ಆ್ಯಪ್ನಗರ

ಹೈ ಡ್ರಾಮಾ; ಗರಂ ಆದ ಬರ್ತ್ ಡೇ ಬಾಯ್ ಪೊಲಾರ್ಡ್

ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ನಡೆಯುತ್ತಿರುವ ಫೈನಲ್ ಪಂದ್ಯದ ವೇಳೆಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೀರಾನ್ ಪೊಲಾರ್ಡ್ ತಮ್ಮ ಸಹನೆಯನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.

Vijaya Karnataka Web 12 May 2019, 9:59 pm
Vijaya Karnataka Web keiron-pollard-01
ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಹೈ ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಅನೇಕ ಬಿಸಿ ಬಿಸಿ ಸನ್ನಿವೇಶಗಳು ನಡೆದಿದ್ದರು.

ಈ ನಡುವೆ ಮುಂಬೈ ಇಂಡಿಯನ್ಸ್ ತಂಡದ ಬರ್ತ್ ಡೇ ಬಾಯ್ ಕೀರಾನ್ ಪೊಲಾರ್ಡ್ ಗರಂ ಆಗಿರುವ ಘಟನೆಯು ಅನೇಕ ನಾಟಕೀಯ ಸನ್ನಿವೇಶಗಳಿಗೆ ಎಡೆ ಮಾಡಿಕೊಟ್ಟಿತ್ತು.

ಚೆನ್ನೈ ವೇಗಿ ಡ್ವೇನ್ ಬ್ರಾವೋ ಎಸೆದ ಮುಂಬೈ ಇನ್ನಿಂಗ್ಸ್‌ನ ಮುಂಬೈ ಇನ್ನಿಂಗ್ಸ್‌ನ 20ನೇ ಓವರ್‌ನಲ್ಲಿ ಘಟನೆ ನಡೆದಿತ್ತು. ಮೊದಲ ಎಸೆತದ ಪೊಲಾರ್ಡ್ ಕ್ರೀಸ್ ಬಿಟ್ಟು ತೆರಳಿದ್ದರಿಂದ್ದ ಬ್ರಾವೋ ಅಗಲವಾದ ಎಸೆತವನ್ನು ಅಂಪೈರ್ ವೈಡ್ ನೀಡಲಿಲ್ಲ.


ಆದರೆ ಎರಡನೇ ಎಸೆತದಲ್ಲಿ ಕ್ರೀಸ್ ಕದಲದಿದ್ದರೂ ಮತ್ತದೇ ಸಮಾನವಾದ ಅಗಲವಾದ ಎಸೆತವನ್ನು ವೈಡ್ ನೀಡದಿರುವುದು ಪೊಲಾರ್ಡ್ ಕೋಪಕ್ಕೆ ಕಾರಣವಾಯಿತು. ಪರಿಣಾಮ ಬ್ಯಾಟ್‌ನ್ನು ಮೇಲಕ್ಕೆಸೆದರು.

ಬಳಿಕ ಬ್ರಾವೋ ಮೂರನೇ ಎಸೆತ ದಾಳಿ ಮಾಡಲು ಬಂದಾಗ ಮೊದಲೇ ಕ್ರೀಸ್ ಬಿಟ್ಟು ನಿಂತಿದ್ದ ಪೊಲಾರ್ಡ್, ನೇರವಾಗಿ ಕ್ರೀಸ್‌ನಿಂದ ಹೊರಕ್ಕೆ ಸರಿದರು. ಇದರಿಂದ ಬ್ರಾವೋ ತಮ್ಮ ರನ್-ಅಪ್ ಅರ್ಧದಲ್ಲೇ ಮೊಟಕುಗೊಳಿಸಬೇಕಾಯಿತು.

ತಕ್ಷಣ ಮಧ್ಯೆ ಪ್ರವೇಶಿಸಿದ ಅಂಪೈರ್‌ಗಳು ಪೊಲಾರ್ಡ್‌ಗೆ ಎಚ್ಚರಿಕೆಯನ್ನು ನೀಡಿದರು. ಇದರ ಸಿಟ್ಟಲ್ಲಿ ಪೊಲಾರ್ಡ್ ಅಂತಿಮ ಎರಡು ಎಸೆತಗಳನ್ನು ಬೌಂಡರಿ ಬಾರಿಸುವ ಮೂಲಕ ಸೇಡು ತೀರಿಸಿಕೊಂಡರು.

ಅಂತಿಮವಾಗಿ 25 ಎಸೆತಗಳನ್ನು ಎದುರಿಸಿದ ಪೊಲಾರ್ಡ್ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 41 ರನ್ ಗಳಿಸಿ ಅಜೇಯರಾಗುಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌