ಆ್ಯಪ್ನಗರ

ವಿರಾಟ್‌ಗೆ ಗುಂಡು ಹಾರಿಸಿದ ಅನುಷ್ಕಾ; ಮುಂದೇನಾಯ್ತು?

ವರ್ಚ್ಯೂವಲ್ ವೀಡಿಯೋ ಗೇಮ್ ಆಡುತ್ತಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪತಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮೇಲೆ ಶೂಟೌಟ್ ಮಾಡುತ್ತಿರುವ ವೀಡಿಯೋ ವೈರಲ್ ಆಗಿ ಹರಡುತ್ತಿದೆ.

Vijaya Karnataka Web 24 Apr 2019, 6:20 pm
ಬೆಂಗಳೂರು: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಜೀವನಕ್ಕೆ ಪ್ರವೇಶಿಸಿದ ಬಳಿಕ ತನ್ನ ಲೈಫ್ ಸಂಪೂರ್ಣ ಬದಲಾಗಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web virushka-01


ಅಲ್ಲದೆ ತಮ್ಮೆಲ್ಲ ಯಶಸ್ಸಿಗೂ ಅನುಷ್ಕಾ ಅವರನ್ನು ಹಾಡಿ ಹೊಗಳುತ್ತಾರೆ. ದೇಶದ ಅತಿ ಹೆಚ್ಚು ಚರ್ಚಿತ ಸೆಲೆಬ್ರಿಟಿ ಜೋಡಿಯಾಗಿರುವ ವಿರಾಟ್-ಅನುಷ್ಕಾ ಏನೇ ಮಾಡಿದರೂ ಮಾಧ್ಯಮದ ಜತೆಗೆ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದೆ.

ಇದಕ್ಕೊಂದು ತಾಜಾ ಸೇರ್ಪಡೆಯೆಂಬಂತೆ ವಿರಾಟ್ ಹಾಗೂ ಅನುಷ್ಕಾ ನಡುವಣ ವೀಡಿಯೋವೊಂದು ವೈರಲ್ ಆಗಿ ಹರಡುತ್ತಿದೆ.

ವರ್ಚ್ಯೂವಲ್ ಗೇಮ್ ಆಡುತ್ತಿರುವ ಅನುಷ್ಕಾ ಪತಿ ಕೊಹ್ಲಿ ಮೇಲೆ ಶೂಟೌಟ್ ಮಾಡುತ್ತಾರೆ. ಈ ಸಂದರ್ಭದಲ್ಲಿ ನೈಜವಾಗಿಯೂ ಗುಂಡು ತಗುಲಿದ ರೀತಿಯಲ್ಲಿ ವಿರಾಟ್ ಚಡಪಡಿಸುತ್ತಾ ಕೆಳಕ್ಕೆ ಬೀಳುವ ಹಾಗೆ ನಟಿಸುತ್ತಾರೆ.

ಈ ವೀಡಿಯೋವನ್ನು ಸಹ ಆಟಗಾರ ಡೇಲ್ ಸ್ಟೇನ್ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌