ಆ್ಯಪ್ನಗರ

'ಆರ್‌ಸಿಬಿ ವೈಫಲ್ಯಕ್ಕೆ ವಿರಾಟ್‌ ಕೊಹ್ಲಿ ಒಬ್ಬರೇ ಕಾರಣರಲ್ಲ' : ಯೂಟರ್ನ್‌ ಹೊಡೆದ ಪಾರ್ಥಿವ್‌ ಪಟೇಲ್‌!

ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವೈಫಲ್ಯಕ್ಕೆ ನಾಯಕ ವಿರಾಟ್‌ ಕೊಹ್ಲಿ ಒಬ್ಬರನ್ನೇ ದೂರುವುದು ತಪ್ಪು ಎಂದು ಸಹ ಆಟಗಾರ ಪಾರ್ಥಿವ್ ಪಟೇಲ್‌ ಹೇಳಿದ್ದಾರೆ.

Vijaya Karnataka Web 28 Nov 2020, 3:23 pm

ಹೈಲೈಟ್ಸ್‌:

  • ವಿರಾಟ್‌ ಕೊಹ್ಲಿ ಪರ ಬ್ಯಾಟ್‌ ಬೀಸಿದ ಪಾರ್ಥಿವ್‌ ಪಟೇಲ್‌
  • ಆರ್‌ಸಿಬಿ ಸೋಲಿಗೆ ಕೊಹ್ಲಿ ಒಬ್ಬರೇ ಜವಾಬ್ದಾರರಲ್ಲ
  • ಬೆಂಗಳೂರು ಸೋಲಿನಲ್ಲಿ ಎಲ್ಲರ ಪಾತ್ರವಿದೆ: ಪಟೇಲ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Kohli patel
ಕೊಹ್ಲಿ-ಪಟೇಲ್‌ (ಚಿತ್ರ: ಟಿಒಐ)
ಹೊಸದಿಲ್ಲಿ: ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವೈಫಲ್ಯ ಅನುಭವಿಸಿದ ಬೆನ್ನಲ್ಲೆ ನಾಯಕ ವಿರಾಟ್‌ ಕೊಹ್ಲಿ ಬಗ್ಗೆ ಹಲವು ಕಡೆಗಳಿಂದ ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೆ, ಟೀಮ್‌ ಇಂಡಿಯಾ ಟಿ20 ತಂಡದ ನಾಯಕತ್ವವನ್ನು ರೋಹಿತ್‌ ಶರ್ಮಾಗೆ ನೀಡಬೇಕೆಂಬ ಮಾತುಗಳು ಕೇಳಿ ಬಂದಿದ್ದವು.
ಆರ್‌ಸಿಬಿ ಐಪಿಎಲ್‌ ಟೂರ್ನಿಯಲ್ಲಿ ಎಲಿಮಿನೇಟರ್‌ ಪಂದ್ಯದಲ್ಲಿ ಸೋತ ಬೆನ್ನಲ್ಲೆ, ವಿರಾಟ್‌ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗೆ ಇಳಿಸಿ, ರೋಹಿತ್‌ ಶರ್ಮಾಗೆ ಆರ್‌ಸಿಬಿ ನಾಯಕತ್ವ ನೀಡಿ ಎಂದು ಅಭಿಮಾನಿಗಳು ಆಗ್ರಹಿಸಿದ್ದರು. ಅಭಿಮಾನಿಗಳಲ್ಲದೆ ಮಾಜಿ ಕ್ರಿಕೆಟಿಗರು ಕೂಡ ಈ ಮಾತನ್ನೇ ಹೇಳಿದ್ದರು.

ಸ್ಟಾರ್‌ ಸ್ಪೋರ್ಟ್ಸ್‌ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಪಾರ್ಥಿವ್‌ ಪಟೇಲ್‌, ಕೊಹ್ಲಿಗಿಂತ ರೋಹಿತ್‌ ಶರ್ಮಾ ಉತ್ತಮ ಎಂದಿದ್ದರು. ಆದರೆ, ಇದೀಗ 2020ರ ಐಪಿಎಲ್‌ ಟೂರ್ನಿಯಲ್ಲಿ ಬೆಂಗಳೂರು ಫ್ರಾಂಚೈಸಿ ಸೋಲಲು ವಿರಾಟ್‌ ಕೊಹ್ಲಿ ಒಬ್ಬರೇ ಕಾರಣರಲ್ಲ ಎಂದು ಹೇಳಿದ್ದಾರೆ.

'ಆರ್‌ಸಿಬಿ ತಂಡದಲ್ಲಿ ಮುಂದಿನ ಐಪಿಎಲ್‌ಗೆ ಚಾನ್ಸ್‌ ಇದೆಯೇ.?' : ಫುಟ್ಬಾಲ್ ಸ್ಟಾರ್‌ ಹ್ಯಾರಿ ಕೇನ್‌ ಟ್ವೀಟ್‌ಗೆ ಕೊಹ್ಲಿ ಪ್ರತಿಕ್ರಿಯೆ ಹೀಗಿದೆ..

ಇದೇ ವಿಷಯ ಸಂಬಂಧ ಭಾರತ ತಂಡದ ಮಾಜಿ ಆರಂಭಿಕರಾದ ವಿರೇಂದ್ರ ಸೆಹ್ವಾಗ್‌ ಹಾಗೂ ಗೌತಮ್‌ ಗಂಭೀರ್‌ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ವಿರಾಟ್‌ ಕೊಹ್ಲಿಯನ್ನು ನಾಯಕತ್ವದಿಂದ ಮುಂದುವರಿಸಿ ಎಂದು ಸೆಹ್ವಾಗ್‌ ಹೇಳಿದರೆ, ನಾಯಕತ್ವದಿಂದ ತೆಗೆದುಹಾಕಿ ಎಂದು ಗಂಭೀರ್‌ ಆಗ್ರಹಿಸಿದ್ದರು.

ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಹಲವು ವರ್ಷಗಳ ಕಾಲ ಆಡಿರುವ ಪಾರ್ಥಿವ್‌ ಪಟೇಲ್‌, ಕೊಹ್ಲಿಯನ್ನು ನಾಯಕತ್ವದಿಂದ ಮುಂದುವರಿಸುವುದು ಅಥವಾ ಬಿಡುವುದು ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಬಿಟ್ಟ ನಿರ್ಧಾರ ಎಂದು ಹೇಳುವ ಮೂಲಕ ಗಂಭೀರ್‌ ಹಾಗೂ ಸೆಹ್ವಾಗ್‌ ಅವರ ಅಭಿಪ್ರಾಯಗಳಿಗೆ ವಿರುದ್ಧವಾದ ನಿಲುವನ್ನು ತಾಳಿದರು.

IND vs AUS : ಆಸ್ಟ್ರೇಲಿಯಾ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ!

"ನಮ್ಮಲ್ಲಿದ್ದ ತಂಡ ಐಪಿಎಲ್‌ ಟ್ರೋಫಿ ಗೆಲ್ಲಲಿದೆ ಎಂದು ನಾನು ವೈಯಕ್ತಿಕವಾಗಿ ಭಾವಿಸಿದ್ದೆ. ಶಿಬಿರದ ಎಲ್ಲರೂ ಇದೇ ಅಭಿಪ್ರಾಯವನ್ನು ಹೊಂದಿದ್ದರು. ಅದರಂತೆ ತಂಡದ ಎಲ್ಲಾ ವಿಭಾಗಗಳು ಉತ್ತಮವಾಗಿಯೇ ಇತ್ತು. ಕೆಲವೊಮ್ಮೆ ಪ್ಲೇಆಫ್ಸ್‌ ಪಂದ್ಯಗಳು ಅಂದುಕೊಂಡಂತೆ ಸಾಗುವುದಿಲ್ಲ. ಎಲಿಮಿನೇಟರ್‌ ಪಂದ್ಯದಲ್ಲಿ 130 ರನ್‌ಗಳನ್ನು ಗಳಿಸಿದ್ದರೂ ನಾವು ತುಂಬಾ ಕ್ಲೋಸ್ ಆಗಿ ಬಂದಿದ್ದೆವು. ಆದರೆ, ಸೋಲಿನ ಬಗ್ಗೆ ನಾಯಕ ಕೊಹ್ಲಿಯನ್ನೇ ದೂರುವುದು ತಪ್ಪು. ಸೋಲಿನಲ್ಲಿ, ಆಟಗಾರರು, ಡೈರೆಕ್ಟರ್‌, ಹೆಡ್‌ ಕೋಚ್‌ ಸೇರಿದಂತೆ ಎಲ್ಲರ ಪಾತ್ರವೂ ಇರುತ್ತದೆ. ನಾಯಕನೊಬ್ಬನನ್ನೇ ದೂರುವುದು ಸರಿಯಲ್ಲ," ಎಂದು ಪಾರ್ಥಿವ್‌ ಪಟೇಲ್‌ ತಿಳಿಸಿದರು.

"ಆರ್‌ಸಿಬಿ ಸೋಲಿಗೆ ವಿರಾಟ್‌ ಕೊಹ್ಲಿ ಒಬ್ಬರೇ ಹೊಣೆಯಲ್ಲ. ಇದರಲ್ಲಿ ಮೈಕ್‌ ಹೇಸನ್, ಸೈಮನ್‌ ಕ್ಯಾಟಿಚ್‌ ಅವರ ಪಾತ್ರವೂ ಇರುತ್ತದೆ. ಇದರಲ್ಲಿ ಒಂದೇ ಒಂದು ಅಂಶ ಸೋಲಿಗೆ ಕಾರಣವಲ್ಲ. ಹಾಗಾಗಿ, ವಿರಾಟ್‌ ಕೊಹ್ಲಿ ಒಬ್ಬರೇ ಆರ್‌ಸಿಬಿ ವೈಫಲ್ಯಕ್ಕೆ ಕಾರಣ ಎಂದು ನಾನು ಭಾವಿಸುವುದಿಲ್ಲ," ಎಂದು ಪಾರ್ಥಿವ್‌ ಪಟೇಲ್‌ ಖಡಕ್‌ಗೆ ಆಗಿ ಹೇಳಿದರು.

ದೀರ್ಘಾವಧಿ ಬೌಲಿಂಗ್‌ ಮಾಡದ ಬಗ್ಗೆ ಕೊನೆಗೂ ಮೌನ ಮುರಿದ ಹಾರ್ದಿಕ್‌ ಪಾಂಡ್ಯ!

ಮುಂದಿನ ಲೇಖನ

ಟ್ರೆಂಡಿಂಗ್‌