ಆ್ಯಪ್ನಗರ

ಧೋನಿ, ರೈನಾ ಪುತ್ರಿಯರ ಜುಗಲ್ಬಂದಿ!

ಕ್ರಿಕೆಟ್‌ ಮೈದಾನದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಮತ್ತು ಉಪನಾಯಕ ಸುರೇಶ್‌ ರೈನಾ ಅವರ ಜುಗಲ್ಬಂದಿ ಸಾಮಾನ್ಯ. ಇದೀಗ ಮೈದಾನದ ಹೊರಗೆ ಧೋನಿ ಮತ್ತು ರೈನಾ ಅವರ ಪುತ್ರಿಯರ ಜುಗಲ್ಬಂದಿಯ ಸರದಿ.

Vijaya Karnataka 27 Apr 2018, 6:59 pm
ಬೆಂಗಳೂರು: ಕ್ರಿಕೆಟ್‌ ಮೈದಾನದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಮತ್ತು ಉಪನಾಯಕ ಸುರೇಶ್‌ ರೈನಾ ಅವರ ಜುಗಲ್ಬಂದಿ ಸಾಮಾನ್ಯ. ಇದೀಗ ಮೈದಾನದ ಹೊರಗೆ ಧೋನಿ ಮತ್ತು ರೈನಾ ಅವರ ಪುತ್ರಿಯರ ಜುಗಲ್ಬಂದಿಯ ಸರದಿ.
Vijaya Karnataka Web suresh-raina-02


ಹೌದು. ಧೋನಿ ಅವರ ಪುತ್ರಿ ಜೀವಾ ಮತ್ತು ಸುರೇಶ್‌ ರೈನಾ ಅವರ ಪುತ್ರಿ ಗ್ರೇಸಿಯಾ, ಬೆಂಗಳೂರಿನಲ್ಲಿ ಸಿಎಸ್‌ಕೆ ತಂಡ ತಂಗಿದ್ದ ಹೋಟೆಲ್‌ನ ಕೊಠಡಿಯಲ್ಲಿ ಒಂದೇ ರೀತಿಯ ಐ-ಪಾಡ್‌ಗಳನ್ನು ಹಿಡಿದು ಕುತೂಹಲದಿಂದ ಏನನ್ನೋ ವೀಕ್ಷಿಸುತ್ತಿರುವ ಚಿತ್ರ ಗಮನ ಸೆಳೆಯುತ್ತಿದೆ.

ಈ ಚಿತ್ರವನ್ನು ಗುರುವಾರ ಟ್ವಿಟರ್‌ನಲ್ಲಿ ಪ್ರಕಟಿಸಿರುವ ಸುರೇಶ್‌ ರೈನಾ ''ಗ್ರೇಸಿಯಾ ಮತ್ತು ಜೀವಾ, ಕಳೆದ ರಾತ್ರಿಯ ಪಂದ್ಯದ ಹೈಲೈಟ್ಸ್‌ ವೀಕ್ಷಿಸುತ್ತಿರಬಹುದೇ?'' ಎಂದು ಬರೆದುಕೊಂಡಿದ್ದಾರೆ. ಬುಧವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ ತಂಡ, ರಾಯಲ್‌ ಚಾಲೆಂಜರ್ಸ್‌ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌