ಆ್ಯಪ್ನಗರ

ಆರಂಭಿಕನಾಗಿ ಬಡ್ತಿ; ಗಿಲ್ ಫಿಫ್ಟಿ ಶೋ

ಕೋಲ್ಕತಾ ನೈಟ್ ರೈಡರ್ಸ್ ತಂಡದ ಉದಯೋನ್ಮುಖ ಬ್ಯಾಟ್ಸ್‌ಮನ್ ಶುಭಮನ್ ಗಿಲ್, ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಅರ್ಧಶತಕ ಸಾಧನೆ ಮಾಡಿದ್ದಾರೆ.

Vijaya Karnataka Web 12 Apr 2019, 9:17 pm
ಕೋಲ್ಕತಾ: ಯುವ ಭರವಸೆಯ ತಾರೆ ಶುಭಮನ್ ಗಿಲ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. 19ರ ಹರೆಯದ ಈ ಯುವ ಪಂಜಾಬ್ ಆಟಗಾರನ ಬ್ಯಾಟಿಂಗ್ ಕೌಶಲ್ಯ ಕಂಡು ಕ್ರಿಕೆಟ್ ತಜ್ಞರು ಬೆರಗಾಗಿದ್ದಾರೆ.
Vijaya Karnataka Web shubman-gill-fifty


ಆದರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿರುವ ಗಿಲ್ ಅವರಿಂದ ಇದುವರೆಗೆ ನಿರೀಕ್ಷಿತ ಮಟ್ಟದ ಪ್ರದರ್ಶನ ಹೊರಬಂದಿರಲಿಲ್ಲ.

ಪದೇ ಪದೇ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸುತ್ತಿರುವುದು ಗಿಲ್ ಹಿನ್ನಡೆಗೆ ಕಾರಣವಾಗಿತ್ತು. ಕೊನೆಗೂ 19ರ ಹರೆಯದ ಯುವ ಬ್ಯಾಟ್ಸ್‌ಮನ್‌ರನ್ನು ಆರಂಭಿಕನಾಗಿ ಕಣಕ್ಕಿಳಿಸಲು ನಾಯಕ ದಿನೇಶ್ ಕಾರ್ತಿಕ್ ನಿರ್ಧರಿಸಿದ್ದರು.

ಆದರೆ ನಾಯಕನ ಭರವಸೆಯನ್ನು ಹುಸಿಗೊಳಿಸದ ಗಿಲ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬಿರುಸಿನ ಅರ್ಧಶತಕದ ಮೂಲಕ ಉತ್ತರಿಸಿದ್ದಾರೆ. ಇದು 20ನೇ ಐಪಿಎಲ್ ಪಂದ್ಯವನ್ನಾಡುತ್ತಿರುವ ಗಿಲ್ ಬ್ಯಾಟ್‌ನಿಂದ ಸಿಡಿದ ಎರಡನೇ ಅರ್ಧಶತಕವಾಗಿದೆ.

34 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಗಿಲ್ ಅಂತಿಮವಾಗಿ 39 ಎಸೆತಗಳಲ್ಲಿ 65 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು.

2018ರ ಅಂಡರ್-19 ವಿಶ್ವಕಪ್ ಹೀರೊ ಈ ಮೂಲಕ ಐಪಿಎಲ್‌ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌