ಆ್ಯಪ್ನಗರ

ಧೋನಿ ಆಯ್ತು, ಈಗ ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿ

ಪ್ರಸಕ್ತ ಸಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಕಾಲಿಗೆ ಅಭಿಮಾನಿಗಳು ಬಿದ್ದಿರುವ ಸುದ್ದಿಯನ್ನು ನಾವು ಕೇಳಿರುತ್ತೇವೆ. ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಕಾಲಿಗೂ ಅಭಿಮಾನಿಯೊಬ್ಬ ಬಿದ್ದಿದ್ದಾನೆ.

Vijaya Karnataka Web 13 May 2018, 4:01 pm
ಹೊಸದಿಲ್ಲಿ: ಪ್ರಸಕ್ತ ಸಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಕಾಲಿಗೆ ಅಭಿಮಾನಿಗಳು ಬಿದ್ದಿರುವ ಸುದ್ದಿಯನ್ನು ನಾವು ಕೇಳಿರುತ್ತೇವೆ. ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಕಾಲಿಗೂ ಅಭಿಮಾನಿಯೊಬ್ಬ ಬಿದ್ದಿದ್ದಾನೆ.
Vijaya Karnataka Web virat-kohli-fan


ಶನಿವಾರ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ನಡೆದ ಪಂದ್ಯದ ನಡುವೆ ಅಭಿಮಾನಿಯೊಬ್ಬ ಭದ್ರತಾ ಪಡೆಯನ್ನು ಮುರಿದು ನೇರವಾಗಿ ಮೈದಾನಕ್ಕೆ ಓಡೋಡಿ ಬಂದು ವಿರಾಟ್ ಕಾಲಿಗೆ ಬಿದ್ದಿದ್ದಾನೆ.

A post shared by 🙈Virat Kohli🙈 (@extremely._.virat) on May 12, 2018 at 12:18pm PDT

ಬಳಿಕ ವಿರಾಟ್ ಕೊಹ್ಲಿ ಜತೆಗೆ ಸೆಲ್ಫಿಯನ್ನು ತೆಗೆದುಕೊಂಡಿದ್ದಾರೆ. ವಿರಾಟ್ ತವರೂರಿನಲ್ಲಿ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೂ ಭಾರಿ ಬೆಂಬಲವೂ ಕಂಡುಬಂದಿತ್ತು.

ಅಂದ ಹಾಗೆ ಡೆಲ್ಲಿ ವಿರುದ್ಧದ ಮಹತ್ವದ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಆರ್‌ಸಿಬಿ ಪ್ಲೇ-ಆಫ್ ಕನಸು ಜೀವಂತಾಗಿದೆ. ನಾಯಕ ಕೊಹ್ಲಿ ಜತೆಗೆ ಎಬಿಡಿ ವಿಲಿಯರ್ಸ್ ಅರ್ಧಶತಕಗಳನ್ನು ಬಾರಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌