ಆ್ಯಪ್ನಗರ

ಸ್ಮಿತ್‌ಗೆ ಮೋಸಗಾರ ಎಂದು ಜರೆದ ಭಾರತೀಯ ಅಭಿಮಾನಿಗಳಿಗೆ ವಿರಾಟ್ ಕ್ಲಾಸ್!

ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ವಿರುದ್ಧ ಭಾರತೀಯ ಅಭಿಮಾನಿಗಳು ಮೋಸಗಾರ ಎಂದು ಜರೆದಾಗ ಮಧ್ಯೆ ಪ್ರವೇಶಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಫ್ಯಾನ್ಸ್‌ಗೆ ಬುದ್ಧಿವಾದ ಹೇಳಿದ್ದಾರೆ.

Vijaya Karnataka Web 9 Jun 2019, 10:19 pm
ಲಂಡನ್: ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿ ಬಿದ್ದು ಒಂದು ವರ್ಷದ ನಿಷೇಧವನ್ನು ಶಿಕ್ಷೆಯನ್ನು ಎದುರಿಸಿರುವ ಆಸ್ಟ್ರೇಲಿಯಾ ಆಟಗಾರರಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಈಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದರು.
Vijaya Karnataka Web kohli-smith


ಆಸ್ಟ್ರೇಲಿಯಾದ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಂಡಿರುವ ಸ್ಮಿತ್ ಹಾಗೂ ವಾರ್ನರ್‌ ಕಮ್‌ಬ್ಯಾಕ್ ನಿರೀಕ್ಷಿಸಿದಷ್ಟು ಸಿಹಿಯಾಗಿರಲಿಲ್ಲ. ಅಭ್ಯಾಸ ಪಂದ್ಯದ ವೇಳೆಯಲ್ಲೇ ಇಂಗ್ಲೆಂಡ್ ಅಭಿಮಾನಿಗಳು ಮೋಸಗಾರ ಎಂದು ಜರೆದದ್ದರು.

ಇದೀಗ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಂದ್ಯದಲ್ಲೂ ಇದಕ್ಕೆ ಸಮಾನವಾದ ಅನುಭವ ಎದುರಾಗಿದೆ. ಗ್ಯಾಲರಿಯಲ್ಲಿ ನೆರೆದಿದ್ದ ಭಾರತೀಯ ಅಭಿಮಾನಿಗಳ ಪೈಕಿ ಕೆಲವರು ಚೀಟರ್ ಚೀಟರ್ ಎಂದು ಜೋರಾಗಿ ಕಿರುಚಾಡಿದ್ದರು.

ಈ ವೇಳೆಯಲ್ಲಿ ಕ್ರೀಸಿನಲ್ಲಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಕ್ಷಣವೇ ಗ್ಯಾಲರಿಯತ್ತ ಸನ್ನೆ ಮಾಡಿ ಸ್ಮಿತ್‌ ವಿರುದ್ಧ ಮೋಸಗಾರ ಎಂದು ತೆಗಳುವುದನ್ನು ನಿಲ್ಲಿಸುವಂತೆ ಕೋರಿದರು. ಇದರ ಬದಲು ಟೀಮ್ ಇಂಡಿಯಾಗೆ ಜೈಕಾರ ಹಾಕುವಂತೆ ಸೂಚಿಸಿದರು.

ವಿರಾಟ್ ಕೊಹ್ಲಿ ಕ್ರೀಡಾಸ್ಫೂರ್ತಿಯನ್ನು ಗಮನಿಸಿದ ಸ್ಟೀವ್ ಸ್ಮಿತ್ ಹಸ್ತಲಾಘವ ಮಾಡುವ ಮೂಲಕ ಧನ್ಯವಾದ ಅರ್ಪಿಸಿದರು. ಪ್ರಸ್ತುತ ವಿರಟ್ ಕೊಹ್ಲಿ ಮೆರಿದಿರುವ ಕ್ರೀಡಾಸ್ಫೂರ್ತಿಗೆ ವ್ಯಾಪಕ ಮನ್ನಣೆ ದೊರಕುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌