ಆ್ಯಪ್ನಗರ

ಫೈನಲ್‌ಗೆ ಸೂಪರ್‌ನೊವಾಸ್‌ ವರ್ಸಸ್‌ ವೆಲಾಸಿಟಿ

ಸ್ಪರ್ಧೆಯಲ್ಲಿದ್ದ ಮೂರೂ ತಂಡಗಳು ತಲಾ 2 ಪಂದ್ಯಗಳನ್ನು ಆಡಿ ತಲಾ 4 ಅಂಕ ಗಳಿಸಿವೆ. ಆದರೆ ನೆಟ್‌ರನ್‌ರೇಟ್‌ ಆಧಾರದಲ್ಲಿ ಟ್ರೇಲ್‌ಬ್ರೇಜರ್ಸ್‌ ತಂಡ ಸ್ಪರ್ಧೆಯಿಂದ ಹೊರಬಿತ್ತು.

Agencies 10 May 2019, 3:05 pm
ಜೈಪುರ: ಹರ್ಮನ್‌ಪ್ರೀತ್‌ ಕೌರ್‌ ಸಾರಥ್ಯದ ಸೂಪರ್‌ನೊವಾಸ್‌ ತಂಡ ವೆಲಾಸಿಟಿ ತಂಡವನ್ನು 3 12 ರನ್‌ಗಳಿಂದ ಸೋಲಿಸುವ ಮೂಲಕ ಮಹಿಳೆಯರ ಟಿ20 ಚಾಲೆಂಜ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ.
Vijaya Karnataka Web match


ಶನಿವಾರ ಸೂಪರ್‌ನೊವಾಸ್‌ ಮತ್ತು ವೆಲಾಸಿಟಿ ತಂಡಗಳ ನಡುವೆಯೇ ಫೈನಲ್‌ ನಡೆಯಲಿದೆ. ಸ್ಪರ್ಧೆಯಲ್ಲಿದ್ದ ಮೂರೂ ತಂಡಗಳು ತಲಾ 2 ಪಂದ್ಯಗಳನ್ನು ಆಡಿ ತಲಾ 4 ಅಂಕ ಗಳಿಸಿವೆ. ಆದರೆ ನೆಟ್‌ರನ್‌ರೇಟ್‌ ಆಧಾರದಲ್ಲಿ ಟ್ರೇಲ್‌ಬ್ರೇಜರ್ಸ್‌ ತಂಡ ಸ್ಪರ್ಧೆಯಿಂದ ಹೊರಬಿತ್ತು.

ಗುರುವಾರ ಟಾಸ್‌ ಸೋತು ಬಾಟಿಂಗ್‌ಗೆ ಆಹ್ವಾನ ಪಡೆದ ಸೂಪರ್‌ನೋವಾಸ್‌ ತಂಡ ಜೆಮಿಮಾ ರೋಡ್ರಿಗಸ್‌ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 142 ರನ್‌ ಗಳಿಸಿತು. ಬಳಿಕ ಮಿಥಾಲಿ ರಾಜ್‌ ಸಾರಥ್ಯದ ವೆಲಾಸಿಟಿ ತಂಡವನ್ನು 130 ರನ್‌ಗಳಿಗೆ ಕಟ್ಟಿಹಾಕಿತು.

ಸಂಕ್ಷಿಪ್ತ ಸ್ಕೋರ್‌
ಸೂಪರ್‌ನೊವಾಸ್‌: 20 ಓವರ್‌ಗಳಲ್ಲಿ 142/3 (ಜೆಮಿಮಾ ರೋಡ್ರಿಗಸ್‌ 77, ಚಮಾರಿ ಅಟಪಟ್ಟು 31; ಅಮೆಲಿಯಾ ಕೆರ್‌ 21ಕ್ಕೆ 2).

ವೆಲಾಸಿಟಿ: 20 ಓವರ್‌ಗಳಲ್ಲಿ 130/3 (ಡೇನಿಯೆಲ್‌ ವ್ಯಾಟ್‌ 43, ಮಿಥಾಲಿ ರಾಜ್‌ 40*, ವೇದಾ ಕೃಷ್ಣಮೂರ್ತಿ 30*; ರಾಧಾ ಯಾದವ್‌ 30ಕ್ಕೆ 1, ಅನುಜಾ ಪಾಟೀಲ್‌ 28ಕ್ಕೆ 1, ಪೂನಂ ಯಾದವ್‌ 13ಕ್ಕೆ 1).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌