ಆ್ಯಪ್ನಗರ

ಸೋಲಿನಲ್ಲೂ ಸಾಗರದ ಅಲೆಯಂತೆ ಅಪ್ಪಳಿಸಿದ ಆರ್‌ಸಿಬಿ ಫ್ಯಾನ್ಸ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ಯಾನ್ಸ್‌, ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ನಿಷ್ಠಾವಂತ ಅಭಿಮಾನಿಗಳೆಂಬ ಹಿರಿಮೆಗೆ ಪಾತ್ರವಾಗಿದ್ದಾರೆ. ಇದೇ ಕಾರಣಕ್ಕಾಗಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ನ ಬೆಸ್ಟ್ ಫ್ಯಾನ್ಸ್ ಬಿರುದನ್ನು ನೀಡಿದ್ದಾರೆ.

Vijaya Karnataka Web 5 May 2019, 5:20 pm
ಬೆಂಗಳೂರು: ಎಂದಿನಂತೆ ಈ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿಮಾನಿಗಳಿಂದ ದೊರಕಿದ ಬೆಂಬಲ ಅಷ್ಟಿಷ್ಟಲ್ಲ. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನೇ ಮೀರಿ ನಿಂತಿರುವ ಆರ್‌ಸಿಬಿ, ನಿಷ್ಠಾವಂತ ಫ್ಯಾನ್ಸ್ ಬಳಗವನ್ನು ಹೊಂದಿದೆ.
Vijaya Karnataka Web rcb-fans-01


ಐಪಿಎಲ್ ಆರಂಭವಾಗಿ 12 ವರ್ಷಗಳೇ ಸಂದರೂ ಆರ್‌ಸಿಬಿ ಇದುವರೆಗೆ ಟ್ರೋಫಿ ಗೆದ್ದಿಲ್ಲ. ಹಾಗಿದ್ದರೂ ಆರ್‌ಸಿಬಿ ಮೇಲಿನ ಅಭಿಮಾನಿಗಳ ಪ್ರೀತಿ ಮಾತ್ರ ಕಿಂಚಿತ್ತು ಕುಗ್ಗಿಲ್ಲ. ಸೋಲುಗಳ ಮೇಲೆ ಸೋಲುಗಳನ್ನು ಅವಮಾನಕ್ಕೆ ಒಳಗಾಗುತ್ತಿರುವಾಗಲೂ ಅಭಿಮಾನಿಗಳು ಮತ್ತಷ್ಟು ತೀವ್ರತೆಯಿಂದ ಸಾಗರದ ಅಲೆಯಂತೆ ಅಪ್ಪಳಿಸುತ್ತಿದ್ದರು.

ಅದೇ ಕಾರಣಕ್ಕಾಗಿ ಮೊದಲ ಆರು ಪಂದ್ಯಗಳಲ್ಲಿ ಸತತ ಸೋಲುಗಳನ್ನು ಅನುಭವಿಸಿದರೂ ಕೊನೆಯ ಎಂಟು ಪಂದ್ಯಗಳಲ್ಲಿ ಐದು ಪಂದ್ಯಗಳಲ್ಲಿ ಗೆಲುವು ಹಾಗೂ ಒಂದು ಪಂದ್ಯದಲ್ಲಿ ಡ್ರಾ ಫಲಿತಾಂಶ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ನಾಯಕ ವಿರಾಟ್ ಕೊಹ್ಲಿ ಕೂಡಾ ಅಭಿಮಾನಿಗಳು ತೋರಿದ ಪ್ರೀತಿಗೆ ಚಿರಋುಣಿಯಾಗಿದ್ದಾರೆ. ಅಲ್ಲದೆ ತಾವು ಸಹ ಭಾವನಾತ್ಮಕವಾಗಿ ಆರ್‌ಸಿಬಿ ತಂಡವನ್ನು ಅಂಟಿಕೊಂಡಿದ್ದು, ಐಪಿಎಲ್‌ನಲ್ಲೇ ಬೆಸ್ಟ್ ಫ್ಯಾನ್ಸ್ ಎಂಬ ಬಿರುದನ್ನ ನೀಡಿದ್ದಾರೆ. ಅಲ್ಲದೆ ಮುಂದಿನ ವರ್ಷ ಉತ್ತಮ ಪ್ರದರ್ಶನದ ಭರವಸೆ ನೀಡಿದ್ದಾರೆ.

ಆಗಲೇ ಟೂರ್ನಿಯಿಂದ ಹೊರಬಿದ್ದರೂ ತಮ್ಮ ಮೆಚ್ಚಿನ ಆಟಗಾರರ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದರು. ರಾಜಸ್ಥಾನ್ ರಾಯಲ್ಸ್ ವಿರುದ್ಧವಂತೂ ಮಳೆಯಿಂದಾಗಿ ಮೂರು ವರೆ ತಾಸುಗಳಷ್ಟು ವಿಳಂಬವಾದರೂ ಅಭಿಮಾನಿಗಳು ಸ್ಟೇಡಿಯಂನಿಂದ ಕದಲಿಲಿಲ್ಲ. ಕೊನೆಗೂ ರಾತ್ರಿ 11.30ರ ಸುಮಾರಿಗೆ ಆರ್‌ಸಿಬಿ ಅದೇ ಉತ್ಸಾಹದೊಂದಿಗೆ ಜೈಕಾರ ಕೂಗಿದರು.

ಒಟ್ಟಿನಲ್ಲಿ ಕಹಿಯೊಂದಿಗೆ ಟೂರ್ನಿ ಆರಂಭಿಸಿರುವ ಆರ್‌ಸಿಬಿ ಸಿಹಿಯೊಂದಿಗೆ ಮುಂದಿನ ಸಲವೂ ಅದೇ ಕಪ್ ಭರವಸೆಯನ್ನು ನೀಡುತ್ತಾ ವಿದಾಯ ಹಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌