಗಿದೆ. ಆದರೂ ಟೀಮ್ ಇಂಡಿಯಾ ಆಟಗಾರರ ಅಭ್ಯಾಸ ಅವಧಿಗೆ ಯಾವುದೇ ತೊಂದರೆಯಾಗಿಲ್ಲ.

ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುವ ಮೂಲಕ ಭಾರತೀಯ ಆಟಗಾರರು ಗಮನ ಸೆಳೆದರು. ಈ ಮೂಲಕ ವಿಶ್ವಕಪ್‌ನಲ್ಲಿ ತಮ್ಮ ಬದ್ದತೆಯನ್ನು ತೋರಿಸಿದರು.

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಭುವನೇಶ್ವರ್ ಕುಮಾರ್ ಸಹ ಒಂಟಿ ವಿಕೆಟ್‌ಗೆ ಗುರಿ ಮಾಡುತ್ತಾ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದರು.

ಕೋಚ್ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ದೀರ್ಘ ಸಮಾಲೋಚನೆಯಲ್ಲಿ ಭಾಗಿಯಾಗಿದ್ದು ಕಂಡುಬಂದಿತ್ತು. ಬಳಿಕ ವಿರಾಟ್ ಸಹ ನೆಟ್ಸ್‌ಗಿಳಿದು ಬ್ಯಾಟಿಂಗ್ ಅಭ್ಯಾಸಿಸಿದರು.

ಸೋಲಿಲ್ಲದ ಸರದಾರನಾಗಿ ಮುನ್ನಡೆಯುತ್ತಿರುವ ಟೀಮ್ ಇಂಡಿಯಾ ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವು ಹಾಗೂ ಡ್ರಾ ಫಲಿತಾಂಶದೊಂದಿಗೆ ಒಟ್ಟು ಒಂಬತ್ತು ಅಂಕಗಳನ್ನು ಕಲೆ ಹಾಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌