ಆ್ಯಪ್ನಗರ

ಯುವ ಕೀಪರ್‌ ಇಶಾನ್‌ಗೆ ಮಹಿ ಟಿಪ್ಸ್

ಮೈದಾನದಲ್ಲಿ ಧೋನಿ ಅವರ ಸ್ಟಂಪಿಂಗ್ ಮಿಸ್ ಮಾಡಿದ ಇಶಾನ್‌ ಕಿಶಾನ್‌ಗೆ ಪಂದ್ಯದ ಬಳಿಕ ಮಹಿ ಟಿಪ್ಸ್ ನೀಡುತ್ತಿದ್ದರು

Vijaya Karnataka Web 29 Apr 2018, 5:15 pm
ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಚಾಂಪಿಯನ್‌ಶಿಪ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಮುಂಬಯಿ ಇಂಡಿಯನ್ಸ್ ಸಾಂಪ್ರದಾಯಿಕ ಬದ್ಧ ವೈರಿಯಾಗಿರಬಹುದು.
Vijaya Karnataka Web dhoni-ishan


ಆದರೆ ಅತ್ಯುತ್ತಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಬಂದಿರುವ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಮಾತ್ರ ಎಂದೂ ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನವನ್ನು ನೀಡುವುದನ್ನು ಮರೆಯುದಿಲ್ಲ.

ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲೂ ಇಂತಹದೊಂದು ದೃಶ್ಯ ಕಂಡುಬಂದಿತ್ತು. ಮೈದಾನದಲ್ಲಿ ಧೋನಿ ಅವರ ಸ್ಟಂಪಿಂಗ್ ಮಿಸ್ ಮಾಡಿದ ಇಶಾನ್‌ ಕಿಶಾನ್‌ಗೆ ಪಂದ್ಯದ ಬಳಿಕ ಮಹಿ ಟಿಪ್ಸ್ ನೀಡುತ್ತಿದ್ದರು.

A post shared by Mumbai Indians (@mumbaiindians) on Apr 28, 2018 at 11:48am PDT

ಜಾರ್ಖಂಡ್ ಪರ ಧೋನಿ ಹಾಗೂ ಯುವ ಪ್ರತಿಭಾವಂತ ವಿಕೆಟ್ ಕೀಪರ್ ಎಡಗೈ ಬ್ಯಾಟ್ಸ್‌ಮನ್ ಆಗಿರುವ ಇಶಾನ್ ಕಿಶಾನ್ ಜತೆಯಾಗಿ ಆಡುತ್ತಾರೆ. ಈಗ ಭವಿಷ್ಯದ ತಾರೆಯಾಗಿ ಹೊರಹೊಮ್ಮುತ್ತಿರುವ ಇಶಾನ್‌ಗೆ ಮಹಿ ಪಾಠ ಹೇಳಿ ಕೊಟ್ಟಿದ್ದಾರೆ.

ಪ್ರಸ್ತುತ ಚಿತ್ರವನ್ನು ಮುಂಬಯಿ ಇಂಡಿಯನ್ಸ್ ಅಧಿಕೃತ ಪುಟದಲ್ಲಿ ಹಂಚಿಕೊಂಡಿರುವುದು ಗಮನಾರ್ಹ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌