ಆ್ಯಪ್ನಗರ

ಕೊಹ್ಲಿ-ಧೋನಿ ಮಿಲಿಯನ್ ಡಾಲರ್ ಅಪ್ಪುಗೆ

ಈ ನಡುವೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಚೆನ್ನೈ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಅವರಿಗೆ ಭೇಟಿಯಾಗುವ ಅವಕಾಶವೂ ಬಂದಿದೆ.

Vijaya Karnataka Web 25 Apr 2018, 9:01 pm
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ನಲ್ಲಿ ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸುತ್ತಿದೆ.
Vijaya Karnataka Web kohli-dhoni-02


'ಸದರ್ನ್ ಡೆರ್ಬಿ' ಎಂದೇ ಜನಪ್ರಿಯವಾಗಿರುವ ಬೆಂಗಳೂರು ಹಾಗೂ ಚೆನ್ನೈ ನಡುವಣ ಹಣಾಹಣಿಯು ಅಭಿಮಾನಿಗಳ ಪಾಲಿಗೂ ಅತಿ ಹೆಚ್ಚು ರೋಚಕತೆಗೆ ಕಾರಣವಾಗಿದೆ.

ಈ ನಡುವೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಚೆನ್ನೈ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಅವರಿಗೆ ಭೇಟಿಯಾಗುವ ಅವಕಾಶವೂ ಬಂದಿದೆ.

ಸೋದರತ್ವವನ್ನು ಮೆರೆದಿರುವ ಕೊಹ್ಲಿ ಹಾಗೂ ಧೋನಿ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಟೀಮ್ ಇಂಡಿಯಾ ಯಶಸ್ಸಿನಲ್ಲೂ ಇದು ಪ್ರತಿಫಲಿಸಿದೆ. ಕೊಹ್ಲಿ ಆಕ್ರಮಣಕಾರಿ ನಾಯಕತ್ವ ಹಾಗೂ ಓರ್ವ ಆಟಗಾರ ಮತ್ತು ಮೆಂಟರ್ ರೂಪದಲ್ಲಿ ಧೋನಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ಒಟ್ಟಿನಲ್ಲಿ ಆರ್‌ಸಿಬಿ ಹಾಗೂ ಚೆನ್ನೈ ಅಭಿಮಾನಿಗಳ ಪಾಲಿಗಿದು ಪ್ರತಿಷ್ಠೆಯ ಪಂದ್ಯವಾದರೆ ಕೊಹ್ಲಿ-ಧೋನಿ ಕ್ರೀಡಾಸ್ಫೂರ್ತಿ ಮೆರೆಯುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಸದ್ಯ ಈ ಚಿತ್ರಕ್ಕೊಂದು ಶೀರ್ಷಿಕೆಯನ್ನು ಕೊಡಲು ಮರೆಯದಿರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌