ಆ್ಯಪ್ನಗರ

ವಾರ್ನರ್‌ ಕಮ್‌ಬ್ಯಾಕ್; ಭರ್ಜರಿ ಸ್ವಾಗತ

ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಒಂದು ವರ್ಷದ ನಿಷೇಧವನ್ನು ಪೂರ್ಣಗೊಳಿಸಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುವ ಮೂಲಕ ಸ್ಫರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದಾರೆ.

Vijaya Karnataka Web 17 Mar 2019, 1:41 pm
ಹೈದರಾಬಾದ್: ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಒಂದು ವರ್ಷದ ನಿಷೇಧವನ್ನು ಎದುರಿಸಿರುವ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ.
Vijaya Karnataka Web david-warner


ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ವಾರ್ನರ್ ಪ್ರತಿನಿಧಿಸುತ್ತಿದ್ದಾರೆ.

ಇದರಂತೆ ಹೈದರಾಬಾದ್‌ಗೆ ಆಗಮಿಸಿರುವ ವಾರ್ನರ್‌ಗೆ ಎಸ್‌ಆರ್‌ಎಚ್ ತಂಡವು ಭರ್ಜರಿ ಸ್ವಾಗತವನ್ನು ನೀಡಿದೆ.

ಕಳೆದ ವರ್ಷದ ವಾರ್ನರ್ ಅಲಭ್ಯತೆಯಲ್ಲಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸಿದ್ದರು. ಹಾಗಾಗಿ ಈ ಬಾರಿ ಯಾರು ನಾಯಕತ್ವ ವಹಿಸಲಿದ್ದಾರೆ ಎಂಬುದು ಕುತೂಹಲವೆನಿಸಿದೆ.

ಸಂಪೂರ್ಣವಾಗಿ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ವಾರ್ನರ್ ಗಮನ ಸೆಳೆದಿದ್ದಾರೆ. ಗಡ್ಡ ಬೆಳೆಸಿಕೊಂಡಿರುವ ವಾರ್ನರ್‌‌ಗೆ ಅಭಿಮಾನಿಗಳಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಆಸೀಸ್ ತಂಡದಲ್ಲಿ ವಾರ್ನರ್ ಗುರುತಿಸಿಕೊಳ್ಳುವರೇ ಎಂಬುದು ಬಹಳಷ್ಟು ಕುತೂಹಲವೆನಿಸಿದೆ. ಈ ಹಿನ್ನಲೆಯಲ್ಲಿ ಐಪಿಎಲ್ ಪ್ರದರ್ಶನ ನಿರ್ಣಾಯಕವೆನಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌