ಆ್ಯಪ್ನಗರ

ಸಮಯವೇ ನನ್ನ ಆಟವನ್ನು ಪ್ರತಿಬಿಂಬಿಸಲು ನೆರವಾಯಿತು: ರಾಹುಲ್

ಕ್ರಿಕೆಟ್‌ನಿಂದ ದೂರವುಳಿದ ಸಂದರ್ಭದಲ್ಲಿ ತಮ್ಮ ಗೇಮ್ ಬಗ್ಗೆ ಆಳವಾಗಿ ಪಠಿಸಿ ಕಮ್‌ಬ್ಯಾಕ್ ಮಾಡಲು ನೆರವಾಗಿದೆ ಎಂದು ಭಾರತದ ವಿಶ್ವಕಪ್ ತಂಡದ ಸದಸ್ಯರಾಗಿರುವ ಕೆಎಲ್ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 30 May 2019, 3:23 pm
ಕಾರ್ಡಿಫ್: ಏಕದಿನ ವಿಶ್ವಕಪ್‌ಗೂ ಮೊದಲು ಬಾಂಗ್ಲಾದೇಶ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿರುವ ಕೆಎಲ್ ರಾಹುಲ್, ನಾಲ್ಕನೇ ಕ್ರಮಾಂಕದಲ್ಲಿ ಆಡಲು ತಾವೇ ಸೂಕ್ತ ಆಟಗಾರ ಎಂಬುದನ್ನು ಸಾಬೀತು ಮಾಡಿದ್ದಾರೆ.
Vijaya Karnataka Web kl-rahul-01


ಇದೀಗ ಪ್ರತಿಕ್ರಿಯೆ ನೀಡಿರುವ ಕರ್ನಾಟಕದ 27ರ ಹರೆಯದ ಯುವ ಭರವಸೆಯ ಬ್ಯಾಟ್ಸ್‌ಮನ್ ರಾಹುಲ್, ಸಮಯವೇ ತನ್ನ ಆಟವನ್ನು ಪ್ರತಿಬಿಂಬಿಸಲು ನೆರವಾಗಿದೆ ಎಂದಿದ್ದಾರೆ.

ಖಾಸಗಿ ಟೆಲಿವಿಷನ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ತಾತ್ಕಾಲಿಕ ನಿಷೇಧ ಶಿಕ್ಷೆಯನ್ನು ಎದುರಿಸಿರುವ ರಾಹುಲ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದೂರವುಳಿದಿದ್ದರು. ಈ ಅವಧಿಯಲ್ಲಿ ತಮ್ಮ ಆಟದ ಬಗ್ಗೆ ಆಳವಾಗಿ ಪಠಿಸಿ ಕಮ್ ಬ್ಯಾಕ್ ಮಾಡಲು ನೆರವಾಗಿದೆ ಎಂದಿದ್ದಾರೆ.

ಎಲ್ಲರಂತೆಯೇ ಕ್ರಿಕೆಟ್‌ನಿಂದ ದೂರವುಳಿದ ಸಂದರ್ಭದಲ್ಲಿ ತಮ್ಮ ಆಟವನ್ನು ಪ್ರತಿಬಿಂಬಿಸಲು ನೆರವಾಗಿದೆ. ನಾನು ಸ್ನೇಹಿತರು ಹಾಗೂ ಕುಟುಂಬದ ಜತೆ ಸಮಯ ಕಳೆದಿದ್ದೇನೆ. ಈ ವೇಳೆಯಲ್ಲೂ ಕ್ರಿಕೆಟ್ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಿರುವುದಾಗಿ ತಿಳಿಸಿದರು.

ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ಎ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಇದು ನನ್ನ ಆತ್ಮವಿಶ್ವಾಸ ವೃದ್ಧಿಗೆ ನೆರವಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌