ಆ್ಯಪ್ನಗರ

IPL 2022 ಟೂರ್ನಿಯಲ್ಲಿ ಆರ್‌ಸಿಬಿ ಟ್ರೋಫಿ ಗೆಲ್ಲಲು ಇರುವ 5 ಬಲವಾದ ಕಾರಣಗಳು!

ಬೆಂಗಳೂರು: ಕಳೆದ 14 ಆವೃತ್ತಿಗಳಲ್ಲಿ ಆಡಿ ಟ್ರೋಫಿ ಗೆಲ್ಲದೇ ಉಳಿದಿರುವ ಮೂರು ತಂಡಗಳ ಪೈಕಿ ಒಂದಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಫೇವರಿಟ್‌ ತಂಡವಾಗಿ ಹೊರಹೊಮ್ಮಿದೆ.

ಅಂದಹಾಗೆ 2016ರಲ್ಲೇ ಆರ್‌ಸಿಬಿ ತನ್ನ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳಬೇಕಿತ್ತು. ಲೀಗ್‌ ಹಂತದಲ್ಲಿಅಬ್ಬರಿಸಿ ಅಗ್ರಸ್ಥಾನದೊಂದಿಗೆ ಫೈನಲ್‌ ತಲುಪಿದ್ದ ಚಾಲೆಂಜರ್ಸ್‌, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಅಚ್ಚರಿಯ ಸೋಲುಂಡಿತ್ತು.

ಆದರೆ, ಐಪಿಎಲ್‌ 2022 ಟೂರ್ನಿಯಲ್ಲಿ ಚಾಲೆಂಜರ್ಸ್ ಟ್ರೋಫಿ ಗೆಲುವಿನ ಕಡೆಗೆ ಕಣ್ಣಿಟ್ಟಿದೆ. ಮೆಗಾ ಆಕ್ಷನ್‌ ಬಳಿಕ ಆರ್‌ಸಿಬಿ ತಂಡ ಸಾಧಾರಣ ಎಂಬಂತೆ ಕಂಡರೂ, ಅಂಗಣದಲ್ಲಿ ದಿಟ್ಟ ಪ್ರದರ್ಶನದೊಂದಿಗೆ ಟ್ರೋಫಿ ಗೆಲುವಿನ ಫೇವರಿಟ್‌ಗಳಲ್ಲಿ ಒಂದೆನಿಸಿಕೊಂಡಿದೆ.

ಐಪಿಎಲ್ 2022 ಟೂರ್ನಿಯ ಅಂಕಪಟ್ಟಿ

ಆಡಿದ 4 ಪಂದ್ಯಗಳ ಪೈಕಿ ಮೊದಲ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರು ಸೋಲುಂಡರೂ, ಬಳಿಕ ಹ್ಯಾಟ್ರಿಕ್‌ ಜಯದೊಂದಿಗೆ ಪುಟಿದೆದ್ದಿದೆ. ಫಾಫ್‌ ಡು'ಪ್ಲೆಸಿಸ್‌ ಸಾರಥ್ಯದ ಆರ್‌ಸಿಬಿ ಸದ್ಯ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದು, ಈ ಬಾರಿ ತಂಡ ಟ್ರೋಫಿ ಗೆಲ್ಲಲು ಇರುವ 5 ಬಲವಾದ ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.

Authored byವಿಜೇತ್ ಕುಮಾರ್ | Vijaya Karnataka Web 10 Apr 2022, 5:57 pm
ಬೆಂಗಳೂರು: ಕಳೆದ 14 ಆವೃತ್ತಿಗಳಲ್ಲಿ ಆಡಿ ಟ್ರೋಫಿ ಗೆಲ್ಲದೇ ಉಳಿದಿರುವ ಮೂರು ತಂಡಗಳ ಪೈಕಿ ಒಂದಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಫೇವರಿಟ್‌ ತಂಡವಾಗಿ ಹೊರಹೊಮ್ಮಿದೆ.
Vijaya Karnataka Web five reasons why royal challengers bangalore can lift their maiden indian premier league title in ipl 2022
IPL 2022 ಟೂರ್ನಿಯಲ್ಲಿ ಆರ್‌ಸಿಬಿ ಟ್ರೋಫಿ ಗೆಲ್ಲಲು ಇರುವ 5 ಬಲವಾದ ಕಾರಣಗಳು!


ಅಂದಹಾಗೆ 2016ರಲ್ಲೇ ಆರ್‌ಸಿಬಿ ತನ್ನ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳಬೇಕಿತ್ತು. ಲೀಗ್‌ ಹಂತದಲ್ಲಿಅಬ್ಬರಿಸಿ ಅಗ್ರಸ್ಥಾನದೊಂದಿಗೆ ಫೈನಲ್‌ ತಲುಪಿದ್ದ ಚಾಲೆಂಜರ್ಸ್‌, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಅಚ್ಚರಿಯ ಸೋಲುಂಡಿತ್ತು.

ಆದರೆ, ಐಪಿಎಲ್‌ 2022 ಟೂರ್ನಿಯಲ್ಲಿ ಚಾಲೆಂಜರ್ಸ್ ಟ್ರೋಫಿ ಗೆಲುವಿನ ಕಡೆಗೆ ಕಣ್ಣಿಟ್ಟಿದೆ. ಮೆಗಾ ಆಕ್ಷನ್‌ ಬಳಿಕ ಆರ್‌ಸಿಬಿ ತಂಡ ಸಾಧಾರಣ ಎಂಬಂತೆ ಕಂಡರೂ, ಅಂಗಣದಲ್ಲಿ ದಿಟ್ಟ ಪ್ರದರ್ಶನದೊಂದಿಗೆ ಟ್ರೋಫಿ ಗೆಲುವಿನ ಫೇವರಿಟ್‌ಗಳಲ್ಲಿ ಒಂದೆನಿಸಿಕೊಂಡಿದೆ.

ಐಪಿಎಲ್ 2022 ಟೂರ್ನಿಯ ಅಂಕಪಟ್ಟಿ

ಆಡಿದ 4 ಪಂದ್ಯಗಳ ಪೈಕಿ ಮೊದಲ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರು ಸೋಲುಂಡರೂ, ಬಳಿಕ ಹ್ಯಾಟ್ರಿಕ್‌ ಜಯದೊಂದಿಗೆ ಪುಟಿದೆದ್ದಿದೆ. ಫಾಫ್‌ ಡು'ಪ್ಲೆಸಿಸ್‌ ಸಾರಥ್ಯದ ಆರ್‌ಸಿಬಿ ಸದ್ಯ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದು, ಈ ಬಾರಿ ತಂಡ ಟ್ರೋಫಿ ಗೆಲ್ಲಲು ಇರುವ 5 ಬಲವಾದ ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.

​1. ಹೊಸ ಕ್ಯಾಪ್ಟನ್‌, ಹೊಸ ರಣತಂತ್ರ

ಆರ್‌ಸಿಬಿ ತಂಡವನ್ನು 2013ರಿಂದ ಮುನ್ನಡೆಸಿದ್ದ ವಿರಾಟ್‌ ಕೊಹ್ಲಿ, 2021ರ ಆವೃತ್ತಿ ಬಳಿಕ ತಮ್ಮ ಕ್ಯಾಪ್ಟನ್ಸಿಗೆ ವಿದಾಯ ಹೇಳಿದರು. ಇದೇ ಕಾರಣಕ್ಕೆ ಐಪಿಎಲ್ 2022 ಟೂರ್ನಿಯ ಮೆಗಾ ಆಕ್ಷನ್‌ನಲ್ಲಿ ತನ್ನ ಹೊಸ ಕ್ಯಾಪ್ಟನ್‌ ಸಲುವಾಗಿ ಆರ್‌ಸಿಬಿ, ದಕ್ಷಿಣ ಆಫ್ರಿಕಾದ ಮಾಜಿ ನಾಯಕ 37 ವರ್ಷದ ಫಾಫ್‌ ಡು'ಪ್ಲೆಸಿಸ್‌ ಅವರನ್ನು ಖರೀದಿ ಮಾಡಿತ್ತು. ದಕ್ಷಿಣ ಆಫ್ರಿಕಾ ಪರ 37 ಟಿ20-ಐ ಪಂದ್ಯಗಳಲ್ಲಿ ಕ್ಯಾಪ್ಟನ್ಸಿ ನಿಭಾಯಿಸಿರುವ ಫಾಫ್ 23 ಪಂದ್ಯಗಳನ್ನು ಗೆದ್ದುಕೊಟ್ಟ ದಾಖಲೆ ಹೊಂದಿದ್ದಾರೆ.

ಇದೀಗ ಫಾಫ್‌ ಸಾರಥ್ಯದಲ್ಲಿ ಆರ್‌ಸಿಬಿ ತಂಡ ಶುಭಾರಂಭ ಮಾಡಿದ್ದು ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದು ಬೀಗಿದೆ. ಮೊದಲ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರು 205 ರನ್‌ ಗಳಿಸಿಯೂ ಆರ್‌ಸಿಬಿ ಸೋತಿತ್ತು. ಆದರೆ, ಅದ್ಭುತ ಕಮ್‌ಬ್ಯಾಕ್‌ ಮಾಡುವ ಮೂಲಕ ಕೆಕೆಆರ್‌, ರಾಜಸ್ಥಾನ್‌ ರಾಯಲ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ನಂತಹ ಅಪಾಯಕಾರಿ ತಂಡಗಳಿಗೆ ಸೋಲುಣಿಸಿದೆ. ಹೊಸ ಕ್ಯಾಪ್ಟನ್‌ ಹೊಸ ರಣ ತಂತ್ರಗಳು ತಂಡಕ್ಕೆ ಯಸಸ್ಸಿನ ಹಾದಿಯಲ್ಲಿ ಮುನ್ನಡೆಯುವಂತೆ ಮಾಡಿದೆ.

​2. ಗುಣಮಟ್ಟದ ಬೌಲಿಂಗ್‌ ವಿಭಾಗ

ಪವರ್‌ ಪ್ಲೇ ಓವರ್‌ಗಳಲ್ಲಿ ಉತ್ತಮ ಆರಂಭ ಕೊಟ್ಟು, ಮತ್ತು ಸ್ಲಾಗ್‌ ಓವರ್‌ಗಳಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಬ್ರೇಕ್‌ ಹಾಕಬಲ್ಲ ಪರಿಣಾಮಕಾರಿ ಬೌಲರ್‌ಗಳು ಆರ್‌ಸಿಬಿ ತಂಡದಲ್ಲಿದ್ದಾರೆ. ಮೊಹಮ್ಮದ್ ಸಿರಾಜ್‌ ಮತ್ತು ಡೇವಿಡ್‌ ವಿಲ್ಲೀ ಪವರ್-ಪ್ಲೇ ಓವರ್‌ಗಳಲ್ಲಿ ಯಶಸ್ಸು ತರುತ್ತಿದ್ದರೆ, ಇನಿಂಗ್ಸ್‌ನ ಮಧ್ಯದ ಓವರ್‌ಗಳಲ್ಲಿ ಆಕಾಶ್‌ ದೀಪ್‌ ಸಿಂಗ್‌ ಮತ್ತು ಲೆಗ್‌ ಸ್ಪಿನ್ನರ್‌ ವಾನಿಂದು ಹಸರಂಗ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಬ್ಬಿಣದ ಕಡಲೆ ಆಗಿದ್ದಾರೆ.

ಕಳೆದ ಬಾರಿ 32 ವಿಕೆಟ್‌ ಕಿತ್ತು ಪರ್ಪಲ್‌ ಕ್ಯಾಪ್‌ ಗೆದ್ದ ಹರ್ಷಲ್‌ ಪಟೇಲ್‌, ಸ್ಲಾಗ್‌ ಓವರ್‌ಗಳಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಬ್ರೇಕ್‌ ಹಾಕುವ ಕೆಲಸವನ್ನು ಅದ್ಭುತವಾಗಿ ನಿಭಾಯಿಸುತ್ತಿದ್ದಾರೆ. ತಂಡಕ್ಕೆ ಜಾಶ್ ಹೇಝಲ್‌ವುಡ್‌ ಸೇರ್ಪಡೆ ಆದರೆ ಬೌಲಿಂಗ್ ವಿಭಾಗಕ್ಕೆ ಆನೆ ಬಲ ಸಿಕ್ಕಂತ್ತಾಗಲಿದೆ.

​3. ತಂಡಕ್ಕೆ ಫಿನಿಷರ್‌ ಬಲ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಈ ಬಾರಿ ದಿನೇಶ್‌ ಕಾರ್ತಿಕ್‌ ಆಪತ್ಬಾಂಧವನಂತೆ ಸಿಕ್ಕಿದ್ದಾರೆ. ತಂಡದಲ್ಲಿ ಫಿನಿಷರ್‌ ಕೆಲಸ ನಿಭಾಯಿಸುವ ಜವಾಬ್ದಾರಿ ಹೊತ್ತು ಅದ್ಭುತವಾಗಿ ಆಡಿರುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌, ಈವರೆಗಿನ ನಾಲ್ಕೂ ಪಂದ್ಯಗಳಲ್ಲಿ ನಾಟ್‌ಔಟ್‌ ಆಗಿ ಉಳಿದಿದ್ದಾರೆ. 210.86ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿರುವ ದಿನೇಶ್‌ ಕಾರ್ತಿಕ್‌, ನಾಲ್ಕು ಇನಿಂಗ್ಸ್‌ಗಳಿಂದ ಒಟ್ಟು 97 ರನ್‌ಗಳನ್ನು ಗಳಿಸಿದ್ದಾರೆ.

ಅದರಲ್ಲೂ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ 23 ಎಸೆತಗಳಲ್ಲಿ ಅಜೇಯ 44 ರನ್‌ ಸಿಡಿಸಿ ತಂಡಕ್ಕೆ ಭರ್ಜರಿ ಜಯ ತಂದರು. ಕಾರ್ತಿಕ್‌ ಇದೇ ರೀತಿ ಫಿನಿಷರ್ ಕೆಲಸವನ್ನು ಉತ್ತಮವಾಗಿ ನಿಭಾಯಿಸಿದ್ದೇ ಆದರೆ, ಚಾಲೆಂಜರ್ಸ್‌ ಅತ್ಯಂತ ಬಲಿಷ್ಠ ತಂಡವಾಗಿ ಹೊರಹೊಮ್ಮಲಿದೆ.

​4. ದೇಶಿ ಪ್ರತಿಭೆಗಳ ಅದ್ಭುತ ಆಟ

ತಂಡಕ್ಕೆ ಈ ಬಾರಿ ಕೆಲ ಹೊಸ ಆಟಗಾರರ ಆಗಮನವಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ಮಿಂಚಿದ್ದ ಆಟಗಾರರನ್ನು ಹರಾಜಿನಲ್ಲಿ ಆರ್‌ಸಿಬಿ ಖರೀದಿ ಮಾಡಿತ್ತು. ಫ್ರಾಂಚೈಸಿ ತಮ್ಮ ಮೇಲೆ ಇಟ್ಟಿರುವ ಭರವಸೆಗೆ ತಕ್ಕ ಆಟ ತಂದಿರುವ ಯುವ ಓಪನರ್‌ ಅನುಜ್‌ ರಾವತ್‌, ಆಲ್‌ರೌಂಡರ್‌ ಶಹಬಾಝ್‌ ಅಹ್ಮದ್‌ ಮತ್ತು ಆಕಾಶ್‌ ದೀಪ್‌ ಸಿಂಗ್‌ ತಂಡದ ಯಶಸ್ಸಿನಲ್ಲಿ ಮಹತ್ವದ ಕೊಡುಗೆ ಸಲ್ಲಿಸಿದ್ದಾರೆ.

ಎಡಗೈ ಓಪನರ್‌ ಅನುಜ್‌ ರಾವತ್‌ ತಂಡಕ್ಕೆ ಉತ್ತಮ ಆರಂಭ ಒದಗಿಸುವ ಕೆಲಸವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಅನುಜ್‌ 66 ರನ್‌ ಸಿಡಿಸಿ ತಂಡಕ್ಕೆ 7 ವಿಕೆಟ್‌ಗಳ ಜಯ ತಂದಿದ್ದರು. ಶಹಬಾಝ್‌ ಅಹ್ಮದ್‌ ತಂಡದ 3ಡಿ ಆಟಗಾರ ಆಗಿದ್ದು, ಬ್ಯಾಟಿಂಗ್‌, ಬೌಲಿಂಗ್ ಮತ್ತು ಫೀಲ್ಡಿಂಗ್‌ ಎಲ್ಲದರಲ್ಲೂ ಅಮೂಲ್ಯ ಕೊಡುಗೆ ಸಲ್ಲಿಸುತ್ತಿದ್ದಾರೆ. ವೇಗಿ ಆಕಾಶ್ ದೀಪ್‌ ಸಿಂಗ್‌ ತಮ್ಮ ನೇರ-ನಿಖರತೆಯ ಬೌಲಿಂಗ್‌ ಮೂಲಕ ಗಮನ ಸೆಳೆದಿದ್ದು, ಸಿರಾಜ್ ಮತ್ತು ಹರ್ಷಲ್‌ ಮೇಲಿನ ಹೊರೆ ಕಡಿಮೆ ಮಾಡಿದ್ದಾರೆ.

​5. ಅಗ್ರ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್‌

ಮೊದಲ ನಾಲ್ಕೂ ಪಂದ್ಯಗಳಲ್ಲಿ ಆರ್‌ಸಿಬಿ ಪರ ಅಗ್ರಕ್ರಮಾಂಕದ ಬ್ಯಾಟಿಂಗ್‌ ಅದ್ಭುತವಾಗಿ ಮೂಡಿ ಬಂದಿದೆ. ವಿರಾಟ್‌ ಕೊಹ್ಲಿ, ಫಾಫ್‌ ಡು'ಪ್ಲೆಸಿಸ್‌ ಮತ್ತು ಅನುಜ್‌ ರಾವತ್‌ ಸ್ಥಿರವಾಗಿ ರನ್‌ ಗಳಿಸುತ್ತಿದ್ದಾರೆ. ಈಗ ಗ್ಲೆನ್‌ ಮ್ಯಾಕ್ಸ್‌ವೆಲ್‌ ತಂಡ ಸೇರಿಕೊಂಡಿದ್ದು ಬ್ಯಾಟಿಂಗ್‌ ವಿಭಾಗದ ಬಲ ದುಪ್ಪಟ್ಟಾಗಿದೆ. ಕ್ಯಾಪ್ಟನ್ಸಿ ಒತ್ತಡ ಇಲ್ಲದ ಕಾರಣ 135.89ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸುತ್ತಿರುವ ಕೊಹ್ಲಿ ಒಟ್ಟಾರೆ 106 ರನ್‌ಗಳನ್ನು ಸಿಡಿಸಿದ್ದಾರೆ. ಚಾಲೆಂಜರ್ಸ್‌ ಇದೇ ಮಾದರಿಯಲ್ಲಿ ಸ್ಥಿರ ಪ್ರದರ್ಶಮನ ಕಾಯ್ದುಕೊಂಡಿದ್ದೇ ಆದರೆ, ಈ ಬಾರಿ ತನ್ನ ಚೊಚ್ಚಲ ಟ್ರೋಫಿ ಗೆಲುವಿನ ಕನಸನ್ನು ನನಸನ್ನಾಗಿಸಿಕೊಳ್ಳುವ ಎಲ್ಲಾ ಅವಕಾಶ ಹೊಂದಿದೆ.

ಚಿತ್ರಗಳ ಕೃಪೆ: ಬಿಸಿಸಿಐ/ಐಪಿಎಲ್

ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌