ಆ್ಯಪ್ನಗರ

ಬ್ರಾವೋ ಓವರ್‌ನಲ್ಲಿ 29 ರನ್ ಚಚ್ಚಿದ ಪಾಂಡ್ಯ-ಪೊಲಾರ್ಡ್

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ಡ್ವೇನ್ ಬ್ರಾವೋ ಓವರ್‌ವೊಂದರಲ್ಲೇ ಹಾರ್ದಿಕ್ ಪಾಂಡ್ಯ ಹಾಗೂ ಕೀರಾನ್ ಪೊಲಾರ್ಡ್ 29 ರನ್‌ಗಳನ್ನು ಚಚ್ಚಿದ್ದಾರೆ.

Vijaya Karnataka Web 3 Apr 2019, 10:45 pm
ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡೆತ್ ಬೌಲರ್ ಸ್ಪೆಷಲಿಷ್ಟ್ ಎಂದೇ ಡ್ವೇನ್ ಬ್ರಾವೋರನ್ನು ವಿಶ್ಲೇಷಿಸಲಾಗುತ್ತಿದೆ.
Vijaya Karnataka Web hardik-pandya-03


ಇದೇ ಕಾರಣಕ್ಕಾಗಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡಾ ಅತಿ ಹೆಚ್ಚು ನೆಚ್ಚಿಕೊಂಡಿದ್ದಾರೆ. ಡೆತ್ ಓವರ್‌ಗಳಲ್ಲಿ ಬ್ರಾವೋ ಅತಿ ಹೆಚ್ಚು ಯಶಸ್ಸನ್ನು ತಂದುಕೊಟ್ಟಿದ್ದಾರೆ.

ಮುಂಬಯಿನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲೂ ಬ್ರಾವೋ ಅವರಿಗೆ 12ನೇ ಓವರ್‌ ಬಳಿಕ ಕಣಕ್ಕಿಳಿಸಲಾಗಿತ್ತು. ಆದರೆ ಈ ಬಾರಿ ಧೋನಿ ಯೋಜನೆ ನಡೆಯಲಿಲ್ಲ.

ಬ್ರಾವೋ ಎಸೆದ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೀರಾನ್ ಪೊಲಾರ್ಡ್ 29 ರನ್ ಚಚ್ಚಿದರು. ಈ ಮೂಲಕ ಸವಾಲಿನ ಮೊತ್ತ ಪೇರಿಸಲು ನೆರವಾದರು.

ಪೊಲಾರ್ಡ್ ಒಂದು ಸಿಕ್ಸರ್ ಬಾರಿಸಿದರೆ ಪಾಂಡ್ಯ ಎರಡು ಸಿಕ್ಸ್ ಹಾಗೂ ಬೌಂಡರಿಯನ್ನು ಚಚ್ಚಿದರು. ಈ ಮೂಲಕ ಬ್ರಾವೋರನ್ನು ಸದ್ದಡಗಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌