ಆ್ಯಪ್ನಗರ

IPL 2021: ಚೆನ್ನೈ ಸೂಪರ್‌ ಕಿಂಗ್ಸ್‌ಗೆ 4ನೇ ಐಪಿಎಲ್ ಗರಿ! ಪ್ರಶಸ್ತಿ ವಿವರ ಇಂತಿದೆ..

ದುಬೈ(ಯುಎಇ): ಫಾಫ್ ಡು'ಪ್ಲೆಸಿಸ್‌ (86) ಅಬ್ಬರದ ಬ್ಯಾಟಿಂಗ್ ಹಾಗೂ ಶಾರ್ದಲ್ ಠಾಕೂರ್‌(38ಕ್ಕೆ 3 ) ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್ 2021ರ ಇಂಡಿಯನ್‌ ಪ್ರೀಮಿಯರ್ ಲೀಗ್‌ ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ 27 ರನ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ನಾಲ್ಕನೇ ಬಾರಿ ಎಂಎಸ್‌ ಧೋನಿ ನಾಯಕತ್ವದ ಸಿಎಸ್‌ಕೆ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿತು.

ಕಳೆದ 2020ರ ಐಪಿಎಲ್‌ ಟೂರ್ನಿಯಲ್ಲಿ ಅತ್ಯಂತ ಹೀನಾಯ ಪ್ರದರ್ಶನ ತೋರುವ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ್ದ ಸಿಎಸ್‌ಕೆ, ಈ ಬಾರಿ ಫೈನಲ್‌ ಹಣಾಹಣಿಯಲ್ಲಿ ಕೆಕೆಆರ್‌ ತಂಡವನ್ನು ಮಣಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಆದರೆ, ಯುಎಇ ಚರಣದಲ್ಲಿ ಭರ್ಜರಿ ಕಮ್‌ಬ್ಯಾಕ್‌ ಮಾಡಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ತಮಗಿಂತ ಮೇಲಿನ ಕ್ರಮಾಂಕದ ತಂಡಗಳನ್ನು ಮಣಿಸಿದ್ದ ಕೆಕೆಆರ್‌ನ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಯಿತು.

ಸಿಎಸ್‌ಕೆ ನೀಡಿದ್ದ 193 ರನ್‌ ಗುರಿ ಹಿಂಬಾಲಿಸಿದ್ದ ಕೋಲ್ಕತಾ ನೈಟ್‌ ರೈಡರ್ಸ್ ತಂಡಕ್ಕೆ ಆರಂಭಿಕರಾದ ಶುಭಮನ್‌ ಗಿಲ್ ಹಾಗೂ ವೆಂಕಟೇಶ್‌ ಅಯ್ಯರ್‌ ಮುರಿಯದ ಮೊದಲನೇ ವಿಕೆಟ್‌ಗೆ 91 ರನ್‌ ಗಳಿಸಿದ್ದರು. ಆ ಮೂಲಕ ತಂಡಕ್ಕೆ ಭರ್ಜರಿ ಆರಂಭ ತಂದುಕೊಟ್ಟಿದ್ದರು. ಆದರೆ, 11ನೇ ಓವರ್‌ನಲ್ಲಿ ಶಾರ್ದುಲ್‌ ಠಾಕೂರ್‌, ವೆಂಕಟೇಶ್‌ ಅಯ್ಯರ್‌(50) ಹಾಗೂ ನಿತೀಶ್‌ ರಾಣಾ(0) ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ಸಿಎಸ್‌ಕೆಗೆ ಕಮ್‌ಬ್ಯಾಕ್‌ ಮಾಡಲು ನೆರವಾದರು.

ಒಂದು ಹಂತದಲ್ಲಿ 11 ಓವರ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು 93 ರನ್‌ ಗಳಿಸಿದ್ದ ಕೋಲ್ಕತಾ, ನಂತರ ಕೇವಲ 32 ರನ್‌ಗಳ ಅಂತರದಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಶುಭಮನ್‌ ಗಿಲ್‌ 51 ರನ್‌) ಹಾಗೂ ವೆಂಕಟೇಶ್‌ ಅಯ್ಯರ್‌(50) ಅವರನ್ನು ಬಿಟ್ಟರೆ, ಸುನೀಲ್‌ ನರೈನ್‌(2), ದಿನೇಶ್‌ ಕಾರ್ತಿಕ್‌(9), ಶಕಿಬ್‌ ಅಲ್‌ ಹಸನ್‌(0), ರಾಹುಲ್‌ ತ್ರಿಪಾಠಿ(2) ಹಾಗೂ ಐಯಾನ್‌ ಮಾರ್ಗನ್‌(4) ಎರಡಂಕಿ ವೈಯಕ್ತಿಕ ಮೊತ್ತ ದಾಖಲಿಸುವಲ್ಲಿ ವಿಫಲರಾದರು. ಕೊನೆಯಲ್ಲಿ ಶಿವಮ್‌ ಮಾವಿ(20) ಹಾಗೂ ಲಾಕಿ ಫರ್ಗ್ಯೂಸನ್‌ (18*) ಮಿಂಚಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

ಸಿಎಸ್‌ಕೆ ಪರ ಅತ್ಯುತ್ತಮ ಬೌಲ್ ಮಾಡಿದ ಶಾರ್ದುಲ್‌ ಠಾಕೂರ್‌ 3 ವಿಕೆಟ್‌ ಪಡೆದರೆ, ಜಾಶ್‌ ಹೇಝಲ್‌ವುಡ್‌ ಮತ್ತು ರವೀಂದ್ರ ಜಡೇಜಾ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದರು.

Curated byರಮೇಶ ಕೋಟೆ | Vijaya Karnataka Web 16 Oct 2021, 8:42 am
ದುಬೈ(ಯುಎಇ): ಫಾಫ್ ಡು'ಪ್ಲೆಸಿಸ್‌ (86) ಅಬ್ಬರದ ಬ್ಯಾಟಿಂಗ್ ಹಾಗೂ ಶಾರ್ದಲ್ ಠಾಕೂರ್‌(38ಕ್ಕೆ 3 ) ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್ 2021ರ ಇಂಡಿಯನ್‌ ಪ್ರೀಮಿಯರ್ ಲೀಗ್‌ ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ 27 ರನ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ನಾಲ್ಕನೇ ಬಾರಿ ಎಂಎಸ್‌ ಧೋನಿ ನಾಯಕತ್ವದ ಸಿಎಸ್‌ಕೆ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿತು.
Vijaya Karnataka Web ipl 2021 final chennai super kings won by 27 runs against kolkata knight riders and lift 4th ipl trophy
IPL 2021: ಚೆನ್ನೈ ಸೂಪರ್‌ ಕಿಂಗ್ಸ್‌ಗೆ 4ನೇ ಐಪಿಎಲ್ ಗರಿ! ಪ್ರಶಸ್ತಿ ವಿವರ ಇಂತಿದೆ..

ಕಳೆದ 2020ರ ಐಪಿಎಲ್‌ ಟೂರ್ನಿಯಲ್ಲಿ ಅತ್ಯಂತ ಹೀನಾಯ ಪ್ರದರ್ಶನ ತೋರುವ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ್ದ ಸಿಎಸ್‌ಕೆ, ಈ ಬಾರಿ ಫೈನಲ್‌ ಹಣಾಹಣಿಯಲ್ಲಿ ಕೆಕೆಆರ್‌ ತಂಡವನ್ನು ಮಣಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಆದರೆ, ಯುಎಇ ಚರಣದಲ್ಲಿ ಭರ್ಜರಿ ಕಮ್‌ಬ್ಯಾಕ್‌ ಮಾಡಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ತಮಗಿಂತ ಮೇಲಿನ ಕ್ರಮಾಂಕದ ತಂಡಗಳನ್ನು ಮಣಿಸಿದ್ದ ಕೆಕೆಆರ್‌ನ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಯಿತು.

ಸಿಎಸ್‌ಕೆ ನೀಡಿದ್ದ 193 ರನ್‌ ಗುರಿ ಹಿಂಬಾಲಿಸಿದ್ದ ಕೋಲ್ಕತಾ ನೈಟ್‌ ರೈಡರ್ಸ್ ತಂಡಕ್ಕೆ ಆರಂಭಿಕರಾದ ಶುಭಮನ್‌ ಗಿಲ್ ಹಾಗೂ ವೆಂಕಟೇಶ್‌ ಅಯ್ಯರ್‌ ಮುರಿಯದ ಮೊದಲನೇ ವಿಕೆಟ್‌ಗೆ 91 ರನ್‌ ಗಳಿಸಿದ್ದರು. ಆ ಮೂಲಕ ತಂಡಕ್ಕೆ ಭರ್ಜರಿ ಆರಂಭ ತಂದುಕೊಟ್ಟಿದ್ದರು. ಆದರೆ, 11ನೇ ಓವರ್‌ನಲ್ಲಿ ಶಾರ್ದುಲ್‌ ಠಾಕೂರ್‌, ವೆಂಕಟೇಶ್‌ ಅಯ್ಯರ್‌(50) ಹಾಗೂ ನಿತೀಶ್‌ ರಾಣಾ(0) ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ಸಿಎಸ್‌ಕೆಗೆ ಕಮ್‌ಬ್ಯಾಕ್‌ ಮಾಡಲು ನೆರವಾದರು.

ಒಂದು ಹಂತದಲ್ಲಿ 11 ಓವರ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು 93 ರನ್‌ ಗಳಿಸಿದ್ದ ಕೋಲ್ಕತಾ, ನಂತರ ಕೇವಲ 32 ರನ್‌ಗಳ ಅಂತರದಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಶುಭಮನ್‌ ಗಿಲ್‌ 51 ರನ್‌) ಹಾಗೂ ವೆಂಕಟೇಶ್‌ ಅಯ್ಯರ್‌(50) ಅವರನ್ನು ಬಿಟ್ಟರೆ, ಸುನೀಲ್‌ ನರೈನ್‌(2), ದಿನೇಶ್‌ ಕಾರ್ತಿಕ್‌(9), ಶಕಿಬ್‌ ಅಲ್‌ ಹಸನ್‌(0), ರಾಹುಲ್‌ ತ್ರಿಪಾಠಿ(2) ಹಾಗೂ ಐಯಾನ್‌ ಮಾರ್ಗನ್‌(4) ಎರಡಂಕಿ ವೈಯಕ್ತಿಕ ಮೊತ್ತ ದಾಖಲಿಸುವಲ್ಲಿ ವಿಫಲರಾದರು. ಕೊನೆಯಲ್ಲಿ ಶಿವಮ್‌ ಮಾವಿ(20) ಹಾಗೂ ಲಾಕಿ ಫರ್ಗ್ಯೂಸನ್‌ (18*) ಮಿಂಚಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

ಸಿಎಸ್‌ಕೆ ಪರ ಅತ್ಯುತ್ತಮ ಬೌಲ್ ಮಾಡಿದ ಶಾರ್ದುಲ್‌ ಠಾಕೂರ್‌ 3 ವಿಕೆಟ್‌ ಪಡೆದರೆ, ಜಾಶ್‌ ಹೇಝಲ್‌ವುಡ್‌ ಮತ್ತು ರವೀಂದ್ರ ಜಡೇಜಾ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದರು.

ಕೆಕೆಆರ್‌ಗೆ 193 ರನ್‌ ಗುರಿ ನೀಡಿದ್ದ ಸಿಎಸ್‌ಕೆ

ಇದಕ್ಕೂ ಮುನ್ನ ಫಾಫ್‌ ಡು'ಪ್ಲೆಸಿಸ್‌( 86 ರನ್‌)ಬ್ಯಾಟಿಂಗ್‌ ಅಬ್ಬರದ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನ ಪಾಲಿನ 20 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 192 ರನ್‌ ಗಳಿಸಿದ್ದು, ಕೋಲ್ಕತಾ ನೈಟ್‌ ರೈಡರ್ಸ್‌ಗೆ 193 ರನ್‌ ಕಠಿಣ ಗುರಿ ನೀಡುವಲ್ಲಿ ಯಶಸ್ವಿಯಾಗಿತ್ತು.

ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಕೋಲ್ಕತಾ ನೈಟ್‌ ರೈಡರ್ಸ್ ನಾಯಕ ಐಯಾನ್‌ ಮಾರ್ಗನ್‌ ಲೆಕ್ಕಚಾರವನ್ನು ಸಿಎಸ್‌ಕೆ ಬ್ಯಾಟ್ಸ್‌ಮನ್‌ ತಲೆ ಕೆಳಗಾಗುವಂತೆ ಮಾಡಿದರು. ಆರಂಭಿಕರಾಗಿ ಕಣಕ್ಕೆ ಇಳಿದ ಫಾಫ್‌ ಡು'ಪ್ಲೆಸಿಸ್‌ ಹಾಗೂ ಋತುರಾಜ್‌ ಗಾಯಕ್ವಾಡ್‌ ಜೋಡಿ ಮೊದಲನೇ ವಿಕೆಟ್‌ಗೆ 61 ರನ್‌ ಗಳಿಸಿ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟಿತ್ತು.

ಆರಂಭದಲ್ಲಿ ಅಬ್ಬರಿಸಿದ್ದ ಋತುರಾಜ್‌ ಗಾಯಕ್ವಾಡ್‌ 27 ಎಸೆತಗಳಲ್ಲಿ 32 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ ಬಳಿಕ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಾಬಿನ್‌ ಉತ್ತಪ್ಪ ಕೆಕೆಆರ್‌ ಬೌಲರ್‌ಗಳಿಗೆ ಬೆವರಿಳಿಸಿದರು. ಕರ್ನಾಟಕ ಬ್ಯಾಟ್ಸ್‌ಮನ್‌ ಆಡಿದ ಕೇವಲ 15 ಎಸೆತಗಳಲ್ಲಿ ಮೂರು ಸಿಕ್ಸರ್‌ ಸಿಡಿಸುವ ಮೂಲಕ 31 ರನ್‌ ಗಳಿಸಿ ಔಟ್‌ ಆದರು. ಇದರ ಜೊತೆಗೆ ಫಾಫ್‌ ಡುಪ್ಲೆಸಿಸ್‌ ಜೊತೆಗೆ ಮೂರನೇ ವಿಕೆಟ್‌ಗೆ 63 ರನ್‌ ಜತೆಯಾಟದ ಕಾಣಿಕೆ ನೀಡುವ ಮೂಲಕ ಉತ್ತಪ್ಪ ಸಿಎಸ್‌ಕೆ ಮೊತ್ತ 120ರ ಗಡಿ ದಾಟಿಸುವಲ್ಲಿ ಸಫಲರಾದರು.

CSK vs KKR: ಮಾರ್ಗನ್‌ಗಿಂತ ಧೋನಿ ಬ್ಯಾಟಿಂಗ್‌ ಉತ್ತಮವಾಗಿದೆ ಎಂದ ಗಂಭೀರ್‌!

​ಫಾಫ್‌ ಡು'ಪ್ಲೆಸಿಸ್‌ ಅಬ್ಬರದ ಬ್ಯಾಟಿಂಗ್‌

ಮೊದಲನೇ ಎಸೆತದಿಂದಲೂ ಕೊನೆಯ ಎಸೆತದವರೆಗೂ ಕ್ರೀಸ್‌ನಲ್ಲಿದ್ದ ಫಾಫ್‌ ಡು'ಪ್ಲೆಸಿಸ್‌ ಕೆಕೆಆರ್‌ ಬೌಲರ್‌ಗಳನ್ನು ಬಲವಾಗಿ ಕಾಡಿದರು. ಮೊಟ್ಟ ಮೊದಲ ಓವರ್‌ನಲ್ಲಿ ಶಕಿಬ್‌ ಅಲ್‌ ಹಸನ್‌ ಅವರ ಬೌಲಿಂಗ್‌ನಲ್ಲಿ ಡುಪ್ಲೆಸಿಸ್‌ ಸ್ಟಂಪ್‌ ಔಟ್‌ನಿಂದ ಪಾರಾಗಿದ್ದರು. ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಅವರಿಂದ ಜೀವದಾನ ಪಡೆದಿದ್ದ ಡುಪ್ಲೆಸಿಸ್‌ ಅಬ್ಬರಿಸಿದರು. ಆಡಿದ 59 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 86 ರನ್‌ ಸಿಡಿಸಿದರು. ಆ ಮೂಲಕ ಸಿಎಸ್‌ಕೆ ದೊಡ್ಡ ಮೊತ್ತ ಕಲೆ ಹಾಕಲು ನೆರವಾಗಿದ್ದರು. ಕೊನೆಯ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದ ಮೊಯೀನ್‌ ಅಲಿ ಕೇವಲ 20 ಎಸೆತಗಳಲ್ಲಿ ಅಜೇಯ 37 ರನ್ ಚೆಚ್ಚಿದ್ದರು.

ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಪರ ಸುನೀಲ್ ನರೈನ್‌ 4 ಓವರ್‌ಗಳಿಗೆ 26 ರನ್‌ ನೀಡಿ 2 ವಿಕೆಟ್‌ ಪಡೆದಿದ್ದು, ಇನ್ನುಳಿದ ಬೌಲರ್‌ಗಳು ಸಿಎಸ್‌ಕೆ ಬ್ಯಾಟ್ಸ್‌ಮನ್‌ಗಳ ಎದುರು ದುಬಾರಿಯಾದರು.

​ಫೈನಲ್‌ ಪಂದ್ಯದ ಸಂಕ್ಷಿಪ್ತ ಸ್ಕೋರ್‌

ಚೆನ್ನೈ ಸೂಪರ್‌ ಕಿಂಗ್ಸ್: 20 ಓವರ್‌ಗಳಿಗೆ 192/3 (ಫಾಫ್‌ ಡು'ಪ್ಲೆಸಿಸ್ 86, ಮೊಯೀನ್‌ ಅಲಿ 37*, ಋತುರಾಜ್‌ ಗಾಯಕ್ವಾಡ್‌ 32, ರಾಬಿನ್‌ ಉತ್ತಪ್ಪ 31; ಸುನೀಲ್‌ ನರೈನ್‌ 26ಕ್ಕೆ 2, ಶಿವಮ್‌ ಮಾವಿ 32ಕ್ಕೆ 1)

ಕೋಲ್ಕತಾ ನೈಟ್‌ ರೈಡರ್ಸ್: 20 ಓವರ್‌ಗಳಿಗೆ 165/9 (ಶುಭಮನ್‌ ಗಿಲ್‌ 51, ವೆಂಕಟೇಶ್‌ ಅಯ್ಯರ್‌ 50, ಶಿವಮ್‌ ಮಾವಿ 20, ಲಾಕಿ ಫರ್ಗ್ಯೂಸನ್‌ 18*; ಶಾರ್ದುಲ್ ಠಾಕೂರ್‌ 38ಕ್ಕೆ 3, ಜಾಶ್‌ ಹೇಝಲ್‌ವುಡ್‌ 29ಕ್ಕೆ 2, ರವೀಂದ್ರ ಜಡೇಜಾ 37ಕ್ಕೆ 2, ದೀಪಕ್‌ ಚಹರ್‌ 32ಕ್ಕೆ 1)

ಚಾಂಪಿಯನ್ಸ್: ಸಿಎಸ್‌ಕೆಗೆ 20 ಕೋಟಿ ರೂ.ಬಹುಮಾನ

ಪಂದ್ಯ ಶ್ರೇಷ್ಠ ಪ್ರಶಸ್ತಿ (ಫೈನಲ್‌ ಹಣಾಹಣಿ): ಫಾಫ್‌ ಡುಪ್ಲೆಸಿಸ್‌(86 ರನ್‌)

ಸರಣಿ ಶ್ರೇಷ್ಠ ಪ್ರಶಸ್ತಿ: ಹರ್ಷಲ್‌ ಪಟೇಲ್‌ (ಆರ್‌ಸಿಬಿ, 32 ವಿಕೆಟ್)

ಉದಯೋನ್ಮುಖ ಆಟಗಾರ: ಋತುರಾಜ್‌ ಗಾಯಕ್ವಾಡ್‌(635 ರನ್‌)

ಫೈರ್‌ಪ್ಲೇ ಅವಾರ್ಡ್‌: ರಾಜಸ್ಥಾನ್‌ ರಾಯಲ್ಸ್

ಟೂರ್ನಿಯ ಅತ್ಯುತ್ತಮ ಕ್ಯಾಚ್‌: ರವಿ ಬಿಷ್ನೋಯ್‌(ಪಂಜಾಬ್‌ ಕಿಂಗ್ಸ್‌)

ಸೂಪರ್‌ ಸ್ಟ್ರೈಕರ್‌ ಆಫ್‌ ದಿ ಸೀಸನ್‌: ಶಿಮ್ರಾನ್‌ ಹೆಟ್ಮಾಯೆರ್‌(ಡಿಸಿ, 168 ಸ್ಟ್ರೈಕ್‌ರೇಟ್‌)

ಗೇಮ್‌ ಚೇಂಜರ್‌ ಆಫ್‌ ದಿ ಸೀಸನ್‌: ಹರ್ಷಲ್‌ ಪಟೇಲ್‌ (ಆರ್‌ಸಿಬಿ)

ಪವರ್‌ ಪ್ಲೇಯರ್‌ ಆಫ್‌ ದಿ ಸೀಸನ್‌: ವೆಂಕಟೇಶ್‌ ಅಯ್ಯರ್‌(ಕೆಕೆಆರ್‌)

ಪರ್ಪಲ್‌ ಕ್ಯಾಪ್‌: ಹರ್ಷಲ್‌ ಪಟೇಲ್‌ (32 ವಿಕೆಟ್‌, ಆರ್‌ಸಿಬಿ)

ಆರೆಂಜ್‌ ಕ್ಯಾಪ್‌: ಋತುರಾಜ್‌ ಗಾಯಕ್ವಾಡ್‌ (635 ರನ್‌, ಸಿಎಸ್‌ಕೆ)

ಈ ಆವೃತ್ತಿಯ ಅತ್ಯಂತ ಮೌಲ್ಯಯುತ ಆಟಗಾರ: ಹರ್ಷಲ್‌ ಪಟೇಲ್‌ (ಆರ್‌ಸಿಬಿ)

ರನ್ನರ್‌ ಅಪ್: ಕೋಲ್ಕತಾ ನೈಟ್‌ ರೈಡರ್ಸ್(ಬಹುಮಾನ ಮೊತ್ತ: 12 ಕೋಟಿ 50 ಲಕ್ಷ ರೂ.)

ಚಾಂಪಿಯನ್ಸ್‌: ಚೆನ್ನೈ ಸೂಪರ್‌ ಕಿಂಗ್ಸ್‌: (ಬಹುಮಾನ ಮೊತ್ತ: 20 ಕೋಟಿ ರೂ.)

ಉಭಯ ತಂಡಗಳ ಪ್ಲೇಯಿಂಗ್‌ IX

ಚೆನ್ನೈ ಸೂಪರ್‌ ಕಿಂಗ್ಸ್‌: ಋತುರಾಜ್‌ ಗಾಯಕ್ವಾಡ್‌, ಫಾಫ್‌ ಡು'ಪ್ಲೆಸಿಸ್‌, ಅಂಬಾಟಿ ರಾಯುಡು, ಮೊಯೀನ್‌ ಅಲಿ, ರಾಬಿನ್ ಉತ್ತಪ್ಪ, ರವೀಂದ್ರ ಜಡೇಜಾ, ಎಂಎಸ್‌ ಧೋನಿ (ಕ್ಯಾಪ್ಟನ್‌/ಕೀಪರ್‌), ಡ್ವೇನ್‌ ಬ್ರಾವೋ, ಜಾಶ್ ಹೇಝಲ್‌ವುಡ್‌, ಶಾರ್ದುಲ್‌ ಠಾಕೂರ್‌, ದೀಪಕ್ ಚಹರ್

ಕೋಲ್ಕತಾ ನೈಟ್‌ ರೈಡರ್ಸ್:
ವೆಂಕಟೇಶ್ ಅಯ್ಯರ್‌, ಶುಭಮನ್‌ ಗಿಲ್‌, ನಿತೀಶ್‌ ರಾಣಾ, ರಾಹುಲ್ ತ್ರಿಪಾಠಿ, ಐಯಾನ್‌ ಮಾರ್ಗನ್‌ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್‌), ಶಕಿಬ್ ಅಲ್ ಹಸನ್, ಸುನಿಲ್‌ ನರೈನ್, ಲಾಕಿ ಫರ್ಗ್ಯೂಸನ್, ವರುಣ್ ಚಕ್ರವರ್ತಿ, ಶಿವಂ ಮಾವಿ.

ಲೇಖಕರ ಬಗ್ಗೆ
ರಮೇಶ ಕೋಟೆ
ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ 2020ರ ಮಾರ್ಚ್‌ನಿಂದ ಕ್ರೀಡಾ ಪತ್ರಕರ್ತರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿಶ್ವವಾಣಿ ದಿನ ಪತ್ರಿಕೆ, ಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾ ಸುದ್ದಿ ಸಂಸ್ಥೆ, ಸಂಜೆ ವಾಣಿ ಹಾಗೂ ಈ ಸಂಜೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಇವರು ಹೊಂದಿದ್ದಾರೆ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ ಹಾಗೂ ಅಂಕಣಗಳನ್ನು ಬರೆಯುವುದು ಇವರ ಆಸಕ್ತದಾಯಕ ವಿಷಯಗಳು. ಕನ್ನಡ ಸಾಹಿತ್ಯ ಓದುವುದು, ಕ್ರಿಕೆಟ್‌ ಆಡುವುದು, ಟ್ರೆಕ್ಕಿಂಗ್‌, ಬೈಕ್‌ ರೈಡಿಂಗ್‌, ಫೋಟೋಗ್ರಫಿ ಇವು ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌