ಆ್ಯಪ್ನಗರ

ಬೆಂಗಳೂರು ತಂಡವನ್ನು ಹೊರಗಟ್ಟಿದ 'ಶ್ರೇಯಸ್' ಕನ್ನಡಿಗನಿಗೆ!

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೊರಬಿದ್ದಿದೆ. ಇದರೊಂದಿಗೆ ಪ್ಲೇ-ಆಫ್ ಕನಸು ನೂಚ್ಚು ನೂರಾಗಿದೆ. ಆದರೆ ಕಾಕತಾಳೀಯವೆಂಬಂತೆ ಆರ್‌ಸಿಬಿ ಹೊರದಬ್ಬುವುದರಲ್ಲಿ ಕನ್ನಡಿಗನೊಬ್ಬನ ಪಾತ್ರ ಮಹತ್ವದೆನಿಸಿದೆ. ಅವರೇ ಶ್ರೇಯಸ್ ಗೋಪಾಲ್.

Vijaya Karnataka Web 19 May 2018, 9:43 pm
ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೊರಬಿದ್ದಿದೆ. ಇದರೊಂದಿಗೆ ಪ್ಲೇ-ಆಫ್ ಕನಸು ನೂಚ್ಚು ನೂರಾಗಿದೆ.
Vijaya Karnataka Web shreyas-gopal


ಆದರೆ ಕಾಕತಾಳೀಯವೆಂಬಂತೆ ಆರ್‌ಸಿಬಿ ಹೊರದಬ್ಬುವುದರಲ್ಲಿ ಕನ್ನಡಿಗನೊಬ್ಬನ ಪಾತ್ರ ಮಹತ್ವದೆನಿಸಿದೆ. ಅವರೇ ಶ್ರೇಯಸ್ ಗೋಪಾಲ್. ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಬೆಂಗಳೂರು 30 ರನ್ ಅಂತರದಲ್ಲಿ ಹೀನಾಯ ಸೋಲಿಗೊಳಗಾಗಿತ್ತು.

165 ರನ್‌ ಗುರಿ ಬೆನ್ನತ್ತಿದ್ದ ಆರ್‌ಸಿಬಿ ಒಂದು ಹಂತದಲ್ಲಿ 8.2 ಓವರ್‌ಗಳಲ್ಲಿ ಒಂದು ವಿಕೆಟ್ ಮಾತ್ರ ನಷ್ಟಕ್ಕೆ 75 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ ಬೆಂಗಳೂರಿನ ಯುವ ಪ್ರತಿಭಾವಂತ ಬೌಲರ್ ಶ್ರೇಯಸ್ ಗೋಪಾಲ್ ಮಾಂತ್ರಿಕ ದಾಳಿಗೆ ಸಿಲುಕಿದ ಆರ್‌ಸಿಬಿ 19.2 ಓವರ್‌ಗಳಲ್ಲಿ 134 ರನ್‌ಗಳಿಗೆ ಸರ್ವಪತನವನ್ನು ಕಂಡಿತ್ತು. ಅಂದರೆ ಕೊನೆಯ 59 ರನ್ ಗಳಿಸುವುದರೆಡೆಗೆ ಒಂಬತ್ತು ವಿಕೆಟುಗಳನ್ನು ಕಳೆದುಕೊಂಡು ಹೀನಾಯ ಸೋಲಿಗೆ ಗುರಿಯಾಗಿತ್ತು.

ಅಮೋಘ ದಾಳಿ ಸಂಘಟಿಸಿದ 24ರ ಹರೆಯದ ಶ್ರೇಯಸ್ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 16 ರನ್ ನೀಡಿ ಪ್ರಮುಖ ನಾಲ್ಕು ವಿಕೆಟುಗಳನ್ನು ಕಬಳಿಸಿ ಮಿಂಚಿದ್ದರು. ಇದರಲ್ಲಿ ಅಪಾಯಕಾರಿ ಎಬಿಡಿ ವಿಲಿಯರ್ಸ್ (53) ಸಹ ಸೇರಿದ್ದವು.

ಈ ಮೊದಲು ನಾಯಕ ವಿರಾಟ್ ಕೊಹ್ಲಿ (4) ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಮಗದೊಬ್ಬ ಕನ್ನಡಿಗ ಕೃಷ್ಣಪ್ಪ ಗೌತಮ್, ಆರ್‌ಸಿಬಿ ಪತನಕ್ಕೆ ಮುನ್ನುಡಿ ಬರೆದಿದ್ದರು. ಅಲ್ಲದೆ ಬ್ಯಾಟಿಂಗ್‌ನಲ್ಲೂ ಮಿಂಚಿದ ಗೌತಮ್ ಕೇವಲ ಐದು ಎಸೆತಗಳಲ್ಲಿ ಎರಡು ಸಿಕ್ಸರ್ ನೆರವಿನಿಂದ 14 ರನ್ ಗಳಿಸಿದ್ದರು.

ಒಟ್ಟಿನಲ್ಲಿ ಪ್ರತಿ ವರ್ಷವೂ ಹರಾಜಿನಲ್ಲಿ ಕನ್ನಡಿಗರನ್ನು ಖರೀದಿಸಲು ಹಿಂದೇಟು ಹಾಕುತ್ತಿರುವ ಆರ್‌ಸಿಬಿ ಫ್ರಾಂಚೈಸಿಗೆ ಕನ್ನಡಿಗರಿಂದಲೇ ತಿರುಗೇಟು ಬಿದ್ದತಾಂಗಿದೆ. ಇವೆಲ್ಲದರಿಂದ ಕಪ್ ಆಸೆಯೂ ಭಗ್ನಗೊಂಡಿದೆ.

ಇವೆಲ್ಲದರ ನಡುವೆ ಇನ್ನು ಮುಂದೆಯಾದರೂ ತಪ್ಪನ್ನು ತಿದ್ದಿಕೊಂಡು ಕನ್ನಡಿಗರ ಸಾಮರ್ಥ್ಯವನ್ನು ಅರಿತು ಅವಕಾಶ ನೀಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌