ಆ್ಯಪ್ನಗರ

ಚಹಲ್ ಸ್ಪಿನ್ ಮೋಡಿಗೆ ಬೆಚ್ಚಿದ ಹರಿಣಗಳ ಪಡೆ

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲೇ ಯುಜ್ವೇಂದ್ರ ಚಹಲ್ ನಾಲ್ಕು ವಿಕೆಟುಗಳನ್ನು ಕಬಳಿಸುವ ಮೂಲಕ ಮಿಂಚಿನ ದಾಳಿ ನಡೆಸಿದ್ದಾರೆ.

Vijaya Karnataka Web 5 Jun 2019, 6:20 pm
ಸೌತಾಂಪ್ಟನ್: ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಬುಧವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಎದುರಾಳಿ ದಕ್ಷಿಣ ಆಫ್ರಿಕಾ ತಂಡದ ಮೇಲೆ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದ್ದಾರೆ.
Vijaya Karnataka Web chahal-team-india


ಆರಂಭದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ನಿಖರ ದಾಳಿ ಸಂಘಟಿಸಿದರೆ ಬಳಿಕ ರಿಸ್ಟ್ ಸ್ಪಿನ್ ದ್ವಯರಾದ ಯುಜ್ವೇಂದ್ರ ಚಹಲ್ ಹಾಗೂ ಕುಲ್‌ದೀಪ್ ಯಾದವ್ ನಿಖರ ದಾಳಿಯ ಮೂಲಕ ಗಮನ ಸೆಳೆದರು.

ಬುಮ್ರಾ ಆರಂಭಿಕ ಆಘಾತ ನೀಡಿದರೆ ಮಧ್ಯಂತರ ಓವರ್‌ಗಳಲ್ಲಿ ಚಹಲ್ ತಮ್ಮ ಲೆಗ್ ಸ್ಪಿನ್ ದಾಳಿಯ ಮೂಲಕ ದಕ್ಷಿಣ ಆಫ್ರಿಕಾವನ್ನು ಕಾಡಿದರು.

ಸೆಟ್ ‌ಬ್ಯಾಟ್ಸ್‌ಮನ್‌ಗಳಾದ ನಾಯಕ ಫಾಕ್ ಡು ಪ್ಲೆಸಿಸ್ (38) ಹಾಗೂ ರಾಸೀ ವ್ಯಾನ್ ಡೆರ್ ದುಸಾನ್‌ರನ್ನು (22) ಒಂದೇ ಓವರ್‌ನಲ್ಲಿ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಚಹಲ್ ತಮ್ಮ ಸಾಮರ್ಥ್ಯವನ್ನು ಮೆರೆದರು.

ಇಲ್ಲಿಗೆ ಚಹಲ್ ಪರಾಕ್ರಮ ನಿಲ್ಲಲಿಲ್ಲ. ಮಗದೊಮ್ಮೆ ಉತ್ತಮವಾಗಿ ಆಡುತ್ತಿದ್ದ ಡೇವಿಡ್ ಮಿಲ್ಲರ್ (31) ಹಾಗೂ ಆ್ಯಂಡಿಲ್ ಪೆಹ್ಲುಕಾಯೊ (34) ಅವರಿಗೂ ಪೆವಿಲಿಯನ್ ಹಾದಿ ತೋರಿಸಿದರು.

ಚಹಲ್ ತಮ್ಮ 10 ಓವರ್‌ಗಳ ಕೋಟಾದಲ್ಲಿ 51 ರನ್ ಬಿಟ್ಟುಕೊಟ್ಟರೂ ಪ್ರಮುಖ ನಾಲ್ಕು ವಿಕೆಟುಗಳನ್ನು ಕಬಳಿಸಿ ಮಿಂಚಿದರು.

ಅತ್ತ ಕುಲ್‌ದೀಪ್ ಯಾದವ್ ಸಹ ಒಂದು ವಿಕೆಟ್ ಪಡೆದು ಭರ್ಜರಿ ಕಮ್‌ಬ್ಯಾಕ್ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌