ಆ್ಯಪ್ನಗರ

ಹಳೆಯ ವೈರತ್ವ; ಖಲೀಲ್ ಬೇಟೆಯಾಡಿದ ಕೀಮೊ

ಎಡಗೈ ವೇಗಿ ಖಲೀಲ್ ಅಹ್ಮದ್ ಹಾಗೂ ವೆಸ್ಟ್‌ಇಂಡೀಸ್‌ನ್ ಆಲ್‌ರೌಂಡರ್ ಕೀಮೊ ಪಾಲ್ ನಡುವೆ ಹಳೆಯ ಬ್ಯಾಂಡ್ ಆ್ಯಂಡ್ ಬಾಲ್ ವೈರತ್ವಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ಮಗದೊಮ್ಮೆ ವೇದಿಕೆಯೊದಗಿಸಿತ್ತು.

Vijaya Karnataka Web 9 May 2019, 5:20 pm
ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಾಕೌಟ್ ಹಂತದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಹೊರದಬ್ಬಿರುವ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಕ್ವಾಲಿಫೈಯರ್ ಹಂತಕ್ಕೆ ಪ್ರವೇಶಿಸಿದೆ.
Vijaya Karnataka Web khaleel-ahmed


ಇದೆರೂಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಪ್ರಶಸ್ತಿ ಕನಸು ನೂಚ್ಚುನೂರಾಗಿದೆ. ಕೊನೆಯ ಓವರ್‌ನಲ್ಲಿ ಡೆಲ್ಲಿ ಗೆಲುವಿಗೆ ಆರು ರನ್‌ಗಳ ಅವಶ್ಯಕತೆಯಿತ್ತು. ಎಡಗೈ ವೇಗಿ ಖಲೀಲ್ ಅಹ್ಮದ್ ದಾಳಿಯಲ್ಲಿ ಕೀಮೊ ಪಾಲ್ ವಿನ್ನಿಂಗ್ ರನ್ ಬಾರಿಸಿದ್ದರು.

ಅಂದ ಹಾಗೆ ಇವರಿಬ್ಬರ ನಡುವಣ ವೈರತ್ವ ಇಂದು ನಿನ್ನೆ ಆರಂಭವಾಗಿದ್ದಲ್ಲ. 2016 ಅಂಡರ್-19 ವಿಶ್ವಕಪ್ ಫೈನಲ್‌ನಲ್ಲೂ ಖಲೀಲ್ ದಾಳಿಯಲ್ಲೇ ಕೀಮೊ ವಿನ್ನಿಂಗ್ ರನ್ ಬಾರಿಸಿದ್ದರು ಎಂಬುದು ಅಷ್ಟೇ ಗಮನಾರ್ಹವೆನಿಸುತ್ತದೆ.

ಅಂದು ಭಾರತದ ಕಿರಿಯರ ತಂಡ 45.1 ಓವರ್‌ಗಳಲ್ಲಿ 145 ರನ್‌ಗಳಿಗೆ ಸರ್ವಪತನವನ್ನು ಕಂಡಿತ್ತು. ಬಳಿಕ ಗುರಿ ಬೆನ್ನಟ್ಟಿದ ವಿಂಡೀಸ್ 77ಕ್ಕೆ ಐದು ವಿಕೆಟನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕ್ರೀಸಿಗಿಳಿದ ಕೀಮೊ ಪಾಲ್ ನಿರ್ಣಾಯಕ ಜತೆಯಾಟದಲ್ಲಿ ಭಾಗವಹಿಸುವ ಮೂಲಕ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಇಲ್ಲಿ ಮಗದೊಂದು ಗಮನಾರ್ಹ ಅಂಶವೆಂದರೆ ಹೈದರಾಬಾದ್ ವಿರುದ್ಧವೇ ಮೂರು ವಿಕೆಟ್ ಪಡೆದು ಕೀಮೊ ಪಾಲ್ ಐಪಿಎಲ್‌ಗೆ ಭರ್ಜರ ಡೆಬ್ಯು ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌