ಆ್ಯಪ್ನಗರ

ರಬಡ ಯಾರ್ಕರ್ ಐಪಿಎಲ್‌ನ ಶ್ರೇಷ್ಠ ಬಾಲ್: ದಾದಾ

ಐಪಿಎಲ್‌ನಲ್ಲಿ ಕೆಕೆಆರ್ ವಿರುದ್ಧ ಟೈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೂಪರ್ ಗೆಲುವು ದಾಖಲಿಸಿದೆ. ಸೂಪರ್ ಓವರ್‌ನಲ್ಲಿ ನಿಖರ ದಾಳಿ ಸಂಘಟಿಸುವ ಮೂಲಕ ಆಂಡ್ರೆ ರಸೆಲ್ ಕ್ಲೀನ್ ಬೌಲ್ಡ್ ಮಾಡಿರುವ ಕಗಿಸೋ ರಬಡ ಐಪಿಎಲ್‌ನಲ್ಲೇ ವರ್ಷದ ದಾಳಿಯನ್ನು ಮಾಡಿದ್ದಾರೆ ಎಂದು ಸೌರವ್ ಗಂಗೂಲಿ ವಿಶ್ಲೇಷಣೆ ಮಾಡಿದ್ದಾರೆ.

Vijaya Karnataka Web 31 Mar 2019, 2:38 pm
ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ನಡೆದ ಟೈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೂಪರ್ ಗೆಲುವು ದಾಖಲಿಸಿದೆ.
Vijaya Karnataka Web kagiso-rabada


ಸೂಪರ್ ಓವರ್‌ನಲ್ಲಿ ಡೆಲ್ಲಿ ಪರ ಕಗಿಸೋ ರಬಡ ಓವರ್ ಎಸೆದಿದ್ದರು. ಗೆಲುವಿಗೆ 11 ರನ್ ಬೇಕಾಗಿರುವಂತೆಯೇ ರಬಡ ಮೊದಲ ಎಸೆತವನ್ನು ಆಂಡ್ರೆ ರಸೆಲ್ ಬೌಂಡರಿಗಟ್ಟಿದ್ದರು.

ಬಳಕಿ ಬಳಿಕ ತಿರುಗೇಟು ನೀಡಿದ ರಬಡ ಮೂರನೇ ಎಸೆತದಲ್ಲಿ ಯಾರ್ಕರ್ ಎಸೆಯುವ ಮೂಲಕ ಅಪಾಯಕಾರಿ ರಸೆಲ್‌ರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಈ ಮೂಲಕ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ರಬಡ ಯಾರ್ಕರ್ ಮುಂದೆ ರಸೆಲ್ ಬಳಿ ಉತ್ತರವೇ ಇರಲಿಲ್ಲ. ಅತಿ ಒತ್ತಡದ ಪರಿಸ್ಥಿತಿಯಲ್ಲೂ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯನ್ನಿಟ್ಟುಕೊಂಡು ಈ ಯುವ ದಕ್ಷಿಣ ಆಫ್ರಿಕಾ ವೇಗಿಯ ನಿಖರ ದಾಳಿಯನ್ನು ಕ್ರಿಕೆಟ್ ಲೋಕವೇ ಬೆರಗಿನಿಂದ ನೋಡುತ್ತಿದೆ.

ಈ ನಡುವೆ ರಬಡ ಯಾರ್ಕರ್ ದಾಳಿಯು ಪ್ರಸಕ್ತ ಸಾಲಿನ ಶ್ರೇಷ್ಠ ದಾಳಿ ಎಂದು ಗಂಗೂಲಿ ಪ್ರಶಂಸೆಯನ್ನು ಮಾಡಿದ್ದಾರೆ. ಅಲ್ಲದೆ ಆ ಹಂತದಲ್ಲಿ ಅಂತಹದೊಂದು ನಿಖರ ದಾಳಿಯನ್ನು ಮಾಡುವುದು ನಿಜಕ್ಕೂ ಅವಿಶ್ವಸನೀಯ ಎಂದು ದಾದ ಸೇರಿಸಿದರು.

ಈ ಗೆಲುವು ಅನಿವಾರ್ಯವಾಗಿತ್ತು. ಕಳೆದ ವರ್ಷ ಉತ್ತಮವಾಗಿರಲಿಲ್ಲ. ಇಂದೊಂದು ಯುವ ತಂಡ. ಇಂತಹ ಗೆಲುವುಗಳು ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಇದು ಸಾಮಾನ್ಯ ವಿಜಯಕ್ಕಿಂತಲೂ ಮಿಗಿಲಾಗಿದ್ದು ಎಂದು ಡೆಲ್ಲಿ ತಂಡದ ಮಾರ್ಗದರ್ಶಕರೂ ಆಗಿರುವ ಗಂಗೂಲಿ ಸೇರಿಸಿದರು.

ಅದೇ ಹೊತ್ತಿಗೆ 99 ರನ್ನಿಗೆ ಔಟಾಗಿರುವ ಪೃಥ್ವಿ ಶಾ, ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ಐಪಿಎಲ್ ಶತಕಗಳನ್ನು ಬಾರಿಸಲಿದ್ದಾರೆ ಎಂದು ಗಂಗೂಲಿ ಭವಿಷ್ಯ ನುಡಿದರು.

ಶ್ರೇಷ್ಠ ಆಟಗಾರರು ಪಂದ್ಯವನ್ನು ಮುಗಿಸಿಯೇ ಹಿಂತಿರುತ್ತಾರೆ. ಪೃಥ್ವಿ ಶಾ ಅದನ್ನೇ ಮಾಡಿದ್ದಾರೆ ಎಂದು 19ರ ಹರೆಯದ ಯುವ ಆಟಗಾರನನ್ನು ಕೊಂಡಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌