ಆ್ಯಪ್ನಗರ

RCB vs RR ಕದನಕ್ಕೆ ಸಂಭಾವ್ಯ ಪ್ಲೇಯಿಂಗ್‌ XI ಮತ್ತು ಪಿಚ್‌ ವರದಿ ಇಲ್ಲಿದೆ!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಇನ್ನು ಕೇವಲ ಎರಡು ಪಂದ್ಯಗಳ ಮಾತ್ರವೇ ಬಾಕಿ ಉಳಿದಿದೆ. ಮೇ 29ರಂದು ನಡೆಯಲಿರುವ ಫೈನಲ್‌ ಪಂದ್ಯಕ್ಕೆ ಆತಿಥೇಯ ಗುಜರಾತ್‌ ಟೈಟನ್ಸ್‌ ತಂಡ ಈಗಾಗಲೇ ಅರ್ಹತೆ ಪಡೆದುಕೊಂಡಾಗಿದೆ. ಖಾಲಿ ಇರುವ ಮತ್ತೊಂದು ಜಾಗದ ಸಲುವಾಗಿ ಸೆಮಿಫೈನಲ್‌ ಮಹತ್ವ ಪಡೆದಿರುವ ಕ್ವಾಲಿಫೈಯರ್‌ 2 ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಎದುರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಪೈಪೋಟಿ ನಡೆಸಲಿದೆ. ಮೇ 27ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಹೈ-ವೋಲ್ಟೇಜ್‌ ಕದನ ನಡೆಯಲಿದೆ.

Authored byವಿಜೇತ್ ಕುಮಾರ್ | Vijaya Karnataka Web 27 May 2022, 11:16 am

ಹೈಲೈಟ್ಸ್‌:

  • ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿ.
  • ಕ್ವಾಲಿಫೈಯರ್‌-2 ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಎದುರು ಆರ್‌ಸಿಬಿ ಪೈಪೋಟಿ.
  • ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈ-ವೋಲ್ಟೇಜ್ ಪಂದ್ಯ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web RCB vs RR Qualifier 2 Match in IPL 2022
ಸಂಜು ಸ್ಯಾಮ್ಸನ್ ಮತ್ತು ಫಾಫ್‌ ಡು'ಪ್ಲೆಸಿಸ್‌ (ಚಿತ್ರ: ಬಿಸಿಸಿಐ/ಟಿಒಐ).
ಹೊಸದಿಲ್ಲಿ: ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ ಎಲಿಮಿನೇಟರ್‌ ಪಂದ್ಯದಲ್ಲಿ ಮಣ್ಣುಮುಕ್ಕಿಸಿ ಆತ್ಮವಿಶ್ವಾಸದ ಅಲೆಯಲ್ಲಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ, ಇದೀಗ 15ನೇ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಮಹತ್ವ ಪಡೆದಿರುವ ಕ್ವಾಲಿಫೈಯರ್‌-2 ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಎದುರು ಗೆದ್ದು ಫೈನಲ್‌ಗೆ ಲಗ್ಗೆಯಿಡುವ ಲೆಕ್ಕಾಚಾರ ಮಾಡಿದೆ. ಅತ್ತ ಕ್ವಾಲಿಫೈಯರ್‌-1 ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ಎದುರು 7 ವಿಕೆಟ್‌ಗಳಿಂದ ಸೋತು ಕಂಗಾಲಾದ ರಾಜಸ್ಥಾನ್‌ ರಾಯಲ್ಸ್‌, ಐಪಿಎಲ್ 2022 ಟೂರ್ನಿಯ ಫೈನಲ್‌ ತಲುಪಲು ಇರುವ ಮತ್ತೊಂದು ಅವಕಾಶದ ಸದ್ಬಳಕೆ ಮಾಡಿಕೊಳ್ಳಲು ಎದುರು ನೋಡುತ್ತಿದೆ.
ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್‌ ವರದಿ
ಐಪಿಎಲ್‌ 2021 ಟೂರ್ನಿಯಲ್ಲಿ ಕೆಲ ಪಂದ್ಯಗಳು ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜರುಗಿತ್ತು. ಪಿಚ್‌ ಬ್ಯಾಟಿಂಗ್‌ ಹೇಳಿಮಾಡಿಸಿದಂತ್ತಿದ್ದು, ಹಲವು ಪಂದ್ಯಗಳಲ್ಲಿ ರನ್‌ ಹೊಳೆಯೇ ಹರಿದಿತ್ತು. ಆದರೂ ದೊಡ್ಡ ಬೌಂಡರಿಗಳಿರುವ ಕಾರಣ ಸ್ಪಿನ್ನರ್‌ಗಳಿಗೆ ಇಲ್ಲಿ ಯಶಸ್ಸು ಕೈ ಹಿಡಿಯುತ್ತದೆ. ಹೀಗಾಗಿ ಟಾಸ್‌ ಗೆದ್ದ ತಂಡ ರನ್‌ ಚೇಸ್‌ ಮಾಡುವ ಸಾಧ್ಯತೆ ಹೆಚ್ಚು. ಏಕೆಂದರೆ ಕ್ರೀಡಾಂಗಣದ ಹುಲ್ಲು ಹಾಸಿನ ಮೇಲಿನ ತೇವಾಂಶದ ಸಮಸ್ಯೆ ಈ ಕ್ರೀಡಾಂಗಣದಲ್ಲಿ ಅಷ್ಟೇನು ಇಲ್ಲ. ಎದುರಾಳಿಯನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರೆ, ಚೇಸಿಂಗ್‌ ಸುಲಭವಾಗುತ್ತದೆ. ಇಲ್ಲಿ ಈವರೆಗೆ 17 ಟಿ20 ಪಂದ್ಯಗಳು ನಡೆದಿದ್ದು, ಮೊದಲ ಇನಿಂಗ್ಸ್‌ನಲ್ಲಿ 162 ರನ್‌ ಸದಾಸರಿ ಮೊತ್ತವಾಗಿದೆ. ಜೊತೆಗೆ ಚೇಸಿಂಗ್‌ ಮಾಡಿದ ತಂಡಗಳೇ ಹೆಚ್ಚು ಪಂದ್ಯಗಳನ್ನು ಗೆದ್ದಿವೆ.

ರಾಜಸ್ಥಾನ್‌ ರಾಯಲ್ಸ್‌ ತಂಡದ ಸಂಯೋಜನೆ
ಸತತ ವೈಫಲ್ಯದ ಬಳಿಕ ಜೋಸ್‌ ಬಟ್ಲರ್‌ ಕೊನೆಗೂ ತಮ್ಮ ಶ್ರೇಷ್ಠ ಲಯಕ್ಕೆ ಮರಳಿದ್ದಾರೆ. ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಬಟ್ಲರ್‌ ಭರ್ಜರಿ ಯಾಗಿ ಬ್ಯಾಟ್‌ ಬೀಸಿದ್ದರು. ಇದೀಗ ಮಾಡು ಇಲ್ಲವೆ ಮಡಿ ಹೋರಾಟ ಮಾಡಬೇಕಿರುವ ಸೆಮಿಫೈನಲ್‌ ಕದನದಲ್ಲೂ ರಾಯಲ್ಸ್‌ ಬಟ್ಲರ್‌ ಮೇಲೆ ಭಾರಿ ನಿರೀಕ್ಷೆ ಇಟ್ಟಿದೆ. ತಂಡದ ಫಿನಿಷರ್‌ ಕೆಲಸ ಸಲುವಾಗಿ ಶಿಮ್ರಾನ್‌ ಹೆಟ್ಮಾಯೆರ್‌ ಮತ್ತು ರಿಯಾನ್‌ ಪರಾಗ್‌ ಇದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಆರ್‌ ಅಶ್ವಿನ್‌, ಟ್ರೆಂಟ್‌ ಬೌಲ್ಟ್‌, ಯುಜ್ವೇಂದ್ರ ಚಹಲ್‌ ಪ್ರಮುಖ ಅಸ್ತ್ರಗಳಾಗಿದ್ದಾರೆ. ಜೊತೆಗೆ ವೇಗಿಗಳಾದ ಪ್ರಸಿಧ್‌ ಕೃಷ್ಣ ಮತ್ತು ಒಬೆಡ್‌ ಮೆಕಾಯ್‌ ಪರಿಣಾಮಕಾರಿ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

'ಐಪಿಎಲ್‌ನಲ್ಲಿಯೇ ಇಂಥಾ ಇನಿಂಗ್ಸ್ ನೋಡಿಲ್ಲ': ರಜತ್‌ ಪಾಟಿದಾರ್‌ ಬ್ಯಾಟಿಂಗ್‌ಗೆ ಕೊಹ್ಲಿ ಮೆಚ್ಚುಗೆ!

ಆರ್‌ಆರ್‌ ಸಂಭಾವ್ಯ ಪ್ಲೇಯಿಂಗ್‌ XI
1. ಯಶಸ್ವಿ ಜೈಸ್ವಾಲ್ (ಓಪನರ್‌)
2. ಜೋಸ್ ಬಟ್ಲರ್ (ಓಪನರ್‌)
3. ಸಂಜು ಸ್ಯಾಮ್ಸನ್ (ನಾಯಕ/ ವಿಕೆಟ್ಕೀಪರ್‌)
4. ದೇವದತ್ ಪಡಿಕ್ಕಲ್ (ಬ್ಯಾಟ್ಸ್‌ಮನ್‌)
5. ರವಿಚಂದ್ರನ್ ಅಶ್ವಿನ್ (ಆಲ್‌ರೌಂಡರ್‌/ ಆಫ್‌ ಸ್ಪಿನ್ನರ್‌)
6. ಶಿಮ್ರಾನ್ ಹೆಟ್ಮೆಯರ್ (ಬ್ಯಾಟ್ಸ್‌ಮನ್‌)
7. ರಿಯಾನ್ ಪರಾಗ್ (ಬ್ಯಾಟ್ಸ್‌ಮನ್‌)
8. ಟ್ರೆಂಟ್ ಬೌಲ್ಟ್ (ಎಡಗೈ ವೇಗಿ)
9. ಪ್ರಸಿಧ್ ಕೃಷ್ಣ (ಬಲಗೈ ವೇಗಿ)
10. ಯುಜ್ವೇಂದ್ರ ಚಹಲ್ (ಲೆಗ್‌ ಸ್ಪಿನ್ನರ್‌)
11. ಒಬೆಡ್ ಮೆಕಾಯ್ (ಎಡಗೈ ವೇಗಿ)

ಆರ್‌ಸಿಬಿ ಬಳಗದಲ್ಲಿ ಬದಲಾವಣೆ ಡೌಟ್‌!
ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ತನ್ನ ಆಡುವ ಹನ್ನೊಂದರಲ್ಲಿ ಬದಲಾವಣೆ ತರುವುದು ಅನುಮಾನ. ಎಲಿಮಿನೇಟರ್‌ ಪಂದ್ಯದಲ್ಲಿ ಆಡಿಸಿದ ಆಟಗಾರರನ್ನೇ ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ಮೊಹಮ್ಮದ್‌ ಸಿರಾಜ್‌ ಹೆಚ್ಚು ರನ್‌ ಕೊಡುತ್ತಿರುವುದು ಆರ್‌ಸಿಬಿಗೆ ತಲೆನೋವಾಗಿ ಪರಿಣಮಿಸಿದೆ.

'ಮೆಗಾ ಹರಾಜಿನಲ್ಲಿ ನನ್ನನ್ನು ಕೈಬಿಟ್ಟಿದ್ದರು' : ತಮ್ಮ ಸಾಮರ್ಥ್ಯ ಬಹಿರಂಗಪಡಿಸಿದ ರಜತ್ ಪಾಟಿದಾರ್!

ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI
1. ಫಾಫ್ ಡು'ಪ್ಲೆಸಿಸ್ (ನಾಯಕ/ ಓಪನರ್‌)
2. ವಿರಾಟ್ ಕೊಹ್ಲಿ (ಬ್ಯಾಟ್ಸ್‌ಮನ್‌)
3. ರಜತ್ ಪಾಟಿದಾರ್ (ಬ್ಯಾಟ್ಸ್‌ಮನ್‌)
4. ಗ್ಲೆನ್ ಮ್ಯಾಕ್ಸ್‌ವೆಲ್ (ಬ್ಯಾಟಿಂಗ್‌ ಆಲ್‌ರೌಂಡರ್‌)
5. ಮಹಿಪಾಲ್ ಲೊಮ್ರೊರ್ (ಬ್ಯಾಟ್ಸ್‌ಮನ್‌)
6. ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್‌/ ಬ್ಯಾಟ್ಸ್‌ಮನ್‌)
7. ಶಹಬಾಝ್‌ ಅಹ್ಮದ್ (ಆಲ್‌ರೌಂಡರ್‌)
8. ವನಿಂದು ಹಸರಂಗ (ಲೆಗ್‌ ಸ್ಪಿನ್ನರ್‌)
9. ಹರ್ಷಲ್ ಪಟೇಲ್ (ಬೌಲಿಂಗ್‌ ಆಲ್‌ರೌಂಡರ್‌)
10. ಜೋಶ್ ಹ್ಯಾಜಲ್‌ವುಡ್ (ಬಲಗೈ ವೇಗಿ)
11. ಮೊಹಮ್ಮದ್ ಸಿರಾಜ್ (ಬಲಗೈ ವೇಗಿ)

ಮುಖಾಮುಖಿ ದಾಖಲೆ
ಒಟ್ಟು ಪಂದ್ಯ: 27
ರಾಜಸ್ಥಾನ್‌ ರಾಯಲ್ಸ್‌ಗೆ ಜಯ: 11
ಆರ್‌ಸಿಬಿಗೆ ಗೆಲುವು: 13
ಫಲಿತಾಂಶವಿಲ್ಲ: 03

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌
ಲೈವ್‌ ಸ್ಟ್ರೀಮಿಂಗ್‌: ಡಿಸ್ನಿ+ಹಾಟ್‌ಸ್ಟಾರ್‌
ಪಂದ್ಯ ಆರಂಭ: ರಾತ್ರಿ 7.30ಕ್ಕೆ
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌