ಆ್ಯಪ್ನಗರ

ವಿಕೆಟ್‌ ಪಡೆದ ರಾಣಾಗೆ ಕೊಹ್ಲಿಯಿಂದ ಬ್ಯಾಟ್‌ ಗಿಫ್ಟ್‌!

ಕೋಲ್ಕೊತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ತಮ್ಮ ವಿಕೆಟ್‌ ಪಡೆದ ನಿತೀಶ್‌ ರಾಣಾ ಅವರಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದಾರೆ.

Vijaya Karnataka 11 Apr 2018, 5:41 pm
ಬೆಂಗಳೂರು: ಕೋಲ್ಕೊತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ತಮ್ಮ ವಿಕೆಟ್‌ ಪಡೆದ ನಿತೀಶ್‌ ರಾಣಾ ಅವರಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದಾರೆ.
Vijaya Karnataka Web nitish-rana


ಭಾನುವಾರ ಕೋಲ್ಕೊತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ತಂಡ ನೈಟ್‌ ರೈಡರ್ಸ್‌ ವಿರುದ್ಧ 4 ವಿಕೆಟ್‌ಗಳ ಸೋಲುಂಡಿತ್ತು. 31 ರನ್‌ ಗಳಿಸಿದ್ದ ಕೊಹ್ಲಿ ಅವರನ್ನು ದಿಲ್ಲಿಯವರೇ ಆದ ಪಾರ್ಟ್‌ ಟೈಮ್‌ ಆಫ್‌ಸ್ಪಿನ್ನರ್‌ ನಿತೀಶ್‌ ರಾಣಾ ಕ್ಲೀನ್‌ಬೌಲ್ಡ್‌ ಮಾಡಿದ್ದರು.

ಪಂದ್ಯದ ಬಳಿಕ ರಾಣಾ ಅವರಿಗೆ ವಿರಾಟ್‌ ಕೊಹ್ಲಿ ಬ್ಯಾಟ್‌ ಉಡುಗೊರೆ ನೀಡಿದ್ದಾರೆ. ಈ ಸಂಭ್ರಮವನ್ನು ನಿತೀಶ್‌ ರಾಣಾ ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಕೊಹ್ಲಿ ಗಿಫ್ಟ್‌ ಮಾಡಿರುವ ಬ್ಯಾಟ್‌ನ ಚಿತ್ರದ ಸಹಿತ ಹಂಚಿಕೊಂಡಿದ್ದಾರೆ.

A post shared by nitishrana_official (@nitishrana_official) on Apr 10, 2018 at 5:09am PDT

''ಶ್ರೇಷ್ಠ ಆಟಗಾರನೊಬ್ಬ ನಿಮ್ಮನ್ನು ಅಭಿನಂದಿಸಿದರೆ ನೀವು ಸರಿಯಾದುದನ್ನೇ ಮಾಡುತ್ತಿದ್ದೀರಿ ಎಂದರ್ಥ. ಬ್ಯಾಟ್‌ಗಾಗಿ ಥ್ಯಾಂಕ್ಸ್‌ ವಿರಾಟ್‌ ಭೈಯ್ಯಾ. ಇಂತಹ ಪ್ರೋತ್ಸಾಹ ನನಗೆ ಬೇಕಿತ್ತು. ನನ್ನಲ್ಲಿ ಧನ್ಯತಾ ಭಾವ ಮೂಡಿದೆ,'' ಎಂದು ನಿತೀಶ್‌ ರಾಣಾ ಇನ್ಸ್‌ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌