Please enable javascript.Pat Cummins New Captain For Srh,IPL 2024: ಸನ್‌ರೈಸರ್ಸ್ ಹೈದರಾಬಾದ್‌ಗೆ ಪ್ಯಾಟ್‌ ಕಮಿನ್ಸ್ ನೂತನ ನಾಯಕ! - ipl 2024: australia pacer pat cummins officially unveiled as captain of sunrisers hyderabad - Vijay Karnataka

IPL 2024: ಸನ್‌ರೈಸರ್ಸ್ ಹೈದರಾಬಾದ್‌ಗೆ ಪ್ಯಾಟ್‌ ಕಮಿನ್ಸ್ ನೂತನ ನಾಯಕ!

Authored byರಮೇಶ ಕೋಟೆ | Vijaya Karnataka Web 4 Mar 2024, 1:26 pm
Subscribe

Pat Cummins Appoints SRH's Captain: ಮುಂಬರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ನಿಮಿತ್ತ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ ನೂತನ ನಾಯಕನಾಗಿ ಆಸ್ಟ್ರೇಲಿಯಾದ ವೇಗಿ ಪ್ಯಾಟ್‌ ಕಮಿನ್ಸ್ ನೇಮಕಗೊಂಡಿದ್ದಾರೆ. ೀ ವಿಷಯವನ್ನು ಹೈದರಾಬಾದ್‌ ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರಕಟಿಸಿದೆ. ಟೆಸ್ಟ್‌ ಚಾಂಪಿಯನ್‌ಷಿಪ್‌ ಹಾಗೂ ಏಕದಿನ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ತಂಡವನ್ನು ಪ್ಯಾಟ್‌ ಕಮಿನ್ಸ್‌ ಮುನ್ನಡೆಸಿದ್ದರು. ಇದೀಗ ಅವರು ಏಡೆನ್‌ ಮಾರ್ಕ್ರಮ್‌ ಅವರ ಸ್ಥಾನವನ್ನು ತುಂಬಿದಿದ್ದಾರೆ.

ಹೈಲೈಟ್ಸ್‌:

  • ಮಾರ್ಚ್‌ 22 ರಂದು 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿ ಆರಂಭವಾಗಲಿದೆ.
  • ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ ಪ್ಯಾಟ್‌ ಕಮಿನ್ಸ್ ನೂತನ ನಾಯಕನಾಗಿ ನೇಮಕ.
  • ಟೆಸ್ಟ್‌ ಚಾಂಪಿಯನ್‌ಷಿಪ್‌, ಏಕದಿನ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾವನ್ನು ಮುನ್ನಡೆಸಿದ್ದ ಕಮಿನ್ಸ್‌.
Pat Cummins
ಪ್ಯಾಟ್‌ ಕಮಿನ್ಸ್ (ಚಿತ್ರ: ಟ್ವಿಟರ್‌)
ಹೊಸದಿಲ್ಲಿ: ಮುಂಬರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ನಿಮಿತ್ತು ಆಸ್ಟ್ರೇಲಿಯಾದ ಸ್ಟಾರ್‌ ವೇಗಿ ಪ್ಯಾಟ್‌ ಕಮಿನ್ಸ್ ಅವರನ್ನು ತನ್ನ ನೂತನ ನಾಯಕನ್ನಾಗಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ನೇಮಿಸಿದೆ. ಈ ಬಗ್ಗೆ ತನ್ನ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ತಿಳಿಸಿದೆ.
2023ರ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಹಾಗೂ 2023ರ ಐಸಿಸಿ ಏಕದಿನ ವಿಶ್ವಕಪ್‌ ಗದ್ದಿದ್ದ ಆಸ್ಟ್ರೇಲಿಯಾ ತಂಡವನ್ನು ಪ್ಯಾಟ್‌ ಕಮಿನ್ಸ್ ಯಶಸ್ವಿಯಾಗಿ ಮುನ್ನಡೆಸಿದ್ದರು. ಇದೀಗ ಅವರು ಕಳೆದ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಮುನ್ನಡೆಸಿದ್ದ ಏಡೆನ್‌ ಮಾರ್ಕ್ರಮ್‌ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ.

2024ರ ಐಪಿಎಲ್‌ ಟೂರ್ನಿಯ ಮಿನಿ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡ 20.5 ಕೋಟಿ ರೂ. ಗಳಿಗೆ ಪ್ಯಾಟ್‌ ಕಮಿನ್ಸ್ ಅವರನ್ನು ಖರೀದಿಸಿತ್ತು. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿಯೇ ಅತ್ಯಂತ ಎರಡನೇ ದುಬಾರಿ ಆಟಗಾರ ಎಂಬ ಕೀರ್ತಿಗೆ ಪ್ಯಾಟ್‌ ಕಮಿನ್ಸ್ ಭಾಜನರಾಗಿದ್ದರು.
IPL 2024 - ಭಾರತ ನನ್ನ ಎರಡನೇ ತವರುಮನೆ ಎಂದ ಪ್ಯಾಟ್ ಕಮಿನ್ಸ್!
ಸನ್‌ರೈಸರ್ಸ್‌ ಹೈದರಾಬಾದ್‌ ನಾಯಕನಾಗಿ ಪ್ಯಾಟ್‌ ಕಮಿನ್ಸ್ ಅವರು ಏಡೆನ್‌ ಮಾರ್ಕ್ರಮ್‌ ಅವರ ಸ್ಥಾನವನ್ನು ತುಂಬಲಿದ್ದಾರೆಂದು ಭಾನುವಾರ ಇಂಡಿಯಾ ಟುಡೇ ಅಧಿಕೃತ ಮೂಲಗಳಿಂದ ವಿಷಯ ತಿಳಿದುಕೊಂಡು ವರದಿ ಮಾಡಿತ್ತು.


ಭಾರತ ನನಗೆ ಎರಡನೇ ತವರು ಎಂದ ಕಮಿನ್ಸ್


"ಭಾರತ ನನಗೆ ಒಂದು ರೀತಿ ಎರಡನೇ ತವರು ಇದ್ದಂತೆ. ಇಲ್ಲಿ ನಾವು ಸಾಕಷ್ಟು ಸಮಯವನ್ನು ಕಳೆದಿದ್ದೇವೆ. ಐಪಿಎಲ್‌ನಲ್ಲಿ ನೀವು ತವರು ತಂಡಗಳನ್ನು ಹೊಂದಿದ್ದೀರಿ. ಹಾಗಾಗಿ ನೀವು ಇಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದೀರಿ. ಕನಿಷ್ಠ ಕ್ರಿಕೆಟ್‌ ಅಭಿಮಾನಿಗಳು ಇಲ್ಲಿದ್ದಾರೆ. ಕೋಲ್ಕತಾ ನೈಟ್‌ ರೈಡರ್ಸ್‌ಗೆ ಆಡಿದಾಗ, ಅಲ್ಲಿನ ಅಭಿಮಾನಿಗಳನ್ನು ನೀವು ಹೊಂದಿರುತ್ತೀರಿ. ಇದೀಗ ಸನ್‌ರೈಸರ್ಸ್ ಹೈದರಾಬಾದ್‌ ಪರ ಆಡಿದಾಗ, ಇಲ್ಲಿಯೂ ಕೂಡ ನಿಮಗೆ ಅಭಿಮಾನಿಗಳಾಗುತ್ತಾರೆ," ಎಂದು ಪ್ಯಾಟ್‌ ಕಮಿನ್ಸ್ ತಿಳಿಸಿದ್ದಾರೆ.

ಮಾರ್ಚ್‌ 23 ರಂದು ಕೆಕೆಆರ್‌ ವಿರುದ್ದದ ಪಂದ್ಯ


ಮಾರ್ಚ್‌ 22 ರಂದೇ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯು ಆರಂಭವಾಗಲಿದೆ. ಅಂದ ಹಾಗೆ ಮಾರ್ಚ್‌ 23 ರಂದು ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ತಮ್ಮ ಮಾಜಿ ತಂಡ ಕೋಲ್ಕತಾ ನೈಟ್ ರೈಡರ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಪ್ಯಾಟ್‌ ಕಮಿನ್ಸ್ ಮುನ್ನಡೆಸಲಿದ್ದಾರೆ.

'ರಾಜಕೀಯದಿಂದ ನನ್ನನ್ನು ಬಿಟ್ಟು ಬಿಡಿ': ಬಿಜೆಪಿಗೆ ಗೌತಮ್‌ ಗಂಭೀರ್‌ ಮನವಿ!
ಸನ್‌ರೈಸರ್ಸ್‌ ಹೈದರಾಬಾದ್‌ ತಂಡ


ಪ್ಯಾಟ್ ಕಮಿನ್ಸ್ (ನಾಯಕ),ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಏಡೆನ್ ಮಾರ್ಕ್ರಮ್, ಮಾರ್ಕೊ ಯೆನ್ಸನ್‌, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಸನ್ವಿರ್ ಸಿಂಗ್, ಹೆನ್ರಿಚ್ ಕ್ಲಾಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಅಗರ್ವಾಲ್, ಟಿ. ನಟರಾಜನ್, ಅನ್ಮೋಲ್‌ಪ್ರೀತ್ ಸಿಂಗ್, ಮಯಾಂಕ್ ಮಾರ್ಕಂಡೆ, ಉಪೇಂದ್ರ ಸಿಂಗ್ ಯಾದವ್, ಉಮ್ರಾನ್ ಮಲಿಕ್, ನಿತೀಶ್ ಕುಮಾರ್ ರೆಡ್ಡಿ, ಫಜಲ್ಹಕ್ ಫಾರೂಕಿ, ಶಹಬಾಜ್ ಅಹ್ಮದ್, ಟ್ರಾವಿಸ್ ಹೆಡ್, ವನಿಂದು ಹಸರಂಗ, ಜಯದೇವ್ ಉನದ್ಕಟ್‌, ಆಕಾಶ್ ಸಿಂಗ್, ಜಾತವೇಧ್ ಸುಬ್ರಹ್ಮಣ್ಯನ್
ರಮೇಶ ಕೋಟೆ
ಲೇಖಕರ ಬಗ್ಗೆ
ರಮೇಶ ಕೋಟೆ
ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ 2020ರ ಮಾರ್ಚ್‌ನಿಂದ ಕ್ರೀಡಾ ಪತ್ರಕರ್ತರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿಶ್ವವಾಣಿ ದಿನ ಪತ್ರಿಕೆ, ಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾ ಸುದ್ದಿ ಸಂಸ್ಥೆ, ಸಂಜೆ ವಾಣಿ ಹಾಗೂ ಈ ಸಂಜೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಇವರು ಹೊಂದಿದ್ದಾರೆ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ ಹಾಗೂ ಅಂಕಣಗಳನ್ನು ಬರೆಯುವುದು ಇವರ ಆಸಕ್ತದಾಯಕ ವಿಷಯಗಳು. ಕನ್ನಡ ಸಾಹಿತ್ಯ ಓದುವುದು, ಕ್ರಿಕೆಟ್‌ ಆಡುವುದು, ಟ್ರೆಕ್ಕಿಂಗ್‌, ಬೈಕ್‌ ರೈಡಿಂಗ್‌, ಫೋಟೋಗ್ರಫಿ ಇವು ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ