ಆ್ಯಪ್ನಗರ

ಆರ್‌ಸಿಬಿ ತುಂಬ ಅಪಾಯಕಾರಿ: ಕೃಷ್ಣಮಾಚಾರಿ ಶ್ರೀಕಾಂತ್‌

ಪಿಚ್‌ಗಳು ಬರಬರುತ್ತಾ ನಿಧಾನಗತಿಗೆ ತಿರುಗುವುದರಿಂದ, ದೊಡ್ಡ ಮೊತ್ತ ದಾಖಲಾಗುವ ಸಂಭವ ಕಡಿಮೆ. ಟಾಸ್‌ಗೆ ನಿರ್ಣಾಯಕ ಪಾತ್ರ.ಗುರಿ ಬೆನ್ನಟ್ಟುವ ತಂಡಗಳು ಹೆಚ್ಚಗಿ ಗೆಲ್ಲುತ್ತವೆ.

Agencies 28 Apr 2019, 12:30 pm
ಬೆಂಗಳೂರು: ಭಾನುವಾರ ಡೆಲ್ಲಿ ಮತ್ತು ಆರ್‌ಸಿಬಿ ದಿಲ್ಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಹೀಗಾಗಿ ಐಪಿಎಲ್‌ನಲ್ಲಿ ಈ ಭಾನುವಾರ ಅತ್ಯಂತ ಮಹತ್ವದ ದಿನ. ಅಂಕಪಟ್ಟಿಯಲ್ಲಿ ತಳದಲ್ಲಿರುವ ಬೆಂಗಳೂರು ತಂಡವೀಗ ಚಾರ್ಜ್‌ ಆಗಿರುವಂತೆ ಗೋಚರಿಸುತ್ತಿದ್ದು, ಕಳೆದ ಐದು ಪಂದ್ಯಗಳಲ್ಲಿ ಸಂಪೂರ್ಣ ಭಿನ್ನ ಪ್ರದರ್ಶನ ಕಟ್ಟಿಕೊಟ್ಟಿದೆ. ಇನ್ನುಳಿದ ಕೆಲವು ತಂಡಗಳಿಗೆ ಹೋಲಿಸಿದರೆ ಆರ್‌ಸಿಬಿ ತುಂಬ ಅಪಾಯಕಾರಿ.
Vijaya Karnataka Web RCB


ಪಿಚ್‌ಗಳು ಬರಬರುತ್ತಾ ನಿಧಾನಗತಿಗೆ ತಿರುಗುವುದರಿಂದ, ದೊಡ್ಡ ಮೊತ್ತ ದಾಖಲಾಗುವ ಸಂಭವ ಕಡಿಮೆ. ಟಾಸ್‌ಗೆ ನಿರ್ಣಾಯಕ ಪಾತ್ರ.ಗುರಿ ಬೆನ್ನಟ್ಟುವ ತಂಡಗಳು ಹೆಚ್ಚಗಿ ಗೆಲ್ಲುತ್ತವೆ. ಮೊದಲು ಬ್ಯಾಟ್‌ ಮಾಡುವ ತಂಡಗಳು ದೊಡ್ಡ ಮೊತ್ತ ಪೇರಿಸುವ ಆತುರದಲ್ಲಿ ಸಾಮಾನ್ಯವಾಗಿ 15-20 ರನ್‌ ಕಡಿಮೆ ಕಲೆಹಾಕುತ್ತವೆ. ಇಂದು ಡೆಲ್ಲಿ ಗೆದ್ದರೆ ಅಂಕಪಟ್ಟಿಯಲ್ಲಿ ನಂ.1 ಮತ್ತು ನಂ.2 ಸ್ಪರ್ಧೆ ತೀವ್ರಗೊಳ್ಳುತ್ತದೆ. ಈಗಲೂ ನನ್ನ ಅನಿಸಿಕೆ ಪ್ರಕಾರ ಚೆನ್ನೈ ತಂಡವೇ ಅಗ್ರ ಸ್ಥಾನ ಗಳಿಸುತ್ತದೆ.

ದಿನದ ಇನ್ನೊಂದು ಪಂದ್ಯ ಕೆಕೆಆರ್‌ಗೆ ಪುಟಿದೇಳಲು ದೊರೆತಿರುವ ಕೊನೆಯ ಅವಕಾಶ. ರೋಹಿತ್‌ ಫಾರ್ಮ್‌ಗೆ ಮರಳಿರುವ ಹಿನ್ನೆಲೆಯಲ್ಲಿ ಮುಂಬಯಿ ಬಲಿಷ್ಠ ತಂಡವಾಗಿ ಪರಿವರ್ತನೆಯಾಗಿದೆ ಎಂದು ಭಾರತ ತಂಡ ಮಾಜಿ ಸದಸ್ಯ ಕೃಷ್ಣಮಾಚಾರಿ ಶ್ರೀಕಾಂತ್‌ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌