ಆ್ಯಪ್ನಗರ

ಕಾವೇರಿ ವಿವಾದ; ಸ್ಟೇಡಿಯಂ ಒಳಗಡೆ ಕ್ರಿಕೆಟ್ ಹೊರಗಡೆ ಪ್ರತಿಭಟನಾಕಾರರ ಫೈಟ್!

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಕೇಂದ್ರ ಸರಕಾರ ವಿಳಂಬ ಧೋರಣೆ ತೋರುತ್ತಿರುವುದನ್ನು ವಿರೋಧಿಸಿ ಚೆನ್ನೈನ ಚಿಪಾಕ್‌ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಚಾಂಪಿಯನ್‌ಶಿಪ್ ಪಂದ್ಯದ ವೇಳೆ ವಿವಿಧ ಸಂಘಟನೆಗಳು ಭಾರಿ ಪ್ರತಿಭಟನೆಯನ್ನು ನಡೆಸಿದ್ದವು.

Vijaya Karnataka Web 10 Apr 2018, 11:07 pm
ಚೆನ್ನೈ: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಕೇಂದ್ರ ಸರಕಾರ ವಿಳಂಬ ಧೋರಣೆ ತೋರುತ್ತಿರುವುದನ್ನು ವಿರೋಧಿಸಿ ಚೆನ್ನೈನ ಚಿಪಾಕ್‌ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಚಾಂಪಿಯನ್‌ಶಿಪ್ ಪಂದ್ಯದ ವೇಳೆ ವಿವಿಧ ಸಂಘಟನೆಗಳು ಭಾರಿ ಪ್ರತಿಭಟನೆಯನ್ನು ನಡೆಸಿದ್ದವು.
Vijaya Karnataka Web cauvery-protest-02


ಪಂದ್ಯ ನಡೆಯುತ್ತಿರುವ ವೇಳೆ ಪ್ರತಿಭಟನೆಕಾರರು ಸಿಎಸ್‌ಕೆ ಅಭಿಮಾನಿಗಳಿಗೆ ಸ್ಟೇಡಿಯಂನೊಳಗೆ ಪ್ರವೇಶಿಸಿದಂತೆ ತಡೆಯೊಡ್ಡಲು ಪ್ರಯತ್ನಿಸಿದರು. ಸ್ಥಳದಲ್ಲಿ ಬಿಗು ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು.


ಪ್ರತಿಭಟನೆಕಾರನ್ನು ಚದುರಿಸಲು ಪಂದ್ಯ ಆರಂಭಕ್ಕೂ ಮುನ್ನ ಪೊಲೀಸ್ ಲಾಟಿ ಪ್ರಹಾರವನ್ನು ನಡೆಸಿದ್ದರು. ಸಿಎಸ್‌ಕೆ ಜರ್ಸಿ ಹಾಗೂ ಟಿಕೆಟ್‌ಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಈ ನಡುವೆ ಪ್ರತಿಭಟನೆಕಾರರ ನಡುವೆ ಸಿಲುಕಿದ್ದ ಧೋನಿ ಅಭಿಮಾನಿಯನ್ನು ಪೊಲೀಸರು ಸೂಕ್ತ ಭದ್ರತೆ ನೀಡಿ ಸ್ಟೇಡಿಯಂನೊಳಗೆ ಕರೆದೊಯ್ದರು.

ಮೈದಾನಕ್ಕೆ ಶೂ ಎಸೆತ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌