ಆ್ಯಪ್ನಗರ

ಕೊಹ್ಲಿ, ಸೆಹ್ವಾಗ್ ಎಲೈಟ್ ಪಟ್ಟಿಗೆ ಸೇರಿದ ಸಂಜು

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಶತಕಗಳನ್ನು ಬಾರಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಸಂಜು ಸ್ಯಾಮ್ಸನ್ ಬರೆದಿದ್ದಾರೆ. ಕೇರಳದ ಈ ಲಿಟ್ಲ್ ಸೂಪರ್ ಸ್ಟಾರ್ ಐಪಿಎಲ್‌ನಲ್ಲಿ ಎರಡನೇ ಶತಕ ಸಾಧನೆ ಮಾಡಿದ್ದಾರೆ.

Vijaya Karnataka Web 29 Mar 2019, 10:12 pm
ಬೆಂಗಳೂರು: ಈ ಯುವ ಬ್ಯಾಟ್ಸ್‌ಮನ್ ಬಗ್ಗೆ ಕ್ರಿಕೆಟ್ ಪಂಡಿತರು ಈಗಾಗಲೇ ಸಾಕಷ್ಟು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಒಂದು ಬಾರಿ ಟೀಮ್ ಇಂಡಿಯಾ ಬಾಗಿಲು ತೆರೆದುಕೊಂಡರೂ ಸಹ ಸ್ಥಿರತೆಯ ಕೊರತೆಯಿಂದಾಗಿ ಹೊರಗುಳಿಯಬೇಕಾಯಿತು.
Vijaya Karnataka Web sanju-samson-century-01


ಇದೀಗ ಮತ್ತೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಂಜು ಮಿಂಚಲು ಆರಂಭಿಸಿದ್ದಾರೆ. ಅಷ್ಟೇ ಯಾಕೆ ಐಪಿಎಲ್‌ನಲ್ಲಿ ತನ್ನ ಎರಡನೇ ವೈಯಕ್ತಿಕ ಶತಕ ಸಾಧನೆ ಮಾಡಿದ್ದಾರೆ.

ಇದರೊಂದಿಗೆ ಐಪಿಎಲ್‌ನಲ್ಲಿ ಎರಡು ಶತಕಗಳನ್ನು ಬಾರಿಸಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ.

ಅಷ್ಟೇ ಯಾಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್ ಹಾಗೂ ಮುರಳಿ ವಿಜಯ್ ಅವರ ಎಲೈಟ್ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಇದರಿಂದಲೇ ಸಂಜು ಸಾಮರ್ಥ್ಯವನ್ನು ತುಲನೆ ಮಾಡಬಹುದಾಗಿದೆ. ಸಂಜು ಇದೇ ಫಾರ್ಮ್ ಕಾಪಾಡಿಕೊಂಡಲ್ಲಿ ಮುಂಬರುವ ದಿನಗಳಲ್ಲಿ ಭಾರತ ತಂಡ ಸೇರಲಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ.

ಐಪಿಎಲ್‌ನಲ್ಲಿ ಭಾರತೀಯರ ಪೈಕಿ ಕೊಹ್ಲಿ ನಾಲ್ಕು, ಸೆಹ್ವಾಗ್, ವಿಜಯ್ ಹಾಗೂ ಸಂಜು ತಲಾ ಎರಡು ಶತಕಗಳನ್ನು ಬಾರಿಸಿದ್ದಾರೆ.

ಸಂಜು ಚೊಚ್ಚಲ ಐಪಿಎಲ್ ಶತಕವು 2017ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ವಿರುದ್ಧ ದಾಖಲಾಗಿತ್ತು. ಅಂದು ಸಂಜು ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.

54 ಎಸೆತಗಳಲ್ಲಿ ಶತಕ ಬಾರಿಸಿರುವ ಸಂಜು ಅಂತಿಮವಾಗಿ 55 ಎಸೆತಗಳಲ್ಲಿ 10 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ನೆರವಿನಿಂದ ಅಜೇಯ 102 ರನ್ ಗಳಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌