ಆ್ಯಪ್ನಗರ

ಆರ್‌ಸಿಬಿಯ ಪ್ರಯಾಸ್ ಬರ್ಮನ್ ಐಪಿಎಲ್‌ಗೆ ಡೆಬ್ಯು ಮಾಡಿದ ಅತಿ ಕಿರಿಯ ಆಟಗಾರ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ಗೆ ಡೆಬ್ಯು ಮಾಡಿರುವ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ 16ರ ಹರೆಯದ ಆರ್‌ಸಿಬಿ ಪ್ಲೇಯರ್ ಪ್ರಯಾಸ್ ರಾಯ್ ಬರ್ಮನ್ ಪಾತ್ರವಾಗಿದ್ದಾರೆ.

Vijaya Karnataka Web 31 Mar 2019, 6:02 pm
ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ಗೆ ಡೆಬ್ಯು ಮಾಡಿರುವ ಅತಿ ಕಿರಿಯ ಆಟಗಾರನೆಂಬ ಹೆಗ್ಗಳಿಕೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಯಾಸ್ ರಾಯ್ ಬರ್ಮನ್ ಪಾತ್ರವಾಗಿದ್ದಾರೆ.
Vijaya Karnataka Web prayas-rai-barman


ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ಹೈದಾರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಬರ್ಮನ್ ಆರ್‌ಸಿಬಿ ಪರ ಡೆಬ್ಯು ಮಾಡಿದರು.

16 ವರ್ಷ 157ನೇ ದಿನದಲ್ಲಿ ಬರ್ಮನ್ ಐಪಿಎಲ್‌ಗೆ ಪಾದಾರ್ಪಣೆಗೈದಿದ್ದಾರೆ. ಈ ಮೂಲಕ ಅಪಘಾನಿಸ್ತಾನದ ಮುಜೀಬ್ ಉರ್ ರೆಹ್ಮಾನ್ (17 ವರ್ಷ 11 ದಿವಸ) ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಆದರೆ ಬಂಗಾಳ ಮೂಲದ ಬರ್ಮನ್ ಡೆಬ್ಯು ಪಂದ್ಯ ನಿರೀಕ್ಷಿಸಿದಷ್ಟು ಉತ್ತಮವಾಗಿರಲಿಲ್ಲ. ಅಲ್ಲದೆ ಡೆಬ್ಯು ಪಂದ್ಯದಲ್ಲೇ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಅಪಖ್ಯಾತಿಗೊಳಗಾಗಿದ್ದರು. ಬರ್ಮನ್ ದಾಳಿಯಲ್ಲಿ ಎಸ್‌ಆರ್‌ಎಚ್ 56 ರನ್‌ಗಳನ್ನು ಚಚ್ಚಿದ್ದರು.

2002 ಅಕ್ಟೋಬರ್ 25ರಂದು ಜನಿಸಿದ ಬರ್ಮನ್, ಉದಯೋನ್ಮುಖ ಲೆಗ್ ಸ್ಪಿನ್ನರ್‌ಗಳಲ್ಲಿ ಓರ್ವರಾಗಿದ್ದಾರೆ. ಅಲ್ಲದೆ ಹರಾಜಿನಲ್ಲಿ ಬರೋಬ್ಬರಿ 1.5 ಕೋಟಿ ರೂ.ಗಳನ್ನು ಬಾಚಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌