ಆ್ಯಪ್ನಗರ

ಸ್ಟಾರ್ ಆಟಗಾರ ಧೋನಿಯಿಂದ ಅಂಪೈರ್‌ ಮೇಲೆ ಒತ್ತಡ ತರುವ ಪ್ರಯತ್ನವೇ?

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನೋ ಬಾಲ್ ಪ್ರಕರಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಅಂಪೈರ್ ಜತೆ ವಾಗ್ವಾದಕ್ಕಿಳಿದಿರುವುದು ಸಾಕಷ್ಟು ವಿವಾದಕ್ಕೀಡು ಮಾಡಿದೆ.

Vijaya Karnataka Web 12 Apr 2019, 8:25 pm
ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಂಪೈರ್‌ಗಳ ಜತೆ ವಾಗ್ವಾದಕ್ಕಿಳಿದಿರುವುದು ಭಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
Vijaya Karnataka Web ms-dhoni-argument-01


ಅತಿ ಒತ್ತಡದ ಸನ್ನಿವೇಶದಲ್ಲಿ ಅಂಪೈರ್ ನೋ ಬಾಲ್ ನೀಡಿ ಬಳಿಕ ನಿರ್ಧಾರ ಬದಲಾಯಿಸಿದಾಗ ಮೈದಾನದೊಳಗೆ ಎಂಟ್ರಿ ಕೊಟ್ಟ ಧೋನಿ ಅಂಪೈರ್‌ಗಳ ಜತೆ ವಾಗ್ವಾದ ನಡೆಸಿದ್ದರು. ಪ್ರಸ್ತುತ ಪ್ರಕರಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.

ಈ ನಡುವೆ ಕ್ರಿಕೆಟ್ ವಿಶ್ಲೇಷಕರು ಮಾತ್ರ ಮಹೇಂದ್ರ ಸಿಂಗ್ ಧೋನಿರನ್ನು ಟೀಕೆಗೆ ಗುರಿಯಾಗಿರಿಸಿದ್ದಾರೆ. ಅಂಪೈರ್‌ಗಳು ಏನೇ ತಪ್ಪು ಮಾಡಿದರೂ ಧೋನಿ ಮೈದಾನಕ್ಕಿಳಿದು ಅಂಪೈರ್ ತೀರ್ಪನ್ನು ಪ್ರಶ್ನಿಸಿರುವುದು ಸರಿಯಾದ ಕ್ರಮವಲ್ಲ ಎಂದು ಟೀಕಿಸಿದ್ದಾರೆ.

ಸ್ಟಾರ್ ಆಟಗಾರರು ಅಂಪೈರ್‌ಗಳ ಮೇಲೆ ಒತ್ತಡ ತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸ್ಟ್ರೈಕರ್‌ನಲ್ಲಿರುವ ಅಂಪೈರ್‌‌ಗೆ ನೋ ಬಾಲ್ ನೀಡುವ ಅಧಿಕಾರವಿರುವುದಿಲ್ಲ. ಇದನ್ನು ಸ್ಕ್ವೇರ್ ಲೆಗ್ ಅಂಪೈರ್ ನಿರ್ಧರಿಸುತ್ತಾರೆ. ಹಾಗೆಯೇ ನೋ ಬಾಲ್ ನೀಡದ ಅಥವಾ ಬ್ಯಾಟ್ಸ್‌ಮನ್ ಔಟಾಗದೇ ಇರುವ ಹೊರತಾಗಿ ರಿಪ್ಲೇಗಾಗಿ ಥರ್ಡ್ ಅಂಪೈರ್ ಮೊರೆ ಹೋಗುವಂತಿಲ್ಲ. ಈ ಎಲ್ಲದರ ಹಿನ್ನಲೆಯಲ್ಲಿ ಧೋನಿ, ಅಂಪೈರ್‌ಗಳ ವಿರುದ್ಧ ವಾಗ್ವಾದಕ್ಕಿಳಿದು ಒತ್ತಡ ಸೃಷ್ಟಿ ಮಾಡುವ ಪ್ರಯತ್ನ ಮಾಡಿರುವುದು ನಿಜಕ್ಕೂ ಖಂಡನೀಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅತ್ತ ಧೋನಿ ಬೆಂಬಲಕ್ಕೆ ನಿಂತಿರುವ ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್, ಧೋನಿ ನೋ ಬಾಲ್ ವಾದವನ್ನು ಮಾಡಿರಲಿಲ್ಲ. ಅಂಪೈರ್‌ಗಳಿಂದ ಸ್ಪಷ್ಟನೆಯಷ್ಟೇ ಕೇಳಿದ್ದರು ಎಂದಿದ್ದಾರೆ.

ಒಟ್ಟಾರೆಯಾಗಿ ವಿಶ್ವ ಕ್ರಿಕೆಟ್‌ನ ಕೂಲ್ ಆಟಗಾರ ತಮ್ಮ ತಾಳ್ಮೆ ಕಳೆದುಕೊಂಡಿರುವುದು ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇದು ಐಪಿಎಲ್‌ನಲ್ಲಿ ನಾಯಕರಾಗಿ ಧೋನಿ ಅವರ 100ನೇ ಗೆಲುವಿನ ಪಂದ್ಯ ಆಗಿತ್ತು ಎಂಬುದು ಅಷ್ಟೇ ಮಹತ್ವದೆನಿಸಿಕೊಳ್ಳುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌