ನಿಮಗೆ ಬಿಯರ್ ಬೇಕಾಗಿದೆ ತಾನೇ? ಮತ್ತೆ ವ್ಯಾಪಕ ಟ್ರೋಲ್ಗೆ ಗುರಿಯಾದ ಕೋಚ್ ಶಾಸ್ತ್ರಿ
ಭಾರತ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ಮತ್ತೊಮ್ಮೆ ಟ್ರೋಲ್ಗೆ ಗುರಿಯಾಗಿದ್ದಾರೆ. ಬೀಚ್ ಚಿತ್ರವನ್ನು ಹಂಚಿಕೊಂಡಿರುವುದಕ್ಕೆ ಟ್ವಿಟರ್ನಲ್ಲಿ ವ್ಯಾಪಕ ಟ್ರೋಲ್ ಮಾಡಲಾಗಿದ್ದು, ಫಿಟ್ನೆಸ್ ಕಡೆಗೆ ಗಮನ ನೋಡಿ ಎಂದು ಜರೆದಿದ್ದಾರೆ.
Vijaya Karnataka Web 28 Aug 2019, 10:37 am
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ರವಿ ಶಾಸ್ತ್ರಿ ಮಗದೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್ಗೊಳಗಾಗಿದ್ದಾರೆ.
ಆ್ಯಂಟಿಗುವಾದಲ್ಲಿ ನಡೆದ ಮೊದಲ ಟೆಸ್ಟ್ ಜಯಿಸಿದ ಭಾರತ ತಂಡದ ಆಟಗಾರರು ಕೆರಿಬಿಯನ್ ದ್ವೀಪದ ಸಮುದ್ರ ತೀರಗಳಲ್ಲಿ ಹಾಗೂ ಐಷಾರಾಮಿ ರೆಸಾರ್ಟ್ಗಳಲ್ಲಿ ಕಾಲ ಕಳೆಯುತ್ತಿದ್ದಾರೆ.
ಅಂತೆಯೇ, ರವಿ ತಂಡದ ಮುಖ್ಯ ಕೋಚ್ ಶಾಸ್ತ್ರಿಯವರು ಸೋಮವಾರ ತಾವು 'ಕೋಕೊ ಬೇ' ರೆಸಾರ್ಟ್ನಲ್ಲಿರುವ ಚಿತ್ರವನ್ನು ಟ್ವಿಟರ್ನಲ್ಲಿ ಪ್ರಕಟಿಸಿದ್ದರು. ಇದರ ಬೆನ್ನಿಗೇ ನೆಟ್ಟಿಗರ ಟೀಕಾಸ್ತ್ರಗಳಿಗೆ ಶಾಸ್ತ್ರಿ ಗುರಿಯಾಗಿದ್ದಾರೆ.
''ನಿಮ್ಮ ಫಿಟ್ನೆಸ್ ಕಡೆಗೆ ಗಮನ ಕೊಡಿ. ನೀವು ಭಾರತ ತಂಡದ ಕೋಚ್, ರೈಲ್ವೇ ಕೋಚ್ ಅಲ್ಲ,'' ಎಂದು ಕೆಲವರು ಟೀಕಿಸಿದರೆ, ಇನ್ನು ಕೆಲವರು ''ನಿಮ್ಮ ದಿರಸಿನ ಸಭ್ಯತೆಯ ಕಡೆಗೆ ಗಮನ ಕೊಡಿ,'' ಎಂದು ಕುಟುಕಿದ್ದಾರೆ.
ಮತ್ತೆ ಕೆಲವರು, ''ನಿಮಗೆ ಬಿಯರ್ ಬೇಕಾಗಿದೆ ತಾನೇ,'' ಎಂದು ಪ್ರಶ್ನಿಸಿದ್ದಾರೆ.