ಆ್ಯಪ್ನಗರ

'ಇಂದು ನನ್ನ ಪಾಲಿಗೆ ವಿಶೇಷ ದಿನ': ಗೆಲುವಿನ ಬಳಿಕ ಭಾವುಕರಾದ ಫಾಫ್‌ ಡು ಪ್ಲೆಸಿಸ್‌!

ಬುಧವಾರ ಕೋಲ್ಕತಾದ ಈಡನ್‌ ಗಾರ್ಡನ್ಸ್ ಮೈದಾನದಲ್ಲಿ ನಡೆದಿದ್ದ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್ ವಿರುದ್ಧ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ 14 ರನ್‌ಗಳ ಗೆಲುವು ಸಾಧಿಸಿತು. ಬಳಿಕ ಮಾತನಾಡಿದ ಆರ್‌ಸಿಬಿ ನಾಯಕ ಫಾಫ್‌ ಡು ಪ್ಲೆಸಿಸ್, ರಜತ್‌ ಪಾಟಿದಾರ್‌ ಹಾಗೂ ಹರ್ಷಲ್ ಪಟೇಲ್‌ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು. ಈ ಗೆಲುವಿನೊಂದಿಗೆ ಆರ್‌ಸಿಬಿ ಎರಡನೇ ಕ್ವಾಲಿಫೈಯರ್‌ ಪಂದ್ಯಕ್ಕೆ ಅರ್ಹತೆ ಪಡೆಯಿತು.

Authored byರಮೇಶ ಕೋಟೆ | Vijaya Karnataka Web 26 May 2022, 5:28 pm

ಹೈಲೈಟ್ಸ್‌:

  • ಪ್ರಸ್ತುತ ನಡೆಯುತ್ತಿರುವ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿ.
  • ಎಲಿಮಿನೇಟರ್‌ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಗೆದ್ದ ಆರ್‌ಸಿಬಿ.
  • ಲಖನೌ ವಿರುದ್ಧ ಗೆಲುವಿನ ಬಳಿಕ ಸಂತಸ ವ್ಯಕ್ತಪಡಿಸಿದ ಆರ್‌ಸಿಬಿ ನಾಯಕ ಪಾಫ್‌.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Faf Du plessis
ಫಾಫ್‌ ಡು ಪ್ಲೆಸಿಸ್‌ (ಚಿತ್ರ: ಐಪಿಎಲ್‌)
ಕೋಲ್ಕತಾ: ಲಖನೌ ಸೂಪರ್ ಜಯಂಟ್ಸ್‌ ವಿರುದ್ಧ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್) ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ 14 ರನ್‌ಗಳ ರೋಚಕ ಗೆಲುವಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಫಾಫ್‌ ಡು ಪ್ಲೆಸಿಸ್‌, ಶತಕ ಸಿಡಿಸಿದ ರಜತ್ ಪಾಟಿದಾರ್‌ ಹಾಗೂ ಡೆತ್‌ ಓವರ್‌ಗಳಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಹರ್ಷಲ್‌ ಪಟೇಲ್ ಅವರನ್ನು ಶ್ಲಾಘಿಸಿದರು.
ಬುಧವಾರ ರಾತ್ರಿ ಕೋಲ್ಕತಾದ ಈಡನ್‌ ಗಾರ್ಡನ್ಸ್ ಮೈದಾನದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಆರ್‌ಸಿಬಿ ರಜತ್‌ ಪಾಟಿದಾರ್‌(54 ಎಸೆತಗಳಲ್ಲಿ 112*) ಚೊಚ್ಚಲ ಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 207 ರನ್‌ ದಾಖಲಿಸಿತು. ಬಳಿಕ ಗುರಿ ಹಿಂಬಾಲಿಸಿದ ಲಖನೌ ಸೂಪರ್‌ ಜಯಂಟ್ಸ್ ಕೆ.ಎಲ್‌ ರಾಹುಲ್‌(78 ರನ್‌) ಅವರ ಏಕಾಂಗಿ ಹೋರಾಟದ ಹೊರತಾಗಿಯೂ 193 ರನ್‌ಗಳಿಗೆ ಸೀಮಿತವಾಗಿ ಸೋಲು ಒಪ್ಪಿಕೊಂಡಿತು.

ಈ ಗೆಲುವಿನೊಂದಿಗೆ ಫಾಫ್‌ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದರೆ, ಸೋತ ಲಖನೌ ಸೂಪರ್‌ ತಂಡ ಎಲಿಮಿನೇಟರ್‌ ಆಗಿ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿತು. ಗೆಲುವಿನ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಆರ್‌ಸಿಬಿ ನಾಯಕ ಫಾಫ್‌ ಡು ಪ್ಲೆಸಿಸ್‌ ಸಂತಸ ವ್ಯಕ್ತಪಡಿಸಿದರು.

ಲಖನೌ ಸದ್ದಡಗಿಸಿದ ಆರ್‌ಸಿಬಿ, ಕ್ವಾಲಿಫೈಯರ್‌-2ಗೆ ಚಾಲೆಂಜರ್ಸ್‌ ಲಗ್ಗೆ!

"ಇಂದು(ಬುಧವಾರ) ನನ್ನ ಪಾಲಿಗೆ ವಿಶೇಷ ದಿನ. ರಜತ್‌ ಪಾಟಿದಾರ್‌ ಆಡಿದ ಹಾದಿಗೆ ನಾನು ಚಂದ್ರನ ಮೇಲಿದ್ದೇನೆ. ಇಂದಿನ ರೀತಿಯ ಪಂದ್ಯಗಳಲ್ಲಿ ಸ್ವಲ್ಪ ಒತ್ತಡ ಹೆಚ್ಚಾಗಿರುತ್ತದೆ. ಆತ ಆಡಿದ ಹಾದಿ ಹಾಗೂ ಶತಕ ಸಿಡಿಸಿ ಸಂಭ್ರಮಿಸಿದ ರೀತಿಯನ್ನು ನೋಡಿದರೆ, ಅವರು ಬುದ್ದಿವಂತ ಆಟಗಾರ ಎಂಬುದು ತಿಳಿಯುತ್ತದೆ," ಎಂದು ಗುಣಗಾನ ಮಾಡಿದರು.

"ರಜತ್ ಎಲ್ಲಾ ಶಾಟ್‌ಗಳನ್ನು ಆಡಿದ್ದಾರೆ ಹಾಗೂ ಅತ್ಯುತ್ತಮ ಹಾದಿಯಲ್ಲಿ ಆಕ್ರಮಣ ಮಾಡಿದ್ದಾರೆ. ನಾವು ಒತ್ತಡಕ್ಕೆ ಒಳಗಾದ ಎಲ್ಲಾ ಸಮಯದಲ್ಲಿಯೂ ಅವರು ಮುಂದೆ ಬಂದು ಸನ್ನಿವೇಶವನ್ನು ಸರಿದೂಗಿಸಿದ್ದಾರೆ. ಇಷ್ಟು ದಿನಗಳ ನಮ್ಮ ಕಠಿಣ ಪರಿಶ್ರಮಕ್ಕೆ ಇಂದು ಸೂಕ್ತ ಪ್ರತಿಫಲ ಸಿಕ್ಕಿದೆ. ಸಂಭ್ರಮಿಸಲು ಇದು ಸೂಕ್ತ ಸ್ಥಳ ಎಂದು ಭಾವಿಸುತ್ತೇನೆ. ಪ್ರಮುಖ ಸಂಗತಿ ಏನೆಂದರೆ, ನಾವು ಹೆಚ್ಚು ಭಾವುಕರಾಗುತ್ತಿದ್ದೇವೆ," ಎಂದರು.

'ಶಾಂದಾರ್‌ ಪಾಟಿದಾರ್‌', ಲಖನೌ ಸದ್ದಡಗಿಸಿ ಸೆಮಿಫೈನಲ್‌ಗೆ ಮುನ್ನಡೆದ ಆರ್‌ಸಿಬಿ!

ಗುರಿ ಹಿಂಬಾಲಿಸಿದ ಲಖನೌ ಸೂಪರ್‌ ಜಯಂಟ್ಸ್ ತಂಡ ಕೆ.ಎಲ್‌ ರಾಹುಲ್(78 ರನ್) ಹಾಗೂ ದೀಪಕ್‌ ಹೂಡ(45) ಅವರ ಬ್ಯಾಟಿಂಗ್‌ ಸಹಾಯದಿಂದ ಡೆತ್‌ ಓವರ್‌ಗಳವರೆಗೂ ಅತ್ಯುತ್ತಮ ಹೋರಾಟ ನಡೆಸಿತ್ತು. ಆದರೆ, 18ನೇ ಓವರ್‌ನಲ್ಲಿ ಹರ್ಷಲ್‌ ಪಟೇಲ್‌ ವೈಡ್‌ ಯಾರ್ಕರ್‌, ನಿಧಾನಗತಿಯ ಎಸೆತಗಳು ಸೇರಿ ವಿಭಿನ್ನ ಪ್ರಯೋಗಗಳನ್ನು ನಡೆಸುವ ಮೂಲಕ ಆರ್‌ಸಿಬಿಗೆ ಮೇಲುಗೈ ತಂದುಕೊಟ್ಟರು. 4 ಓವರ್‌ ಬೌಲ್‌ ಮಾಡಿದ್ದ ಹರ್ಷಲ್‌ ಪಟೇಲ್‌ ಕೇವಲ 25 ರನ್‌ ನೀಡಿ ಒಂದು ವಿಕೆಟ್‌ ಪಡೆದಿದ್ದರು.

ಪ್ರತಿಯೊಂದು ಪಂದ್ಯದ ಒತ್ತಡದ ಸನ್ನಿವೇಶದಲ್ಲಿ ಹರ್ಷಲ್ ಪಟೇಲ್ ನಮಗೆ ಅತ್ಯುತ್ತಮ ಪ್ರದರ್ಶನ ತೋರುತ್ತಾರೆ. ಹಾಗಾಗಿ ಯುವ ವೇಗಿ ನಮಗೆ ಒಂದು ರೀತಿ ಜೋಕರ್‌ ಇದ್ದ ಹಾಗೆ ಎಂದರು.

ರಜತ್‌ ಪಾಟಿದಾರ್‌ 'ಶಾಂದಾರ್‌ ಶತಕ', ಟ್ವಿಟರ್‌ನಲ್ಲಿ ಸಲಾಮ್ ಹೊಡೆದ ದಿಗ್ಗಜರು!

"ನಾವು ಅಗ್ರ ಸ್ಥಾನದಲ್ಲಿದ್ದೇವೆ ಹಾಗೂ ಸ್ಪಷ್ಟತೆಯೊಂದಿಗೆ ಅಂಗಣಕ್ಕೆ ಆಗಮಿಸಿದ್ದೇವೆಂದು ಭಾವಿಸುತ್ತೇನೆ. ಹರ್ಷಲ್‌ ಪಟೇಲ್‌ ಒಂದು ರೀತಿ ಜೋಕರ್‌ ಆಫ್‌ ದಿ ಪ್ಯಾಕ್‌. ಅಲ್ಲವೇ? ಅವರು ಅತಿ ಹೆಚ್ಚು ಒತ್ತಡದಲ್ಲಿ ಬೌಲ್‌ ಮಾಡುವ ಬೌಲರ್‌. ಒತ್ತಡದ ಸನ್ನಿವೇಶದಲ್ಲಿ ನಾನು ಅವರು ಮೂಲಕವೇ ಹೋಗುತ್ತೇನೆ. ಒತ್ತಡದ ಓವರ್‌ಗಳು ತಮಗೆ ಬೇಕೆಂದು ಅವರೇ ನನಗೆ ಹೇಳುತ್ತಾರೆ. ಯಾವಾಗಲೂ ಅವರ ಹಾಗೂ ನನ್ನ ಜೊತೆಗಿನ ಸಂಭಾಷಣೆ ಇದಾಗಿರುತ್ತದೆ," ಎಂದು ಫಾಫ್‌ ಡುಪ್ಲೆಸಿಸ್‌ ಗುಣಗಾನ ಮಾಡಿದರು.

ಗೆಲುವಿನ ವಿಶ್ವಾಸದಲ್ಲಿ ತೇಲುತ್ತಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಮೇ 27 ರಂದು ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡಯುವ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ ಮೇ.29 ರಂದು ಇದೇ ಮೈದಾನದಲ್ಲಿ ಕಾದಾಟ ನಡೆಸಲಿದೆ.

ಲೇಖಕರ ಬಗ್ಗೆ
ರಮೇಶ ಕೋಟೆ
ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ 2020ರ ಮಾರ್ಚ್‌ನಿಂದ ಕ್ರೀಡಾ ಪತ್ರಕರ್ತರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿಶ್ವವಾಣಿ ದಿನ ಪತ್ರಿಕೆ, ಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾ ಸುದ್ದಿ ಸಂಸ್ಥೆ, ಸಂಜೆ ವಾಣಿ ಹಾಗೂ ಈ ಸಂಜೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಇವರು ಹೊಂದಿದ್ದಾರೆ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ ಹಾಗೂ ಅಂಕಣಗಳನ್ನು ಬರೆಯುವುದು ಇವರ ಆಸಕ್ತದಾಯಕ ವಿಷಯಗಳು. ಕನ್ನಡ ಸಾಹಿತ್ಯ ಓದುವುದು, ಕ್ರಿಕೆಟ್‌ ಆಡುವುದು, ಟ್ರೆಕ್ಕಿಂಗ್‌, ಬೈಕ್‌ ರೈಡಿಂಗ್‌, ಫೋಟೋಗ್ರಫಿ ಇವು ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌