ಆ್ಯಪ್ನಗರ

ಭಾರತಕ್ಕಾಗಿ ಪಂದ್ಯ ಗೆಲ್ಲಿಸಿಕೊಡುವುದೇ ನನ್ನ ಡ್ರೀಮ್: ಪಂತ್

ಭಾರತಕ್ಕಾಗಿ ಪಂದ್ಯ ಗೆಲ್ಲಿಸಿಕೊಡುವುದು ನನ್ನ ಕನಸಾಗಿದೆ ಎಂದು ಏಕದಿನ ವಿಶ್ವಕಪ್‌ನಲ್ಲಿ ಗಾಯಾಳು ಶಿಖರ್ ಧವನ್ ಸ್ಥಾನದಲ್ಲಿ ಟೀಮ್ ಇಂಡಿಯಾಕ್ಕಾಗಿ ಆಯ್ಕೆಯಾಗಿರುವ ಉದಯೋನ್ಮುಖ ರಿಷಬ್ ಪಂತ್ ತಿಳಿಸಿದ್ದಾರೆ.

Vijaya Karnataka Web 21 Jun 2019, 6:04 pm
ಸೌತಾಂಪ್ಟನ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಗಾಯಾಳು ಶಿಖರ್ ಧವನ್ ಅಲಭ್ಯವಾಗಿರುವ ಹಿನ್ನಲೆಯಲ್ಲಿ ಉದಯೋನ್ಮುಖ ರಿಷಬ್ ಪಂತ್ ತಂಡವನ್ನು ಸೇರಿಕೊಂಡಿದ್ದಾರೆ.
Vijaya Karnataka Web rishabh-pant


ಇದೀಗ ಬಿಸಿಸಿಐ ಟಿವಿಯಲ್ಲಿ ಯುಜ್ವೇಂದ್ರ ಚಹಲ್ ಎಕ್ಸ್‌ಕ್ಲೂಸಿವ್ ಸಂದರ್ಶನವನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಿಷಬ್ ಪಂತ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಆರಂಭದಲ್ಲಿ ಪಂತ್ ಕಡೆಗಣಿಸಿ ಅನುಭವಿ ದಿನೇಶ್ ಕಾರ್ತಿಕ್ ಅವರನ್ನು ಎರಡನೇ ವಿಕೆಟ್ ಕೀಪರ್ ಆಯ್ಕೆ ಮಾಡಲಾಗಿತ್ತು. ಇದರಿಂದಾಗಿ ವಿಶ್ವಕಪ್ ಕನಸು ಭಗ್ನವಾಗಿತ್ತು ಎಂದೇ ಅಂದಾಜಿಸಲಾಗಿತ್ತು.

ಈ ಸಂದರ್ಭದಲ್ಲಿ ವಿಶ್ವಕಪ್ ಮಧ್ಯೆ ಧವನ್ ಗಾಯಗೊಂಡ ಹಿನ್ನಲೆಯಲ್ಲಿ ಪಂತ್‌ಗೆ ಬುಲಾವ್ ನೀಡಲಾಗಿತ್ತು. ಆಗಲೂ ಟೀಮ್ ಇಂಡಿಯಾದ ಭಾಗವಾಗಿರಲಿಲ್ಲ. ಕೊನೆಗೂ ಧವನ್ ಗಾಯ ಮುಕ್ತರಾಗುವುದು ಅಸಾಧ್ಯವೆನಿಸಿದ ಹಿನ್ನೆಲೆಯಲ್ಲಿ ಪಂತ್ ತಂಡವನ್ನು ಅಧಿಕೃತವಾಗಿ ಸೇರುವಂತಾಗಿದೆ. ಇದರೊಂದಿಗೆ ಅಂಡರ್ 19 ಬಳಿಕ ಸೀನಿಯರ್ ತಂಡದಲ್ಲೂ ವಿಶ್ವಕಪ್ ಕನಸು ನನಸಾಗಿದೆ.

ಚಹಲ್ ಟಿವಿಯಲ್ಲಿ ಈ ಎಲ್ಲ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಿದ್ದೀರಿ ಎಂಬ ಪ್ರಶ್ನೆಗೆ, ಇಂತಹ ಸನ್ನಿವೇಶಗಳಲ್ಲಿ ವಿಚಲಿತನಾಗದೇ ಧನಾತ್ಮಕವಾಗಿ ಇರಲು ಪ್ರಯತ್ನಿಸಿದ್ದೇನೆ ಎಂದು ಪಂತ್ ತಿಳಿಸಿದರು.

ಮಾತು ಮುಂದುವರಿಸಿದ ಪಂತ್, ವಿಶ್ವಕಪ್ ತಂಡದಿಂದ ಕಡೆಗಣಿಸಿದಾಗ ಮತ್ತಷ್ಟು ಉತ್ತಮ ಪ್ರದರ್ಶನದತ್ತ ಗಮನ ಕೇಂದ್ರಿಕರಿಸಿದೆ ಎಂದು ಐಪಿಎಲ್ ಪ್ರದರ್ಶನವನ್ನು ಉದಾಹರಣೆಯಾಗಿ ನೀಡುತ್ತಾ ತಿಳಿಸಿದರು.

ಅಲ್ಲದೆ ಟೀಮ್ ಇಂಡಿಯಾಕ್ಕಾಗಿ ಪಂದ್ಯ ಗೆಲ್ಲಿಸಿಕೊಡುವುದೇ ನನ್ನ ಕನಸಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಂತ್ ವಿಶೇಷವಾದ ಕೇಶ ವಿನ್ಯಾಸವನ್ನು ಚಹಲ್ ಉಲ್ಲೇಖಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌