ಆ್ಯಪ್ನಗರ

IPL 2023: 'ಇಲ್ಲಿನ ಜನರ ಜೊತೆ ನನ್ನ ಆಳವಾದ ಸಂಬಂಧವಿದೆ'-ಆರ್‌ಸಿಬಿ ಫ್ಯಾನ್ಸ್‌ಗೆ ಎಬಿಡಿ ಭಾವನಾತ್ಮಕ ಸಂದೇಶ!

AB de Villiers Emotional Note For RCB Fans: ಒಂದು ದಶಕದ ಕಾಲ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದ ಎಬಿ ಡಿ ವಿಲಿಯರ್ಸ್ ಅವರು ಸಾಕಷ್ಟು ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನಗಳನ್ನು ನೀಡಿದ್ದಾರೆ. ಇದರ ಹೊರತಾಗಿಯೂ ಆರ್‌ಸಿಬಿ ಒಂದೇ ಒಂದು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. 2021ರ ಅಂತ್ಯದಲ್ಲಿ ಎಬಿ ಡಿ ವಿಲಿಯರ್ಸ್‌ ಅವರು ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅಂದಹಾಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಎಬಿಡಿಗೆ ಹಾಲ್‌ ಆಫ್‌ ಫೇಮ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು.

Authored byರಮೇಶ ಕೋಟೆ | Vijaya Karnataka Web 28 Mar 2023, 4:28 pm

ಹೈಲೈಟ್ಸ್‌:

  • ವಿರಾಟ್‌ ಕೊಹ್ಲಿ, ಆರ್‌ಸಿಬಿ ಸಹ ಆಟಗಾರರು, ಬೆಂಗಳೂರಿಗೆ ಧನ್ಯವಾದ ಅರ್ಪಿಸಿದ ಎಬಿ ಡಿ ವಿಲಿಯರ್ಸ್‌.
  • ಮಾರ್ಚ್‌ 26 ರಂದು ಎಬಿಡಿ ಮತ್ತು ಕ್ರಿಸ್‌ ಗೇಲ್ ಆರ್‌ಸಿಬಿ ಹಾಲ್‌ ಆಫ್‌ ಫೇಮ್‌ಗೆ ಪ್ರಶಸ್ತಿ ಸ್ವೀಕರಿಸಿದ್ದರು.
  • ವಿರಾಟ್‌ ಕೊಹ್ಲಿ ಹಾಗೂ ಆರ್‌ಸಿಬಿ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶವನ್ನು ಎಬಿಡಿ ಬರೆದಿದ್ದಾರೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web AB De Villiers
ಎಬಿ ಡಿ ವಿಲಿಯರ್ಸ್‌ (ಚಿತ್ರ: ಆರ್‌ಸಿಬಿ)
ಬೆಂಗಳೂರು: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಒಂದು ದಶಕದ ಕಾಲ ಪ್ರತಿನಿಧಿಸಿದ್ದ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ ಅವರಿಗೆ ಆರ್‌ಸಿಬಿ ಅಭಿಮಾನಿಗಳು ಹೃದಯದಲ್ಲಿ ವಿಶೇಷ ಸ್ಥಾನವನ್ನು ನೀಡಿದ್ದಾರೆ. ಇದೀಗ ಆರ್‌ಸಿಬಿ ತಂಡದಲ್ಲಿ ಎಬಿಡಿ ಆಡುತ್ತಿಲ್ಲವಾದರೂ ಅಭಿಮಾನಿಗಳು ಮಾತ್ರ ಅವರ ಹೆಸರನ್ನು ಹೇಳದೆ ಸುಮ್ಮನೆ ಇರುವುದಿಲ್ಲ. ಅಷ್ಟರ ಮಟ್ಟಿಗೆ ಅಭಿಮಾನಿಗಳು ಎಬಿ ಡಿ ವಿಲಿಯರ್ಸ್ ಅವರನ್ನು ಪ್ರೀತಿಸುತ್ತಾರೆ.
2021ರ ಅಂತ್ಯದಲ್ಲಿ ಎಬಿ ಡಿ ವಿಲಿಯರ್ಸ್ ಅವರು ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರು 2022ರ ಟೂರ್ನಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಅಂದಹಾಗೆ ಆರ್‌ಸಿಬಿ ಪರ ಸಾಕಷ್ಟು ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನಗಳನ್ನು ನೀಡುವ ಮೂಲಕ ಎಬಿಡಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಆರ್‌ಸಿಬಿ ಪರ ಐಪಿಎಲ್ ಟೂರ್ನಿಯಲ್ಲಿನ ಸಾಧನೆಯನ್ನು ಪರಿಗಣಿಸಿದ ಬೆಂಗಳೂರು ಫ್ರಾಂಚೈಸಿ, ಎಬಿ ಡಿ ವಿಲಿಯರ್ಸ್ ಹಾಗೂ ಕ್ರಿಸ್‌ ಗೇಲ್ ಅವರಿಗೆ ಮಾರ್ಚ್‌ 26 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲ್‌ ಆಫ್‌ ಫೇಮ್‌ ನೀಡಿ ಗೌರವಿಸಿತ್ತು. ಈ ವೇಳೆ ಸ್ಟೇಡಿಯಂನಲ್ಲಿ ಅಭಿಮಾನಿಗಳು ಕೂಡ ಉಪಸ್ಥಿತರಿದ್ದರು. ಈ ವೇಳೆ ಮೈದಾನದಲ್ಲಿ ಹೆಜ್ಜೆ ಹಾಕಿದ ಎಬಿ ಡಿವಿಲಿಯರ್ಸ್‌ ಅವರನ್ನು ಅಭಿಮಾನಿಗಳು ಕಣ್ತುಂಬಿಸಿಕೊಂಡಿದ್ದರು ಹಾಗೂ ಅವರನ್ನು ಹುರಿದುಂಬಿಸಿದ್ದರು.

IPL 2023: ಆರ್‌ಸಿಬಿ ಕಪ್‌ ಗೆಲ್ಲಬೇಕೆಂದರೆ ರವಿ ಶಾಸ್ತ್ರಿ ಹೆಡ್‌ ಕೋಚ್‌ ಆಗಬೇಕು!
ಇದೀಗ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿವಿಲಿಯರ್ಸ್ ಅವರು, ರಾಯಲ್‌ ಚಾಲೆಂಜರ್ಸ್ ಬೆಂಗಳೂರು, ವಿರಾಟ್‌ ಕೊಹ್ಲಿ, ಸಹ ಆಟಗಾರರು ಹಾಗೂ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ ಹಾಗೂ ಭಾವನಾತ್ಮಕ ಸಂದೇಶವನ್ನು ಬರೆದುಕೊಂಡಿದ್ದಾರೆ.

"ನನ್ನ ಹೆಂಡತಿ, ಇಬ್ಬರು ಹುಡುಗರು ಮತ್ತು ಪುಟ್ಟ ಹುಡುಗಿ ನಮ್ಮ ಆರ್‌ಸಿಬಿ ತವರು ಮೈದಾನಕ್ಕೆ ಪ್ರವೇಶಿಸಲು ಮೆಟ್ಟಿಲುಗಳ ಮೇಲೆ ನಡೆದಾಗ ನನ್ನ ಹೃದಯ ಅರಳಿತು. ಈ ವೇಳೆ ನನ್ನ ಮನಸಿನಲ್ಲಿ ವಿಭಿನ್ನ ಭಾವನೆಗಳು ಉಂಟಾಗುತ್ತಿದ್ದವು. ನನ್ನ ಈ ವಿಭಿನ್ನ ಮನಸ್ಥಿತಿಯಲ್ಲಿ ಅಲ್ಲಿಗೆ ಹೋಗುವುದು ವಿಚಿತ್ರವೆನಿಸಿತು," ಎಂದು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಎಬಿ ಡಿ ವಿಲಿಯರ್ಸ್ ಬರೆದುಕೊಂಡಿದ್ದಾರೆ.
View this post on Instagram A post shared by AB de Villiers (@abdevilliers17)

"ಅಭಿಮಾನಿಗಳಿಂದ ತುಂಬಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಆರ್‌ಸಿಬಿ ತಂಡದ ಡ್ರೆಸ್ಸಿಂಗ್‌ ಕೊಠಡಿಯ ಬಾಲ್ಕನಿಗೆ ನಡೆದುಕೊಂಡು ಹೋದಾಗ ನನ್ನ ಕಣ್ಣಲ್ಲಿ ನೀರು ತುಂಬಿತ್ತು. ಈ ಬಾರಿ ಎಬಿಡಿ.. ಎಬಿಡಿ ಎಂದು ಅಭಿಮಾನಿಗಳ ಪದಗಳು ನನಗೆ ವಿಭಿನ್ನವಾಗಿ ಕೇಳಿಸಿತು. ಏಕೆಂದರೆ ಆರ್‌ಸಿಬಿ ಪರ ಆಡುವಾಗ ಪಂದ್ಯವನ್ನು ಗೆಲ್ಲಿಸಲು ನನ್ನನ್ನು ಹುರಿದುಂಬಿಸಲು ಅವರು ನನ್ನ ಹೆಸರು ಕೂಗುತ್ತಿದ್ದರು. ಆದರೆ, ಈ ಬಾರಿ ಸನ್ನಿವೇಶ ವಿಭಿನ್ನವಾಗಿತ್ತು. ಇದರಿಂದಾಗಿ ನಾನು ತುಂಬಾ ಭಾವುಕನಾದೆ. ಇಂಥಾ ಅದ್ಭುತ ನಗರವನ್ನು ಪ್ರತಿನಿಧಿಸಿದ್ದಕ್ಕಾಗಿ, ಅಸಾಧಾರಣ ಸಹ ಆಟಗಾರರನ್ನು ಹೊಂದಿರುವುದಕ್ಕೆ ಹಾಗೂ ಇಂಥಾ ಅದ್ಭುತ ಫ್ರಾಂಚೈಸಿಯಲ್ಲಿ ಆಡಿದ್ದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ," ಎಂದು ಆರ್‌ಸಿಬಿ ಮಾಜಿ ಆಟಗಾರ ಭಾವುಕರಾಗಿ ಬರೆದಿದ್ದಾರೆ.
IPL 2023: 'ಈ ಸಲ ಕಪ್‌ ನಮ್ದೆ'-ಆರ್‌ಸಿಬಿ ಪ್ರಶಸ್ತಿ ಗೆಲ್ಲಬೇಕೆಂದು ಆಶಿಸಿದ ಎಬಿ ಡಿವಿಲಿಯರ್ಸ್!
"2003 ರಿಂದ ಇಲ್ಲಿಯವರೆಗೂ ಭಾರತದಲ್ಲಿ ತಾನು ಕಳೆದಿರುವ ಕ್ಷಣಗಳು ನನ್ನ ಪಾಲಿಗೆ ವಿಶೇಷವಾಗಿವೆ. ಈ ರಾಷ್ಟ್ರಕ್ಕೆ ಹಾಗೂ ಇಲ್ಲಿನ ಜನತೆಯ ಜೊತೆ ನಾನು ಆಳವಾದ ಸಂಬಂಧವನ್ನು ಹೊಂದಿದ್ದೇನೆ ಹಾಗೂ ಇದಕ್ಕಾಗಿ ನಾನು ಕೃತಜ್ಞನಾಗಿರುತ್ತೇನೆ. ನನ್ನ ಸಹ ಆಟಗಾರರಿಗೆ ಧನ್ಯವಾದ, ವಿಶೇಷವಾಗಿ ವಿರಾಟ್‌ ಕೊಹ್ಲಿಗೆ. ಧನ್ಯವಾದ ಆರ್‌ಸಿಬಿ, ಧನ್ಯವಾದ ಬೆಂಗಳೂರು," ಎಂದು ಎಬಿ ಡಿವಿಲಿಯರ್ಸ್ ಭಾವುಕರಾಗಿದ್ದಾರೆ.
ಲೇಖಕರ ಬಗ್ಗೆ
ರಮೇಶ ಕೋಟೆ
ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ 2020ರ ಮಾರ್ಚ್‌ನಿಂದ ಕ್ರೀಡಾ ಪತ್ರಕರ್ತರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿಶ್ವವಾಣಿ ದಿನ ಪತ್ರಿಕೆ, ಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾ ಸುದ್ದಿ ಸಂಸ್ಥೆ, ಸಂಜೆ ವಾಣಿ ಹಾಗೂ ಈ ಸಂಜೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಇವರು ಹೊಂದಿದ್ದಾರೆ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ ಹಾಗೂ ಅಂಕಣಗಳನ್ನು ಬರೆಯುವುದು ಇವರ ಆಸಕ್ತದಾಯಕ ವಿಷಯಗಳು. ಕನ್ನಡ ಸಾಹಿತ್ಯ ಓದುವುದು, ಕ್ರಿಕೆಟ್‌ ಆಡುವುದು, ಟ್ರೆಕ್ಕಿಂಗ್‌, ಬೈಕ್‌ ರೈಡಿಂಗ್‌, ಫೋಟೋಗ್ರಫಿ ಇವು ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌