ಆ್ಯಪ್ನಗರ

ಭಾರತಕ್ಕೆ ಅಗ್ನಿಪರೀಕ್ಷೆಯಾಗಲಿದೆ ಪಂದ್ಯ: ಕೃಷ್ಣಮಾಚಾರಿ ಶ್ರೀಕಾಂತ್‌

ನ್ಯೂಜಿಲೆಂಡ್‌ ವಿರುದ್ಧದ ಪಂದ್ಯ ಮತ್ತೊಂದು ಅಗ್ನಿಪರೀಕ್ಷೆ. ಕಿವೀಸ್‌ ಬೌಲರ್‌ಗಳು ಅಸಾಧಾರಣ ಫಾರ್ಮ್‌ನಲ್ಲಿರುವುದರಿಂದ ಭಾರತದ ಅಗ್ರ ಕ್ರಮಾಂಕದ ಸಾಮರ್ಥ್ಯ‌ ಒರೆಗೆ ಹಚ್ಚಲ್ಪಡಲಿದೆ.

Agencies 13 Jun 2019, 5:28 pm
ಮುಂಬಯಿ: ಗುರುವಾರದ ಪಂದ್ಯ ಒಂದು ರೀತಿಯಲ್ಲಿ ಭಾರತಕ್ಕೆ ಅಗ್ನಿಪರೀಕ್ಷೆಯಿದ್ದಂತೆ ಎಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web Team


ಆಸ್ಪ್ರೇಲಿಯಾ ವಿರುದ್ಧ ಭಾರತ ಗೆದ್ದಿತು ಅನ್ನುವುದಕ್ಕಿಂತ ಭಾರತೀಯರು ಭಾನುವಾರ 2 ಅಂಕ ಗಳಿಸುವ ಹಾದಿಯಲ್ಲಿ ಕಾಂಗರೂಗಳನ್ನು ಮಟ್ಟಸಮಾಡಿದ ರೀತಿ ನನಗೆ ಇಷ್ಟವಾಯಿತು. ನ್ಯೂಜಿಲೆಂಡ್‌ ವಿರುದ್ಧದ ಪಂದ್ಯ ಮತ್ತೊಂದು ಅಗ್ನಿಪರೀಕ್ಷೆ. ಕಿವೀಸ್‌ ಬೌಲರ್‌ಗಳು ಅಸಾಧಾರಣ ಫಾರ್ಮ್‌ನಲ್ಲಿರುವುದರಿಂದ ಭಾರತದ ಅಗ್ರ ಕ್ರಮಾಂಕದ ಸಾಮರ್ಥ್ಯ‌ ಒರೆಗೆ ಹಚ್ಚಲ್ಪಡಲಿದೆ.

ಧವನ್‌ ಅನುಪಸ್ಥಿತಿ ತಂಡಕ್ಕೆ ಮರ್ಮಾಘಾತ ಎಂಬುದರಲ್ಲಿ ಅನುಮಾನವೇ ಇಲ್ಲ. ರೋಹಿತ್‌ಗೆ ಕೆ.ಎಲ್‌.ರಾಹುಲ್‌ ಜೋಡಿಯಾಗುತ್ತಾರೆ. ಅದೇ ವೇಳೆ, ರವೀಂದ್ರ ಜಡೇಜಾ ಅಥವಾ ಶಮಿ ಆಡುವ 11ರ ಬಳಗಕ್ಕೆ ಸೇರ್ಪಡೆಯಾಗಬೇಕು ಎಂಬುದು ನನ್ನ ಅನಿಸಿಕೆ. ಭಾರತದೊಂದಿಗಿನ ವಿಶ್ವಕಪ್‌ ಕದನಗಳಲ್ಲಿ ಕಿವೀಸ್‌ ಸ್ವಲ್ಪ ಮೇಲುಗೈ ಹೊಂದಿದೆ.

ಆದರೆ, ಪ್ರತಿಷ್ಠಿತ ಟೂರ್ನಿಯಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು 16 ವರ್ಷಗಳ ಬಳಿಕ ಎಂಬುದು ಗಮನಿಸತಕ್ಕ ಸಂಗತಿ. ಈ ಪಂದ್ಯವನ್ನು ಉಳಿದೆಲ್ಲ ತಂಡಗಳು ಕುತೂಹಲದಿಂದ ನೋಡುತ್ತಿರುತ್ತವೆ. ಯಾಕೆಂದರೆ, ಇಂದಿನ ವಿಜೇತ ತಂಡ ಸೆಮಿಫೈನಲ್ಸ್‌ನತ್ತ ಮುಖ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌