ಆ್ಯಪ್ನಗರ

ರಸೆಲ್ ಸಿಕ್ರೇಟ್ ಕೋಡ್ ಹ್ಯಾಕ್ ಮಾಡಿದ ಸ್ಲಿಂಗಾ ಮಾಲಿಂಗ!

ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಕೆಕೆಆರ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಆಂಡ್ರೆ ರೆಸಲ್ ಅವರನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡುವಲ್ಲಿ ಮುಂಬೈ ಇಂಡಿಯನ್ಸ್‌ನ ಲಸಿತ್ ಮಾಲಿಂಗ ಯಶಸ್ವಿಯಾಗಿದ್ದಾರೆ.

Vijaya Karnataka Web 5 May 2019, 11:44 pm
ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಆ ದೈತ್ಯ ಬ್ಯಾಟ್ಸ್‌ಮನ್‌ರನ್ನು ಔಟ್ ಮಾಡಲು ಯಾವ ಬೌಲರ್‌ನಿಂದಲೂ ಸಾಧ್ಯವಾಗುತ್ತಿರಲಿಲ್ಲ.
Vijaya Karnataka Web malinga-russell


ಆತನ ವಿಕೆಟ್ ಪಡೆಯುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೌದು, ನಾವು ಮಾತನಾಡುತ್ತಿರುವುದು ಬೇರೆ ಯಾರ ಬಗ್ಗೆಯೂ ಅಲ್ಲ. ಐಪಿಎಲ್‌ನಲ್ಲಿ ಮಸಲ್ ಪವರ್ ಮೂಲಕ ಕ್ರಿಕೆಟ್ ಪ್ರೀಮಿಗಳ ಮನ ಗೆದ್ದಿರುವ ಕೋಲ್ಕೊತಾ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್ ಆಟಗಾರ ಆಂಡ್ರೆ ರಸೆಲ್.

ಅಂತಹ ಪರಿಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಸಲ್ ಮುಗ್ಗರಿಸಿದ್ದಾರೆ. ಪರಿಣಾಮ ಖೆಕಆರ್ ಕೂಟದಿಂದಲೇ ಹೊರನಡೆದಿದೆ.

ಅಷ್ಟಕ್ಕೂ ರಸೆಲ್ ಸಿಕ್ರೇಟ್ ಕೋಡ್ ಹ್ಯಾಕ್ ಮಾಡಿದವರು ಯಾರು ಗೊತ್ತೇ? ಹೌದು, ಮುಂಬೈ ಪರ ಅತಿ ಹೆಚ್ಚು ಯಶಸ್ಸನ್ನು ತಂದುಕೊಟ್ಟಿರುವ ಹಿರಿಯ ಅನುಭವಿ ಬಲಗೈ ವೇಗದ ಬೌಲರ್ ಸ್ಲಿಂಗಾ ಖ್ಯಾತಿಯ ಲಸಿತ್ ಮಾಲಿಂಗ.

ಅಮೋಘ ರಣತಂತ್ರ ರೂಪಿಸುವ ಮೂಲಕ ಒಂದು ಒಂದು ಎಸೆತದಲ್ಲಿ ರಸೆಲ್‌ಗೆ ಪೆವಿಲಿಯನ್ ಹಾದಿ ತೋರಿಸಿರುವ ಮಾಲಿಂಗ ಎಲ್ಲರ ಮೆಚ್ಚೆಗೆಗೆ ಪಾತ್ರವಾಗಿದ್ದಾರೆ. ಅಷ್ಟೇ ಯಾಕೆ ಕೆಕೆಆರ್‌ ಇನ್ನಿಂಗ್ಸ್‌ನ 13ನೇ ಓವರ್‌ನಲ್ಲಿ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಜತೆಗೆ ಆಂಡ್ರೆ ರಸೆಲ್‌‌ರನ್ನು ಬೆನ್ನು ಬೆನ್ನಿಗೆ ಅಟ್ಟಿದ್ದರು.

ಇಲ್ಲಿಗೆ ಮಾಲಿಂಗ ಬೇಟೆ ನಿಲ್ಲಲಿಲ್ಲ. ಬಳಿಕ ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದ ನಿತೀಶ್ ರಾಣಾ ಅವರ ಓಟಕ್ಕೂ ಬ್ರೇಕ್ ಹಾಕಿದರು. ಈ ಮೂಲಕ ತಮ್ಮ ಮೂರು ಓವರ್‌ಗಳ ಕೋಟಾದಲ್ಲಿ 35 ರನ ಬಿಟ್ಟುಕೊಟ್ಟರೂ ಪ್ರಮುಖ ಮೂರು ವಿಕೆಟುಗಳನ್ನು ಕಬಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌