ಆ್ಯಪ್ನಗರ

'ಹ್ಯಾಪಿ ಬರ್ತ್ ಡೇ ಮೈ ಲವ್'; ಪತ್ನಿ ಅನುಷ್ಕಾಗೆ ವಿರಾಟ್ ವಿಶೇಷ ಸಂದೇಶ

ಇಂದು ಹುಟ್ಟಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ತಮ್ಮ ಧರ್ಮ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ.

Vijaya Karnataka Web 1 May 2018, 3:02 pm
ಬೆಂಗಳೂರು: ಇಂದು ಹುಟ್ಟಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ತಮ್ಮ ಧರ್ಮ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ.
Vijaya Karnataka Web virushka-06


'ಹ್ಯಾಪಿ ಬರ್ತ್ ಡೇ ಮೈ ಲವ್' ಎಂದು ಸಂದೇಶವನ್ನು ಆರಂಭಿಸಿರುವ ಕೊಹ್ಲಿ, ''ನನಗೆ ಗೊತ್ತಿರುವ ಅತ್ಯಂತ ಧನಾತ್ಮಕ ಹಾಗೂ ಪ್ರಮಾಣಿಕ ವ್ಯಕ್ತಿ ನೀನು; ಲವ್ ಯೂ'' ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅನುಷ್ಕಾ ಜತೆಗಿನ ಪ್ರೀತಿಯನ್ನು ಹಂಚಿಕೊಂಡಿರುವ ವಿರಾಟ್ ಮಡದಿಗೆ ಸಿಹಿ ತಿನಿಸುವ ಚಿತ್ರವನ್ನು ಟ್ವಿಟರ್‌ನಲ್ಲಿ ಅಭಿಮಾನಿಗಳ ಜತೆಗೆ ಹಂಚಿಕೊಂಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಆವೃತ್ತಿಯಲ್ಲೂ ಆರ್‌ಸಿಬಿ ಕೆಟ್ಟ ಪ್ರದರ್ಶನಕ್ಕೆ ಅನುಷ್ಕಾ ಕಾರಣ ಎಂಬ ಅಪವಾದ ಕೇಳಿ ಬರುತ್ತಿದೆ. ಇದು ವಿರುಷ್ಕಾ ಅಭಿಮಾನಿಗಳಲ್ಲೂ ಬೇಸರಕ್ಕೆ ಕಾರಣವಾಗಿದೆ.

2017 ವರ್ಷಾಂತ್ಯದಲ್ಲಿ ತಮ್ಮ ದೀರ್ಘ ಕಾಲದ ಗೆಳತಿ ಅನುಷ್ಕಾ ಅವರನ್ನು ವಿರಾಟ್ ವಿವಾಹಿತರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌