ಆ್ಯಪ್ನಗರ

ಮತದಾನ ಕರ್ತವ್ಯ ನಿಭಾಯಿಸಲಿರುವ ವಿರಾಟ್ ಕೊಹ್ಲಿ

ಲೋಕಸಭಾ ಚುನಾವಣೆ 2019ರಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತದಾನ ಕರ್ತ್ಯವ್ಯವನ್ನು ನಿಭಾಯಿಸಲು ಉತ್ಸುಕರಾಗಿದ್ದಾರೆ. ಮೇ 12ರಂದು ದಿಲ್ಲಿಯಿಂದ ವಿರಾಟ್ ಮತದಾನ ಮಾಡುವ ಸಾಧ್ಯತೆಯಿದೆ.

Vijaya Karnataka Web 28 Apr 2019, 6:07 pm
ಹೊಸದಿಲ್ಲಿ: ನಾಯಕನಾದವನು ಎಲ್ಲರಿಗೂ ಮಾದರಿಯಾಗಿರಬೇಕು. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪಾಲಿಗೂ ಇದು ಅನ್ವಯವಾಗುತ್ತದೆ.
Vijaya Karnataka Web virat-kohli-14


ಇದೀಗ ದೇಶದ ಪ್ರಜಾತಂತ್ರದ ಅತಿ ದೊಡ್ಡ ಹಬ್ಬವಾದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮತದಾನ ಹಕ್ಕು ಚಲಾವಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಮೇ 12ರಂದು ಗುರುಗ್ರಾಂನಲ್ಲಿ ಮತದಾನ ಮಾಡಲಿದ್ದಾರೆ ಎಂಬುದು ತಿಳಿದು ಬಂದಿದೆ.

ಹಾಗೊಂದು ವೇಳೆ ಐಪಿಎಲ್‌ನಲ್ಲಿ ಆರ್‌ಸಿಬಿ ಫೈನಲ್ ತಲುಪಿದರೆ ಕೊಹ್ಲಿ ಮತದಾನ ಹೇಗೆ ಮಾಡಲಿದ್ದಾರೆ ಎಂಬುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಈ ಮೊದಲು ವಿರಾಟ್‌ಗೆ ಮತದಾನ ಹಕ್ಕು ನಷ್ಟವಾಗಲಿದೆ ಎಂಬುದರ ಬಗ್ಗೆ ವರದಿಗಳು ಬಂದಿದ್ದವು. ಅಷ್ಟೇ ಅಲ್ಲದೆ ಪತ್ನಿ ಅನುಷ್ಕಾ ಶರ್ಮಾ ನಿವಾಸಿಸುವ ಮುಂಬೈಯಿಂದಲೇ ಮತದಾನ ಹಕ್ಕನ್ನು ಬಯಸಿದ್ದರು ಎಂಬುದು ವರದಿಯಾಗಿತ್ತು.

ಈ ಹಿಂದೆ ಗರಿಷ್ಠ ಸಂಖ್ಯೆಯ ಮತದಾನಕ್ಕಾಗಿ ಜನರಿಗೆ ಸ್ಫೂರ್ತಿ ತುಂಬುವಂತೆ ನಾಯಕ ವಿರಾಟ್ ಕೊಹ್ಲಿ ಜತೆಗೆ ಮಹೇಂದ್ರ ಸಿಂಗ್ ಧೋನಿ ಹಾಗೂ ರೋಹಿತ್ ಶರ್ಮಾ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌