ಆ್ಯಪ್ನಗರ

M S Dhoni: ಸೇನಾ ಲಾಂಛನದ ಗ್ಲೌಸ್ ಬಗ್ಗೆ ಐಸಿಸಿಗೆ ಟ್ವಿಟರ್ ತಪರಾಕಿ

ಟೀಂ ಇಂಡಿಯಾ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಯೋಧರ ಬಲಿದಾನದ ಲಾಂಛನ ಹೊಂದಿದ್ದ ಗ್ಲೌಸ್ ಧರಿಸಿ ಸುದ್ದಿಯಾಗಿದ್ದರು. ​

Vijaya Karnataka Web 7 Jun 2019, 12:39 pm
ಬೆಂಗಳೂರು: ಪ್ರಸಕ್ತ ಸಾಲಿನ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಿದ್ದ ಭಾರತ ಗೆಲುವು ಸಾಧಿಸಿತ್ತು.
Vijaya Karnataka Web ms dhoni


ಈ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಯೋಧರ ಬಲಿದಾನದ ಲಾಂಛನ ಹೊಂದಿದ್ದ ಗ್ಲೌಸ್ ಧರಿಸಿ ಸುದ್ದಿಯಾಗಿದ್ದರು.

ಆದರೆ ಗ್ಲೌಸ್ ಬಗ್ಗೆ ಎಚ್ಚರಿಕೆ ನೀಡಿದ್ದ ಐಸಿಸಿ, ಬಿಸಿಸಿಐಗೆ ಸೂಚನೆ ನೀಡಿ, ಅಂತಹ ಗ್ಲೌಸ್ ಧರಿಸಬೇಡಿ ಎಂದು ಹೇಳಿತ್ತು. ಆದರೆ ಧೋನಿಗೆ ಬಿಸಿಸಿಐ ಮತ್ತು ದೇಶಾದ್ಯಂತ ಬೆಂಬಲ ವ್ಯಕ್ತವಾಗಿದ್ದು, ಟ್ವಿಟರ್‌ನಲ್ಲಿ ಜನತೆ ಐಸಿಸಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಐಸಿಸಿ, ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಮದ ಪ್ರಕಾರ ಈ ರೀತಿಯ ಲಾಂಛನ ಪ್ರದರ್ಶನ ಸರಿಯಲ್ಲ ಎಂದಿತ್ತು. ಆದರೆ ಐಸಿಸಿ ಸೂಚನೆ ವಿರುದ್ಧ ರೊಚ್ಚಿಗೆದ್ದ ಭಾರತೀಯರು ಮತ್ತು ಕ್ರಿಕೆಟ್ ಅಭಿಮಾನಿಗಳು, ಟ್ವಿಟರ್‌ನಾದ್ಯಂತ ಐಸಿಸಿಗೆ ಝಾಡಿಸಿದ್ದಾರೆ.

ಭಾರತೀಯ ಸೇನಾ ಲಾಂಛನದ ಗ್ಲೌಸ್ ಧರಿಸಿ ಹೃದಯ ಗೆದ್ದ ಮಹಿ

ಜತೆಗೆ ಮಹೇಂದ್ರ ಸಿಂಗ್ ಧೋನಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸಾಮಾಜಿಕ ತಾಣದಲ್ಲಿ ಧೋನಿ ಬೆಂಬಲಿಸಿ ಪೋಸ್ಟ್‌ಗಳು ಹರಿದಾಡಿವೆ.

ಗ್ಲೌಸ್‌ನಿಂದ ಯೋಧರ ಬಲಿದಾನದ ಲಾಂಛನ ತೆಗೆಯುವಂತೆ ಧೋನಿಗೆ ವಾರ್ನಿಂಗ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌