ಆ್ಯಪ್ನಗರ

ಮಿಸ್ಟರ್ 360 ಒನ್ ಹ್ಯಾಂಡ್ ಸಿಕ್ಸರ್; ಚೆಂಡು ಸ್ಟೇಡಿಯಂ ರೂಫ್‌ನಲ್ಲಿ ಲ್ಯಾಂಡ್!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬೆಂಗಳೂರಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಒಂದೇ ಕೈಯಲ್ಲಿ ಸಿಕ್ಸರ್ ಬಾರಿಸುವ ಮೂಲಕ ಎಬಿ ಡಿ ವಿಲಿಯರ್ಸ್ ಗಮನ ಸೆಳೆದಿದ್ದಾರೆ.

Vijaya Karnataka Web 24 Apr 2019, 10:47 pm
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಬಿರುಸಿನ ಅರ್ಧಶತಕ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.
Vijaya Karnataka Web ab-de-villiers-06


ಅಲ್ಲದೆ ಮಾರ್ಕಸ್ ಸ್ಟೋಯ್ನಿಸ್ ಜತೆ ಮುರಿಯದ ಐದನೇ ವಿಕೆಟ್‌ಗೆ 121 ರನ್‌ಗಳ ಜತೆಯಾಟ ನೀಡುವ ಮೂಲಕ ಆರ್‌ಸಿಬಿ 202 ರನ್‌ಗಳ ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದಾರೆ.

ಕೇವಲ 44 ಎಸೆತಗಳನ್ನು ಎದುರಿಸಿದ ವಿಲಿಯರ್ಸ್82 ರನ್ ಗಳಿಸಿ ಅಜೇಯರಾಗುಳಿದರು. ವಿಲಿಯರ್ಸ್ ಮನಮೋಹಕ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಹಾಗೂ ಏಳು ಸಿಡಿಲಬ್ಬರದ ಸಿಕ್ಸರ್‌ಗಳು ಸೇರಿದ್ದವು.

ಈ ಪೈಕಿ ಮೊಹಮ್ಮದ್ ಶಮಿ ಎಸೆದ ಪಂದ್ಯದ 19ನೇ ಓವರ್‌ನ ನಾಲ್ಕನೇ ಎಸೆತವನ್ನು ಒಂದೇ ಕೈಯಲ್ಲಿ ಸಿಕ್ಸರ್‌ಗಟ್ಟುವ ಮೂಲಕ ಗಮನ ಸೆಳೆದರು. ಪ್ರಸ್ತುತ ಚೆಂಡು ಸ್ಟೇಡಿಯಂನ ಮೇಲ್ಛಾವಣಿಯಲ್ಲಿ ಲ್ಯಾಂಡ್ ಆಗಿತ್ತು. ಈ ಮೂಲಕ ತಾವೇಕೆ ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್‌ಮನ್ ಎಂಬುದನ್ನು ಸಾಬೀತು ಮಾಡಿದರು.

ಅದೇ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ವಿಲಿಯರ್ಸ್ 21 ರನ್ ಕಸಿದುಕೊಂಡಿದ್ದರು. ಬಳಿಕ ಸ್ಟೋಯ್ನಿಸ್ ಜತೆ ಸೇರಿ ಅಂತಿಮ ಓವರ್‌ನಲ್ಲಿ 27 ರನ್ ಕಸಿದುಕೊಳ್ಳಲು ನೆರವಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌