ಆ್ಯಪ್ನಗರ

ಅಶ್ವಿನ್‌ಗೆ ಮುಳುವಾಯ್ತು ಅದೇ ರೂಲ್ಸ್ ಬುಕ್!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರವಿಚಂದ್ರನ್ ಅಶ್ವಿನ್ ಅವರಿಗೆ ತಕ್ಕ ಶಾಸ್ತಿಯಾಗಿದೆ. ಕಳೆದ ಪಂದ್ಯದಲ್ಲಿ ಮಂಕಡ್ ರನೌಟ್ ಪ್ರಕರಣದ ಬಳಿಕ ರೂಲ್ಸ್ ಬುಕ್ ಬಗ್ಗೆ ಮಾತನಾಡಿದ್ದ ಅಶ್ವಿನ್‌ಗೆ ಕೆಕೆಆರ್ ವಿರುದ್ಧ ನೋ ಬಾಲ್ ಪ್ರಕರಣದಲ್ಲಿ ತಕ್ಕ ತಿರುಗೇಟು ಉಂಟಾಗಿದೆ.

Vijaya Karnataka Web 27 Mar 2019, 11:18 pm
ಕೋಲ್ಕತಾ: ಕೆಲವು ದಿನಗಳ ಹಿಂದೆಯಷ್ಟೇ ಕ್ರಿಕೆಟ್ ರೂಲ್ಸ್ ಬುಕ್ ಬಗ್ಗೆ ಮಾತನಾಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್‌ಗೆ ಅದೇ ರೂಲ್ಸ್ ಬುಕ್ ಕಂಟಕವಾಗಿ ಪರಿಣಮಿಸಿದೆ.
Vijaya Karnataka Web r-ashwin-02


ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಸೋಲುವ ಹಂತ ತಲುಪಿದಾಗ ಉತ್ತಮವಾಗಿ ಆಡುತ್ತಿದ್ದ ಜೋಸ್ ಬಟ್ಲರ್ ಅವರನ್ನು ವಿವಾದಾತ್ಮಕ ಮಂಕಡ್ ರನೌಟ್ ಬಲೆಗೆ ಸಿಲುಕಿಸಿದ್ದರು.

ಬೌಲಿಂಗ್ ಮಾಡುತ್ತಿರುವ ವೇಳೆ ನಾನ್-ಸ್ಟ್ರೈಕರ್‌ನಲ್ಲಿದ್ದ ಬಟ್ಲರ್ ಕ್ರೀಸ್ ತೊರೆದಾಗ ಅಶ್ವಿನ್ ಬೇಲ್ಸ್ ಹಾರಿಸಿದ್ದರು. ತದಾ ಬಳಿಕ ಅಶ್ವಿನ್ ಕ್ರೀಡಾಸ್ಫೂರ್ತಿ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆದಿದ್ದವು.

ಬಳಿಕ ತಮ್ಮ ಕೃತ್ಯವನ್ನು ಸಮರ್ಥಿಸಿದ ಅಶ್ವಿನ್ ಇವೆಲ್ಲವೂ ಕ್ರಿಕೆಟ್ ರೂಲ್ಸ್ ಬುಕ್‌ನಲ್ಲಿದ್ದು ಕ್ರೀಡಾಸ್ಪೂರ್ತಿಯ ವಿಶೇಷವೇ ಉದ್ಬವಿಸುವುದಿಲ್ಲ ಎಂದಿದ್ದರು.

ಇದೀಗ ಅದೇ ರೂಲ್ಸ್ ಬುಕ್ ಅಶ್ವಿನ್ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಯಾಕೆಂದರೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮೊಹಮ್ಮದ್ ಶಮಿ ದಾಳಿಯಲ್ಲಿ ಆಂಡ್ರೆ ರಸೆಲ್ ಕ್ಲೀನ್ ಬೌಲ್ಡ್ ಆಗಿದ್ದರು.

16.6ನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು. ಆದರೆ ಮೂರು ಫೀಲ್ಡರ್‌ಗಳು ಮಾತ್ರ 30 ಯಾರ್ಡ್ ಸರ್ಕಲ್ ಒಳಗಡೆ ಇದ್ದುದ್ದರಿಂದ ಅಂಪೈರ್ ನೋ ಬಾಲ್ ಎಂದು ಘೋಷಿಸಿದರು.

ನಿಮಯಗಳ ಪ್ರಕಾರ ಕನಿಷ್ಠ ನಾಲ್ಕು ಫೀಲ್ಡರ್‌ಗಳು 30 ಯಾರ್ಡ್ ಸರ್ಕಲ್ ಒಳಗಡೆ ಇರಬೇಕಾಗುತ್ತದೆ. ಆಗ ರಸೆಲ್ ಗಳಿಸಿದ್ದು ಬರಿ 4 ರನ್. ಈ ಹಂತದಲ್ಲಿ ಅಶ್ವಿನ್ ಭಾರಿ ಕುಪಿತಗೊಂಡಿದ್ದರು.

ಅಲ್ಲಿಂದ ಬಳಿಕ ತಿರುಗಿ ನೋಡದ ವಿಂಡೀಸ್ ದಿಗ್ಗಜ ಪಂಜಾಬ್ ದಾಳಿಯನ್ನು ಪುಡಿಗೈದರು. ಅಲ್ಲದೆ ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ನೆರವಾದರು. ಕೇವಲ 17 ಎಸೆತಗಳನ್ನು ಎದುರಿಸಿದ ರಸೆಲ್ 48 ರನ್ ಪೇರಿಸಿದರು. ಇದರಲ್ಲಿ ಮೂರು ಬೌಂಡರಿ ಹಾಗೂ ಐದು ಸಿಕ್ಸರ್‌ಗಳು ಸೇರಿದ್ದವು.

ಒಟ್ಟಿನಲ್ಲಿ ತಾವು ಮಾಡಿದ ತಪ್ಪಿಗೆ ತಾವೇ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂಬುದು ಸಾಬೀತಾಗಿದೆ. ಅಲ್ಲದೆ ರಾಜಸ್ಥಾನ್ ವಿರುದ್ಧ ಕ್ರೀಡಾ ಸ್ಫೂರ್ತಿ ಮರೆತ ಕಿಂಗ್ಸ್ ನಾಯಕ ಅಶ್ವಿನ್‌ಗೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ತಕ್ಕ ಶಾಸ್ತಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌