ಆ್ಯಪ್ನಗರ

ಚೆನ್ನೈ ಸಿಕ್ರೇಟ್ ಕೋಡ್ ಹ್ಯಾಕ್ ಮಾಡುವುದೇ ಡೆಲ್ಲಿ?

ಇಂಡಿಯನ್ ಪ್ರೀಮಿಯರ್ ಲೀಗ್ 12ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಶುಕ್ರವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಸವಾಲನ್ನು ಎದುರಿಸಲಿದೆ.

Vijaya Karnataka Web 9 May 2019, 4:13 pm
ವಿಶಾಖಪಟ್ಟಣ: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಶುಕ್ರವಾರ ನಡೆಯಲಿರುವ ಪ್ಲೇ-ಆಫ್ ಹಂತದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸವಾಲನ್ನು ಎದುರಿಸಲಿದೆ.
Vijaya Karnataka Web dhoni-pant


ಇಲ್ಲಿ ಗೆದ್ದ ತಂಡವು ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ. ಈಗಾಗಲೇ ಮೊದಲ ಕ್ವಾಲಿಫೈಯರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿರುವ ಮುಂಬೈ ಇಂಡಿಯನ್ಸ್ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಅಂದ ಹಾಗೆ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಾಕೌಟ್ ಪಂದ್ಯವನ್ನು ಗೆದ್ದಿರುವ ಡೆಲ್ಲಿ, ಚೊಚ್ಚಲ ಫೈನಲ್ ಎದುರು ನೋಡುತ್ತಿದೆ. ಅತ್ತ ಮೂರು ಬಾರಿಯ ಚಾಂಪಿಯನ್ ಚೆನ್ನೈ ಎಂಟನೇ ಬಾರಿಗೆ ಫೈನಲ್ ಪ್ರವೇಶವನ್ನು ಗುರಿ ಮಾಡುತ್ತಿದೆ.

ಯುವ ಹಾಗೂ ಅನುಭವಿ ಆಟಗಾರರ ನಡುವಣ ಕದನ ಎಂದು ಸಹ ಈ ಪಂದ್ಯವನ್ನು ವಿಶ್ಲೇಷಿಸಲಾಗುತ್ತಿದೆ. ಯಾಕೆಂದರೆ ಚೆನ್ನೈ ತಂಡದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಂದ ಹಿಡಿದು ಸುರೇಶ್ ರೈನಾ, ಫಾಫ್ ಡು ಪ್ಲೆಸ್ಸಿಸ್, ಅಂಬಟಿ ರಾಯುಡು, ಶೇನ್ ವಾಟ್ಸನ್, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಇಮ್ರಾನ್ ತಾಹೀರ್, ಹರ್ಭಜನ್ ಸಿಂಗ್ ಹೀಗೆ ಅನುಭವಿ ಆಟಗಾರರ ಮಹಾ ಪಡೆಯನ್ನೇ ಹೊಂದಿದೆ.

ಇನ್ನೊಂದೆಡೆ ಡೆಲ್ಲಿ ತಂಡವನ್ನು ಯುವ ನಾಯಕ ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದು, ಉದಯೋನ್ಮುಖ ಆಟಗಾರರಾದ ಪೃಥ್ವಿ ಶಾ, ರಿಷಬ್ ಪಂತ್, ಅಕ್ಷರ್ ಪಟೇಲ್ ಮುಂತಾದ ಆಟಗಾರರಿಂದ ಕೂಡಿದೆ. ಇನ್ನು ಶಿಖರ್ ಧವನ್, ಇಶಾಂತ್ ಶರ್ಮಾ ಹಾಗೂ ಅಮಿತ್ ಮಿಶ್ರಾ ತಂಡದ ಆಧಾರ ಸ್ತಂಭವಾಗಲಿದ್ದಾರೆ.

ಒಟ್ಟಿನಲ್ಲಿ ಹೆಸರು ಬದಲಾವಣೆಯ ಬಳಿಕ ಡೆಲ್ಲಿ ಅದೃಷ್ಟವು ಬದಲಾಗಿದೆ. ಅಲ್ಲದೆ ಮಗದೊಂದು ರೋಚಕ ಕದನವನ್ನು ನಿರೀಕ್ಷಿಸಲಾಗುತ್ತಿದೆ.

ಪಂದ್ಯಾರಂಭ: ರಾತ್ರಿ 7.30ಕ್ಕೆ ಸರಿಯಾಗಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌