ಆ್ಯಪ್ನಗರ

ಸನ್‌ರೈಸರ್ಸ್‌ಗೆ ನಿರಾಶೆ, ಜಯದೊಂದಿಗೆ ಅಭಿಯಾನ ಮುಗಿಸಿದ ಪಂಜಾಬ್‌!

IPL 2022, SRH vs PBKS Match Highlights: ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 70ನೇ ಹಾಗೂ ಅಂತಿಮ ಲೀಗ್‌ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ. ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳು ಈ ಪ್ರತಿಷ್ಠ ಸಲುವಾಗಷ್ಟೇ ಹೋರಾಟ ನಡೆಸಿದವು. ಎಲ್ಲಾ ವಿಭಾಗದಲ್ಲಿಯೂ ಪ್ರಾಬಲ್ಯ ಮೆರೆದ ಪಂಜಾಬ್‌ ಕಿಂಗ್ಸ್‌ ತಂಡ ಅಂತಿಮವಾಗಿ 5 ವಿಕೆಟ್‌ಗಳ ಜಯ ದಾಖಲಿಸಿ ಹತ್ತು ತಂಡಗಳಿರುವ ಅಂಕಪಟ್ಟಿಯಲ್ಲಿ 6ನೇ ಸ್ಥಾನದೊಂದಿಗೆ ಅಭಿಯಾನ ಅಂತ್ಯಗೊಳಿಸಿದೆ.

Authored byವಿಜೇತ್ ಕುಮಾರ್ | Vijaya Karnataka Web 23 May 2022, 12:11 pm

ಹೈಲೈಟ್ಸ್‌:

  • ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿ.
  • ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದ ಪಂಜಾಬ್‌ ಕಿಂಗ್ಸ್‌.
  • 22 ಎಸೆಸತಗಳಲ್ಲಿ ಅಜೇಯ 49 ರನ್‌ ಸಿಡಿಸಿ ಅಬ್ಬರಿಸಿದ ಲಿಯಾಮ್‌ ಲಿವಿಂಗ್‌ಸ್ಟೋನ್.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Liam Livingstone in SRH vs PBKS IPL 2022 Match 70
ಪಂಜಾಬ್‌ ಕಿಂಗ್ಸ್‌ ಪರ ಅಬ್ಬರಿಸಿದ ಲಿಯಾಮ್‌ ಲಿವಿಂಗ್‌ಸ್ಟೋನ್‌ (ಚಿತ್ರ: ಬಿಸಿಸಿಐ/ಐಪಿಎಲ್).
ಮುಂಬೈ: ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಬಲಿಷ್ಠ ತಂಡ ರಚಿಸಿ ಟ್ರೋಫಿ ಗೆಲ್ಲುವ ಫೇವರಿಟ್‌ ತಂಡವಾಗಿ ಕಣಕ್ಕಿಳಿದಿದ್ದ ಪಂಜಾಬ್‌ ಕಿಂಗ್ಸ್‌ ತಂಡ 10 ತಂಡಗಳಿರುವ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಭಾನುವಾರ ನಡೆದ ಐಪಿಎಲ್ 2022 ಟೂರ್ನಿಯ 70ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಆಲ್‌ರೌಂಡ್‌ ಆಟವಾಡಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು 5 ವಿಕೆಟ್‌ಗಳ ಜಯ ದಾಖಲಿಸಿತು. ಈ ಜಯದೊಂದಿಗೆ ಪಂಜಾಬ್‌ ಕಿಂಗ್ಸ್‌ ಆಡಿದ ಒಟ್ಟು 14 ಪಂದ್ಯಗಳಲ್ಲಿ ತಲಾ 7 ಜಯ ಮತ್ತು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದೆ.
ಗೆಲ್ಲಲು 158 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಪಂಜಾಬ್‌ ಕಿಂಗ್ಸ್‌ ಆರಂಭದಿಂದಲೂ ಹೊಡಿ ಬಡಿ ಆಟವನ್ನಾಡಿತು. ಕೇವಲ 15.1 ಓವರ್‌ಗಳಲ್ಲಿ 5 ವಿಕೆಟ್‌ಗೆ 160 ರನ್‌ ಸಿಡಿಸಿ ಭರ್ಜರಿ ಜಯದೊಂದಿಗೆ ಟೂರ್ನಿಗೆ ವಿದಾಯ ಹೇಳಿತು.

ಪಂಜಾಬ್‌ ಪರ ಅಬ್ಬರಿಸಿದ ಲಿಯಾಮ್‌ ಲಿವಿಂಗ್‌ಸ್ಟೋನ್‌ 5 ಸಿಕ್ಸರ್‌ಗಳೊಂದಿಗೆ 22 ಎಸೆತಗಳಲ್ಲಿ ಅಜೇಯ 49 ರನ್‌ ಸಿಡಿಸಿ ತಂಡವನ್ನು ಸುಲಭವಾಗಿ ಜಯದ ದಡ ಮುಟ್ಟಿಸಿದರು. ಇದಕ್ಕೂ ಮುನ್ನ ಜಾಣಿ ಬೈರ್‌ಸ್ಟೋವ್ (23) ಮತ್ತು ಶಿಖರ್‌ ಧವನ್ (39) ಭರ್ಜರಿ ಬ್ಯಾಟಿಂಗ್‌ ನಡೆಸಿದರು. ಸನ್‌ರೈಸರ್ಸ್‌ ಪರ ಫಝಲ್ಹಕ್‌ ಫಾರೂಕಿ 2 ವಿಕೆಟ್‌ ಪಡೆದು ಗಮನ ಸೆಳೆದರು.

SRH vs PBKS ಸ್ಕೋರ್‌ಕಾರ್ಡ್‌

ಸವಾಲಿನ ಮೊತ್ತ ದಾಖಲಿಸಿದ ಸನ್‌ರೈಸರ್ಸ್‌
ಸತತ ಐದು ಪಂದ್ಯಗಳಲ್ಲಿ ಸೋತ ಬಳಿಕ ಸಾಲು ಸಾಲು ವೈಫಲ್ಯ ಕಂಡ ಸನ್‌ರೈಸರ್ಸ್‌ ಹೈದರಾಬಾದ್ ತಂಡ 15ನೇ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಸವಾಲಿನ ಗುರಿ ನೀಡಲಷ್ಟೇ ಶಕ್ತವಾಯಿತು. ಟಾಸ್‌ ಗೆದ್ದ ಹಂಗಾಮಿ ನಾಯಕ ಭುವನೇಶ್ವರ್‌ ಕುಮಾರ್‌ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದರು. ಉತ್ತಮ ಆರಂಭದ ಹೊರತಾಗಿಯೂ ಮಧ್ಯದ ಮತ್ತು ಕೊನೇ ಓವರ್‌ಗಳಲ್ಲಿ ರನ್‌ ಗಳಿಕೆಯ ವೇಗ ಹೆಚ್ಚಿಸಲು ಸಾಧ್ಯವಾಗದೆ 20 ಓವರ್‌ಗಳಲ್ಲಿ 157/8 ರನ್‌ ಮಾತ್ರವೇ ಕಲೆಹಾಕಿತು.


ಓಪನರ್‌ ಅಭಿಷೇಕ್‌ ಶರ್ಮಾ (43), ವಾಷಿಂಗ್ಟನ್‌ ಸುಂದರ್‌ (25) ಮತ್ತು ರೊಮಾರಿಯೊ ಶಫರ್ಡ್‌ (26*) ರನ್‌ ಗಳಿಸಿದರಾದರೂ ದೊಡ್ಡ ಇನಿಂಗ್ಸ್‌ ಆಡುವಲ್ಲಿ ವಿಫಲರಾದರು. ಪಂಜಾಬ್‌ ಕಿಂಗ್ಸ್‌ ಪರ ನೇತನ್‌ ಎಲಿಸ್‌ (40ಕ್ಕೆ 3) ಮತ್ತು ಹರಪ್ರೀತ್‌ ಬ್ರಾರ್‌ (26ಕ್ಕೆ 3) ಭರ್ಜರಿ ಬೌಲಿಂಗ್‌ ದಾಳಿ ಸಂಘಟಿಸಿದರು.

ಸಂಕ್ಷಿಪ್ತ ಸ್ಕೋರ್‌
ಸನ್‌ರೈಸರ್ಸ್‌ ಹೈದರಾಬಾದ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 157 ರನ್‌ (ಅಭಿಷೇಕ್‌ ಶರ್ಮಾ 43, ವಾಷಿಂಗ್ಟನ್‌ ಸುಂದರ್‌ 25, ರೊಮಾರಿಯೊ ಶೆಫರ್ಡ್‌ 26*; ಹರಪ್ರೀತ್‌ ಬ್ರಾರ್‌ 26ಕ್ಕೆ 3, ನೇತನ್‌ ಎಲಿಸ್‌ 40ಕ್ಕೆ 3).
ಪಂಜಾಬ್‌ ಕಿಂಗ್ಸ್‌: 15.1 ಓವರ್‌ಗಳಲ್ಲಿ 5 ವಿಕೆಟ್‌ಗೆ 160 ರನ್‌ (ಶಿಖರ್‌ ಧವನ್ 39, ಲಿಯಾಮ್‌ ಲಿವಿಂಗ್‌ಸ್ಟೋನ್‌ 49*; ಫಾರೂಕಿ 32ಕ್ಕೆ 2).
ಪಂದ್ಯಶ್ರೇಷ್ಠ: ಹರಪ್ರೀತ್‌ ಬ್ರಾರ್‌


ಭುವನೇಶ್ವರ್‌ ಕುಮಾರ್‌ ನಾಯಕ
ತಂದೆಯಾದ ಖುಷಿಯಲ್ಲಿರುವ ಕೇನ್‌ ವಿಲಿಯಮ್ಸನ್‌ ನ್ಯೂಜಿಲೆಂಡ್‌ಗೆ ಹಿಂದಿರುಗಿದ್ದಾರೆ. ಹೀಗಾಗಿ ಐಪಿಎಲ್ 2022 ಟೂರ್ನಿಯ 70ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಅನುಭವಿ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಮುನ್ನಡೆಸುತ್ತಿದ್ದಾರೆ. ಜೊತೆಗೆ ತಂಡದ ಆಡುವ ಹನ್ನೊಂದರ ಬಳಗಕ್ಕೆ ರೊಮಾರಿಯೊ ಶಫರ್ಡ್‌ ಮತ್ತು ಜಗದೀಶ ಸುಚಿತ್‌ ಕಮ್‌ಬ್ಯಾಕ್‌ ಮಾಡಿದ್ದಾರೆ.

3 ಬದಲಾವಣೆ ತಂದ ಪಂಜಾಬ್‌
"ನಾವು ಮೂರು ಬದಲಾವಣೆ ತಂದಿದ್ದೇವೆ. ನೇಥನ್‌ ಎಲಿಸ್‌, ಶಾರುಖ್‌ ಖಾನ್‌ ಮತ್ತು ಪ್ರೇರಖ್‌ ಮಂಕಡ್‌ ಈ ಪಂದ್ಯದಲ್ಲಿ ಆಡುತ್ತಿದ್ದಾರೆ. ರಾಹುಲ್‌ ಚಹರ್‌, ರಿಷಿ ಧವನ್ ಮತ್ತು ಭಾನುಕ ರಾಜಪಕ್ಸ ಅವರನ್ನು ಕೈ ಬಿಟ್ಟಿದ್ದೇವೆ. ಎಲ್ಲರಿಗೂ ಒಂದು ಅವಕಾಶ ಕೊಡಬೇಕೆಂದು ಈ ಬದಲಾವಣೆ ತರಲಾಗಿದೆ. ರನ್‌ ಚೇಸ್‌ ಮಾಡಲು ಎದುರು ನೋಡುತ್ತಿದ್ದೇವೆ," ಎಂದು ಟಾಸ್‌ ಬಳಿಕ ಮಾತನಾಡಿದ ಪಂಜಾಬ್‌ ಕಿಂಗ್ಸ್‌ ನಾಯಕ ಮಯಾಂಕ್‌ ಅಗರ್ವಾಲ್‌ ಹೇಳಿದ್ದಾರೆ.

ಇತ್ತಂಡಗಳ ಪ್ಲೇಯಿಂಗ್‌ ಇಲೆವೆನ್
ಎಸ್‌ಆರ್‌ಎಚ್‌ XI: ಅಭಿಷೇಕ್ ಶರ್ಮಾ, ಪ್ರಿಯಂ ಗರ್ಗ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್ (ವಿಕೆಟ್‌ಕೀಪರ್‌), ರೊಮಾರಿಯೊ ಶೆಫರ್ಡ್, ವಾಷಿಂಗ್ಟನ್ ಸುಂದರ್, ಜಗದೀಶ ಸುಚಿತ್, ಭುವನೇಶ್ವರ್ ಕುಮಾರ್ (ನಾಯಕ), ಫಜಲ್ಹಾಕ್ ಫಾರೂಕಿ, ಉಮ್ರಾನ್ ಮಲಿಕ್.

ಪಿಬಿಕೆಎಸ್‌ XI: ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಮಯಾಂಕ್ ಅಗರ್ವಾಲ್ (ನಾಯಕ), ಶಾರುಖ್ ಖಾನ್, ಜಿತೇಶ್ ಶರ್ಮಾ (ವಿಕೆಟ್‌ಕೀಪರ್‌), ಹರಪ್ರೀತ್ ಬ್ರಾರ್, ನೇಥನ್ ಎಲಿಸ್, ಪ್ರೇರಕ್ ಮಂಕಡ್, ಕಗಿಸೊ ರಬಾಡ, ಅರ್ಷದೀಪ್ ಸಿಂಗ್.

ತಂಡಗಳ ವಿವರ
ಸನ್‌ರೈಸರ್ಸ್‌ ಹೈದರಾಬಾದ್
ಭುವನೇಶ್ವರ್ ಕುಮಾರ್(ನಾಯಕ), ಅಭಿಷೇಕ್ ಶರ್ಮಾ, ಪ್ರಿಯಾಂ ಗಾರ್ಗ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ಗ್ಲೆನ್ ಫಿಲಿಪ್ಸ್, ನಿಕೋಲಸ್ ಪೂರನ್(ಡಬ್ಲ್ಯೂ), ವಾಷಿಂಗ್ಟನ್ ಸುಂದರ್, ಫಜಲ್ಹಕ್ ಫಾರೂಕಿ, ಉಮ್ರಾನ್ ಮಲಿಕ್, ಟಿ ನಟರಾಜನ್, ಸೀನ್ ಅಬಾಟ್, ರವಿಕುಮಾರ್ ಸಮರ್ಥ್, ಶ್ರೇಯಸ್ ಗೋಪಾಲ್ ಸುಚ್, ಜಗದೇಶ್ ಗೋಪಾಲ್ , ಶಶಾಂಕ್ ಸಿಂಗ್, ವಿಷ್ಣು ವಿನೋದ್, ಕಾರ್ತಿಕ್ ತ್ಯಾಗಿ, ರೊಮಾರಿಯೋ ಶೆಫರ್ಡ್, ಮಾರ್ಕೊ ಜಾನ್ಸೆನ್, ಅಬ್ದುಲ್ ಸಮದ್, ಸುಶಾಂತ್ ಮಿಶ್ರಾ

ಪಂಜಾಬ್‌ ಕಿಂಗ್ಸ್‌ಮಯಾಂಕ್ ಅಗರ್ವಾಲ್ (ನಾಯಕ), ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಭಾನುಕಾ ರಾಜಪಕ್ಸ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್‌ಕೀಪರ್‌), ಹರ್ಪ್ರೀತ್ ಬ್ರಾರ್, ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಹರ್, ಅರ್ಶದೀಪ್ ಸಿಂಗ್, ಬೆನ್ನಿ ಹೋವೆಲ್, ಸಂದೀಪ್ ಶರ್ಮಾ, ಬಲ್ತೇಜ್ ಸಿಂಗ್, ರಿತಿಕ್ ಚಟರ್ಜಿ , ಶಾರುಖ್ ಖಾನ್, ಪ್ರೇರಕ್ ಮಂಕಡ್, ಓಡಿಯನ್ ಸ್ಮಿತ್, ಇಶಾನ್ ಪೊರೆಲ್, ಅಥರ್ವ ರಾಯ್ದೆ, ಪ್ರಭುಸಿಮ್ರನ್ ಸಿಂಗ್, ನೇಥನ್ ಎಲಿಸ್, ವೈಭವ್ ಅರೋರಾ, ಅಂಶ್ ಪಟೇಲ್, ರಾಜ್ ಅಂಗದ್ ಬಾವಾ.
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌