ಆ್ಯಪ್ನಗರ

ಕೊಹ್ಲಿಯಲ್ಲಿ ಶ್ರೇಷ್ಠನಾಗುವ ಹಂಬಲವಿದೆ: ಗ್ಯಾರಿ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಮಾರ್ಗದರ್ಶಕರಾಗಿರುವ ಭಾರತದ ಮಾಜಿ ಕೋಚ್ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್, ನಾಯಕ ವಿರಾಟ್ ಕೊಹ್ಲಿ ಬಗ್ಗೆ ಗುಣಗಾನ ಮಾಡಿದ್ದಾರೆ.

TIMESOFINDIA.COM 19 Apr 2018, 3:25 pm
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಮಾರ್ಗದರ್ಶಕರಾಗಿರುವ ಭಾರತದ ಮಾಜಿ ಕೋಚ್ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್, ನಾಯಕ ವಿರಾಟ್ ಕೊಹ್ಲಿ ಬಗ್ಗೆ ಗುಣಗಾನ ಮಾಡಿದ್ದಾರೆ.
Vijaya Karnataka Web kohli-kirsten


ವಿರಾಟ್ ಜತೆ ಮತ್ತೆ ಕೆಲಸ ಮಾಡಲು ಉತ್ತಮ ಅನುಭವ ಎಂದಿದ್ದಾರೆ. ನಿಮ್ಮ ಮಾಹಿತಿಗಾಗಿ ವಿರಾಟ್ ಕೆರಿಯರ್ ಆರಭದಲ್ಲಿ ಕರ್ಸ್ಟನ್ ಟೀಮ್ ಇಂಡಿಯಾ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.

ಕರ್ಸ್ಟನ್ ಮಾರ್ಗದರ್ಶನದಲ್ಲಿಯೇ ಭಾರತ 2011ರಲ್ಲಿ ಏಕದಿನ ವಿಶ್ವಕಪ್ ಎತ್ತಿ ಹಿಡಿದಿತ್ತು.

ಅವರೊಬ್ಬ ಅತ್ಯುತ್ತಮ ಆಟಗಾರನಾಗಲಿದ್ದಾರೆ ಎಂಬುದನ್ನು ನಾನು ಅರಿತುಕೊಂಡಿದ್ದೆ. ಆದರೆ ಇವೆಲ್ಲವೂ ಸ್ಥಿರತೆಯ ಮೇಲೆ ಅವಲಂಬಿತವಾಗಿತ್ತು. ಇದೀಗ ಮತ್ತೆ ವಿರಾಟ್ ಜತೆಗಿನ ಸಂಯೋಜನೆಯನ್ನು ಆನಂದಿಸುತ್ತಿದ್ದೇನೆ ಎಂದರು.

ರನ್‍‌ಗಾಗಿನ ಹಸಿವು ಹಾಗೂ ಚೆಂಡನ್ನು ದಂಡಿಸುವ ಸಾಮರ್ಥ್ಯ ಅವರಲ್ಲಿದೆ. 2008ರಲ್ಲಿ ಅವರ ಸಹಜ ಶೈಲಿ ಬಗ್ಗೆ ಚರ್ಚಿಸಲಾಗುತ್ತಿತ್ತು ಎಂದರು.

ಓರ್ವ ಪ್ರತಿಭಾವಂತ ಆಟಗಾರನಿಂದ ಶ್ರೇಷ್ಠ ಆಟಗಾರನಾಗಿ ಬೆಳೆದಿದ್ದಾರೆ. ದೀರ್ಘ ಕಾಲದ ವರೆಗೆ ಇದೇ ನಿರ್ವಹಣೆಯನ್ನು ಕಾಯ್ದುಕೊಳ್ಳುವುದು ಅಗತ್ಯ. ಅಲ್ಲದೆ ಶ್ರೇಷ್ಠ ಆಟಗಾರನಾಗುವ ಹಂಬಲವಿದೆ ಎಂದು ವಿವರಿಸಿದರು.

ಆರ್‌ಸಿಬಿ ಬಗ್ಗೆ ಕೇಳಿದಾಗ, ಇದೀಗ ಆರಂಭಿಕ ದಿನಗಳಾಗಿದ್ದು, ಇನ್ನು ಸಾಕಷ್ಟು ದೂರ ಕ್ರಮಿಸಬೇಕಿದೆ ಎಂದರು. ಪ್ರತಿಯೊಬ್ಬ ಆಟಗಾರನ ಮೌಲ್ಯವನ್ನು ಅರಿತು ಕೆಲಸ ಮಾಡಬೇಕಿದೆ. ಟ್ವೆಂಟಿ-20 ಕ್ರಿಕೆಟ್ ಸಹ ವೈಜ್ಞಾನಿಕವಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌