ಆ್ಯಪ್ನಗರ

ರಬಾಡ ಟೀಕೆಗೆ ಪ್ರತ್ಯುತ್ತರ ನೀಡಿದ ಕೊಹ್ಲಿ

ದಕ್ಷಿಣ ಆಫ್ರಿಕಾ ಬಲಗೈ ವೇಗಿ ಕಗಿಸೋ ರಬಾಡ ಮಾಡಿರುವ 'ಅಪ್ರಬುದ್ಧ' ಟೀಕೆಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉತ್ತರ ನೀಡಿದ್ದಾರೆ. ಅಲ್ಲದೆ ರಬಾಡ ಬಳಿಯೇ ನೇರವಾಗಿ ಚರ್ಚಿಸಲು ಇಷ್ಟಪಡುವುದಾಗಿ ತಿಳಿಸಿದರು.

Vijaya Karnataka Web 4 Jun 2019, 9:42 pm
ಸೌತಾಂಪ್ಟನ್: ವಿಶ್ವದ ಮುಂಚೂಣಿಯ ದಕ್ಷಿಣ ಆಫ್ರಿಕಾ ಬಲಗೈ ವೇಗಿ ಕಗಿಸೋ ರಬಾಡ 'ಅಪ್ರಬುದ್ಧ' ಟೀಕೆಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉತ್ತರ ನೀಡಿದ್ದಾರೆ.
Vijaya Karnataka Web kohli-rabada


ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೊದಲ ಪಂದ್ಯಕ್ಕೂ ಮೊದಲು ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ನಾಯಕ ಕೊಹ್ಲಿ ಅವರನ್ನು ಪ್ರಶ್ನಿಸಿದಾಗ, ನೇರವಾಗಿಯೇ ರಬಾಡ ಬಳಿಯೇ ವಿಚಾರಿಸಿಕೊಳ್ಳಲಿದ್ದೇನೆ ಎಂದಷ್ಟೇ ಹೇಳಿದರು.

ಕಗಿಸೋ ರಬಾಡ ವಿರುದ್ಧ ಅನೇಕ ಬಾರಿ ಆಡಿದ್ದೇನೆ. ಹಾಗಾಗಿ ನೇರವಾಗಿ ಚರ್ಚಿಸಲು ಇಷ್ಟಪಡುತ್ತೇನೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಹೆಚ್ಚೇನು ಹೇಳಲು ಬಯಸುವುದಿಲ್ಲ ಎಂದರು.

ಇದರೊಂದಿಗೆ ರಬಾಡ ಹಾಗೂ ಕೊಹ್ಲಿ ನಡುವೆ ನಿಕಟ ಬ್ಯಾಟ್ ಆ್ಯಂಡ್ ಬಾಲ್ ಸಮರ ಏರ್ಪಡಲಿದೆ ಎಂಬುದು ಸಾಬೀತಾಗಿದೆ.

ಈ ಮೊದಲು ಕೊಹ್ಲಿ ಬಗ್ಗೆ ಹೇಳಿಕೆ ನೀಡಿರುವ ರಬಾಡ, ನಾನು ಐಪಿಎಲ್‌ನಲ್ಲಿ ಕೊಹ್ಲಿ ವಿರುದ್ದ ಆಡಿದ್ದೇನೆ. ಆದರೆ ಕೊಹ್ಲಿ ಓರ್ವ ಅಪ್ರಬುದ್ಧ ಆಟಗಾರನಾಗಿದ್ದು, ಎದುರಾಳಿಗಳ ನಿಂದನೆಯನ್ನು ಸಹಿಸಿಕೊಳ್ಳುವುದಿಲ್ಲ ಎಂದು ಟೀಕಿಸಿದ್ದರು.

ಅಗ್ರೇಷನ್ ಮೂಲಕ ಕೊಹ್ಲಿ ತಮ್ಮ ಶ್ರೇಷ್ಠ ಪ್ರದರ್ಶನ ನೀಡುತ್ತಾರೆ. ಆದರೆ ಎದುರಾಳಿಗಳು ಅದನ್ನೇ ತಿರುಗಿ ಪ್ರಯೋಗಿಸಿದರೆ ಸಹಿಸಿಕೊಳ್ಳುವುದಿಲ್ಲ. ತನಗಿದು ವಿಚಿತ್ರವಾಗಿ ಕಾಣಿಸುತ್ತಿದೆ ಎಂದು ಆರೋಪಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌