ಆ್ಯಪ್ನಗರ

MS Dhoni: ಟಿ20ಯಲ್ಲಿ 5000 ರನ್‌ ಗಳಿಸಿದ ಮೊದಲ ಕ್ಯಾಪ್ಟನ್‌ ಧೋನಿ

ಮಹೇಂದ್ರ ಸಿಂಗ್ ಧೋನಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 5000 ರನ್ ಗಳಿಸಿದ ಮೊದಲ ನಾಯಕ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ.

Times Now 26 Apr 2018, 5:32 pm
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಹಲವು ದಾಖಲೆಗಳೂ ಸೃಷ್ಟಿಯಾಗುತ್ತಿವೆ.
Vijaya Karnataka Web DHONI


ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯದಲ್ಲಿ ಸಿಎಸ್‌ಕೆ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಜೇಯ 70 ರನ್ ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಜತೆಗೆ ಪಂದ್ಯದ ಕೊನೆಯ ಹಂತದಲ್ಲಿ ಅವರ ಆಟ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಎಂದಿನ ಶೈಲಿಯಲ್ಲಿ ಫಿನಿಶಿಂಗ್ ಮಾಡಿರುವ ಧೋನಿ ಹೊಸತೊಂದು ದಾಖಲೆ ಸೃಷ್ಟಿಸಿದ್ದು, ಟ್ವೆಂಟಿ-20 ಕ್ರಿಕೆಟ್‌ನಲ್ಲಿ 5000 ರನ್‌ ಗಳಿಸಿದ ಮೊದಲ ಕ್ಯಾಪ್ಟನ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಒಡ್ಡಿದ 206 ರನ್‌ಗಳ ಬೃಹತ್‌ ಮೊತ್ತ ಬೆನ್ನತ್ತಿದ್ದ ಸಿಎಸ್‌ಕೆ, ಡ್ವೇನ್‌ ಬ್ರಾವೊ, ಅಂಬಾಟಿ ರಾಯುಡು ಹಾಗೂ ಧೋನಿ ಅವರ ಅಬ್ಬರದ ಆಟದಿಂದ ಸುಲಭ ಗೆಲುವನ್ನು ದಾಖಲಿಸಿತ್ತು. ಕೊನೆಯ ಹಂತದಲ್ಲಿ 13 ಎಸೆತಗಳಿಗೆ 33 ರನ್‌ ಬೇಕಾಗಿದ್ದು, ಧೋನಿ ಮತ್ತು ಬ್ರಾವೋ ಜತೆಯಾಟದ ಮೂಲಕ ಚೆನ್ನೈಗೆ ಗೆಲುವು ತಂದುಕೊಟ್ಟಿದ್ದರು.

ಈ ಪಂದ್ಯದಲ್ಲಿ 70 ರನ್ ಗಳಿಸುವ ಮೂಲಕ ಧೋನಿ ಚುಟುಕು ಕ್ರಿಕೆಟಿನಲ್ಲಿ ಕ್ಯಾಪ್ಟನ್ ಆಗಿ 5000 ರನ್ ಪೂರೈಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌