ಆ್ಯಪ್ನಗರ

ಗೇಲ್ ಸ್ಟಾರ್ಮ್; ಕುಣಿದು ಕುಪ್ಪಳಿಸಿದ ಪ್ರೀತಿ

ಐಪಿಎಲ್ 2018ನೇ ಆವೃತ್ತಿಯಲ್ಲಿ ಸೋಲರಿಯದ ಸರದಾರನಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಂದುವರಿದಿತ್ತು. ಇವರೆಡು ತಂಡಗಳು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೈಯಲ್ಲಿ ಸೋಲಿನ ಶಾಕ್ ಎದುರಿಸಿವೆ.

Vijaya Karnataka Web 20 Apr 2018, 4:53 pm
ಮೊಹಾಲಿ: ಐಪಿಎಲ್ 2018ನೇ ಆವೃತ್ತಿಯಲ್ಲಿ ಸೋಲರಿಯದ ಸರದಾರನಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಂದುವರಿದಿತ್ತು. ಇವರೆಡು ತಂಡಗಳು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೈಯಲ್ಲಿ ಸೋಲಿನ ಶಾಕ್ ಎದುರಿಸಿವೆ.
Vijaya Karnataka Web chris-gayle-preity-zinta


ಚೆನ್ನೈ ವಿರುದ್ಧ 33 ಎಸೆತಗಳಲ್ಲಿ 63 ರನ್ ಗಳಿಸಿರುವ ಕ್ರಿಸ್ ಗೇಲ್ ಹೈದರಾಬಾದ್ ವಿರುದ್ಧ 58 ಎಸೆತಗಳಲ್ಲಿ ಅಮೋಘ ಶತಕವನ್ನು ಬಾರಿಸಿದ್ದರು. ಈ ಮೂಲಕ ಸತತ ಎರಡನೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದಾರೆ.

ಅತ್ತ ಗೇಲ್ ಪ್ರದರ್ಶನದಿಂದ ಅತೀವ ಸಂತಸಗೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲಕಿ ಪ್ರೀತಿ ಜಿಂಟಾ ಕುಣಿದು ಕುಪ್ಪಳಿಸಿದ್ದಾರೆ.

ಮೈದಾನದಲ್ಲೇ ಗೇಲ್ ಜತೆ ಸ್ಟೆಪ್ ಹಾಕಿದ ಪ್ರೀತಿ, ಬಳಿಕ ಟ್ವಿಟರ್ ಮೂಲಕವೂ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಗೇಲ್ ಶತಕ ಹಲವಾರು ಕಾರಣಗಳಿಂದಾಗಿ ವಿಶೇಷವೆನಿಸಿದೆ. ಇದು 2018ನೇ ಐಪಿಎಲ್‌ನಲ್ಲಿ ದಾಖಲಾದ ಮೊದಲ ಶತಕವಾಗಿದೆ.

ಹಾಗೆಯೇ ಐಪಿಎಲ್ ಇತಿಹಾಸದಲ್ಲೇ ದಾಖಲೆಯ 6ನೇ ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌