ಆ್ಯಪ್ನಗರ

Women's IPL: ಪ್ರತಿ ಫ್ರಾಂಚೈಸಿಗೆ 1000 ಕೋಟಿ ರೂ. ಬೆಲೆ ನಿರೀಕ್ಷೆಯಲ್ಲಿ ಬಿಸಿಸಿಐ!

Women's Indian Premier League: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕೆಲ ಸಮಯ ಹಿಂದಷ್ಟೇ ಮಹಿಳಾ ಮತ್ತು ಪುರುಷರ ಕ್ರಿಕೆಟಿಗರಿಗೆ ಸಮಾನ ವೇತನ ಘೋಷಿಸಿತ್ತು. ಇದೀಗ ಮಹಿಳಾ ಇಂಡಿಯನ್ ಪ್ರೀಮಿಯರ್‌ ಲೀಗ್‌ ಆಯೋಜನೆಗೂ ಗ್ರೀನ್ ಸಿಗ್ನಲ್‌ ನೀಡಿದೆ. ಐಪಿಎಲ್ 2023 ಟೂರ್ನಿಯಲ್ಲಿ ಮಹಿಳಾ ಐಪಿಎಲ್‌ ಕೂಡ ಜರುಗಲಿದ್ದು, ಬಿಸಿಸಿಐ ಈ ಸಲುವಾಗಿ ಫ್ರಾಂಚೈಸಿಗಳನ್ನು ಹರಾಜಿಗೆ ಇಟ್ಟಿದೆ. ಹೊಸ ತಂಡಗಳ ಖರೀದಿಗೆ ಕನಿಷ್ಠ ಬೆಲೆ 400 ಕೋಟಿ ರೂ. ನಿಗದಿ ಪಡಿಸಿರುವ ಬಿಸಿಸಿಐ ಪ್ರತಿ ತಂಡ 1000 ಕೋಟಿ ರೂ.ಗಳಿಗೂ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತದೆ ಎಂಬ ನಿರೀಕ್ಷೆಯಲ್ಲಿದೆ.

Authored byವಿಜೇತ್ ಕುಮಾರ್ | Vijaya Karnataka Web 29 Nov 2022, 8:02 pm

ಹೈಲೈಟ್ಸ್‌:

  • ಕಳೆದ ಅಕ್ಟೋಬರ್‌ನಲ್ಲಿ ಮಹಿಳಾ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಗ್ರೀನ್‌ ಸಿಗ್ನಲ್‌ ನೀಡಿದ್ದ ಬಿಸಿಸಿಐ.
  • ಮಹಿಳಾ ಐಪಿಎಲ್‌ ಟೂರ್ನಿಯ ಫ್ರಾಂಚೈಸಿಗಳ ಖರೀದಿಗೆ ಬರೋಬ್ಬರಿ 400 ಕೋಟಿ ರೂ. ಬೆಲೆ ನಿಗದಿ ಪಡಿಸಲಾಗಿದೆ.
  • 2023ರ ಮಾರ್ಚ್‌ನಲ್ಲಿ ಶುರುವಾಗಲಿರುವ ಟೂರ್ನಿಯಲ್ಲಿ ಕನಿಷ್ಠ 5 ತಂಡಗಳನ್ನು ಕಣಕ್ಕಿಳಿಸಲು ಬಿಸಿಸಿಐ ಯೋಜನೆ ರೂಪಿಸಿದೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Womens IPL 2023
ಮಹಿಳಾ ಐಪಿಎಲ್‌ ತಂಡಗಳ ಖರೀದಿಗೆ ಬೆಲೆ ನಿಗದಿಪಡಿಸಿರುವ ಬಸಿಸಿಐ (ಚಿತ್ರ: ಬಿಸಿಸಿಐ).
ಬೆಂಗಳೂರು: ಮಹಿಳಾ ಐಪಿಎಲ್‌ ಟೂರ್ನಿ ಸಲುವಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಹಲವು ವರ್ಷಗಳ ಹಿಂದೆಯೇ ಯೋಜನೆ ರೂಪಿಸಿತ್ತು. ಇದೀಗ ಸಮಯ ಬಂದಾಗಿದ್ದು ಮುಂದಿನ ವರ್ಷ ಪುರುಷರ ಐಪಿಎಲ್‌ 2023 ಟೂರ್ನಿಗೂ ಮುನ್ನ ಮುನ್ನ 5 ತಂಡಗಳ ನಡುವಣ ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‌ ಟೂರ್ನಿಯನ್ನು ಕಾಣಬಹುದಾಗಿದೆ. ವರದಿಗಳ ಮಹಿಳಾ ಐಪಿಎಲ್‌ ಟೂರ್ನಿಯ ಫ್ರಾಂಚೈಸಿ ಖರೀದಿ ಸಲುವಾಗಿ ಬಿಸಿಸಿಐ ಬರೋಬ್ಬರಿ 400 ಕೋಟಿ ರೂ.ಗಳ ಮೂಲ ಬೆಲೆ ನಿಗದಿ ಪಡಿಸಿದೆ ಎಂಬುದು ಬೆಳಕಿಗೆ ಬಂದಿದೆ. 2008ರಲ್ಲಿ ಪುರುಷರ ಐಪಿಎಲ್ ಆರಂಭವಾದಾಗ ಮುಂಬೈ ಇಂಡಿಯನ್ಸ್ ಅತ್ಯಂತ ದುಬಾರಿ ಫ್ರಾಂಚೈಸಿಯಾಗಿತ್ತು. ಅಂದು ಮುಂಬೈ ಫ್ರಾಂಚೈಸಿಯಿಂದ ಬಿಸಿಸಿಐಗೆ ಬರೋಬ್ಬರಿ 446 ಕೋಟಿ ರೂ. ಹರಿದುಬಂದಿತ್ತು. ಇನ್ನು ಐಪಿಎಲ್‌ 2022 ಟೂರ್ನಿ ಮೂಲಕ ಸ್ಪರ್ಧೆಗಿಳಿದ ಹೊಸ ಫ್ರಾಂಚೈಸಿ ಲಖನೌ ಸೂಪರ್‌ ಜಯಂಟ್ಸ್‌ ಬರೋಬ್ಬರಿ 7090 ಕೋಟಿ ರೂ.ಗಳಿಗೆ ಮಾರಾಟವಾಗಿತ್ತು.
1500 ಕೋಟಿ ರೂ. ಸಿಗುವ ನಿರೀಕ್ಷೆ
ಮಹಿಳಾ ಐಪಿಎಲ್‌ ಫ್ರಾಂಚೈಸಿಯಿಂದ ತಲಾ ಸಾವಿರದಿಂದ 1500 ಕೋಟಿ ರೂ. ಪಡೆಯಬಹುದೆಂದು ಬಿಸಿಸಿಐ ನಿರೀಕ್ಷಿಸಿದೆ. ಅಂದರೆ 5 ಫ್ರಾಂಚೈಸಿಗಳಿಂದ ಮಂಡಳಿಗೆ 6ರಿಂದ 8 ಸಾವಿರ ಕೋಟಿ ರೂ. ಗಳಿಸಲು ಎದುರು ನೋಡುತ್ತಿದೆ. "ಫ್ರಾಂಚೈಸಿಯು ಹಕ್ಕು ಪಡೆಯುವ ಸಂಸ್ಥೆಗಳು ಐದು ವರ್ಷಗಳಲ್ಲಿ ಸಮಾನ ಕಂತುಗಳಲ್ಲಿ ಈ ಮೊತ್ತವನ್ನು ಬಿಸಿಸಿಐಗೆ ಪಾವತಿಸುತ್ತವೆ ಮತ್ತು ಪುರುಷರ ಐಪಿಎಲ್‌ನಂತೆ ಶಾಶ್ವತವಾಗಿ ತಂಡದ ಮಾಲೀಕರಾಗಿ ಮುಂದುವರಿಯುತ್ತದೆ" ಎಂದು ಬಿಸಿಸಿಐಗೆ ಹತ್ತಿರದ ಮೂಲಗಳು ನ್ಯೂಸ್ 18ಗೆ ವಾಹಿನಿಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ಟೂರ್ನಿಯಲ್ಲಿ 20 ಲೀಗ್ ಪಂದ್ಯಗಳು
ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‌ ಟೂರ್ನಿಯಲ್ಲಿ ಒಟ್ಟಾರೆ 20 ಲೀಗ್ ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ತಂಡಗಳು ಪರಸ್ಪರ ಎರಡು ಬಾರಿ ಆಡುತ್ತವೆ. ಟೇಬಲ್‌ ಟಾಪರ್‌ಗಳು ಫೈನಲ್‌ಗೆ ನೇರ ಪ್ರವೇಶ ಪಡೆಯಲಿದ್ದು, ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಸ್ಪರ್ಧಿಸಲಿವೆ. ಈ ಮೂಲಕ ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ. ಪ್ರತಿ ತಂಡವು ತಮ್ಮ ಆಡುವ 11ರ ಬಳಗದಲ್ಲಿ ಗರಿಷ್ಠ ಐದು ವಿದೇಶಿ ಕ್ರಿಕೆಟಿಗರನ್ನು ಹೊಂದಬಹುದು.

IPL 2023: 'ಮಿನಿ ಆಕ್ಷನ್‌'ನಲ್ಲಿ ಆಟಗಾರರ ಖರೀದಿಗೆ ತಂಡಗಳ ಖಾತೆಯಲ್ಲಿರುವ ಬಾಕಿ ಮೊತ್ತದ ವಿವರ ಇಲ್ಲಿದೆ!
ಬಿಸಿಸಿಐ ಎಲ್ಲಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಕೆ ಈ ವಿಚಾರವಾಗಿ ಈಗಾಗಗಲೇ ಟಿಪ್ಪಣಿ ರವಾನಿಸಿದೆ. ಅದರಲ್ಲಿ, ದೇಶೀಯ ಮತ್ತು ಅಂತರಾಷ್ಟ್ರೀಯ ಆಟಗಾರರ ಉತ್ತಮ ಸಮತೋಲನವನ್ನು ಹೊಂದಲು ಮತ್ತು ಸ್ಪರ್ಧಾತ್ಮಕ ತಂಡಗಳನ್ನು ಹೊಂದಲು ಹಾಗೂ ತಾತ್ಕಾಲಿಕವಾಗಿ ಐದು ತಂಡಗಳನ್ನು ಮಹಿಳಾ ಐಪಿಎಲ್‌ ಟೂರ್ನಿಗೆ ಹೊಂದುವ ಬಗ್ಗೆ ವಿವರಣೆ ನೀಡಲಾಗಿದೆ. ಪ್ರತಿ ತಂಡವು ಗರಿಷ್ಠ ಹದಿನೆಂಟು ಆಟಗಾರ್ತಿಯರನ್ನು ಹೊಂದಬಹುದಾಗಿದೆ. ಅಂದಹಾಗೆ ಯಾವುದೇ ತಂಡವ ಆರಕ್ಕಿಂತ ಹೆಚ್ಚು ವಿದೇಶಿ ಆಟಗಾರ್ತಿಯರನ್ನು ಹೊಂದುವಂತಿಲ್ಲ.

ಈಗಾಗಲೇ ಆಸ್ಟ್ರೇಲಿಯಾ-ಇಂಗ್ಲೆಂಡ್‌ನಲ್ಲಿ ಮಹಿಳಾ ಟಿ20 ಲೀಗ್ ಇದೆ
ಮಹಿಳಾ ಟಿ20 ಕ್ರಿಕೆಟ್‌ ಲೀಗ್‌ಗಳು ಈಗಾಗಲೇ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಆಯೋಜಿಸಲಾಗಿದ್ದು, ತಕ್ಕ ಮಟ್ಟಿಗೆ ಯಶಸ್ಸು ಕೂಡ ಕಂಡಿವೆ. ಮಹಿಳೆಯರ ಬಿಗ್ ಬ್ಯಾಷ್ ಲೀಗ್ 2015–16ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ ಸಂಸ್ಥೆ ಆಶ್ರಯದಲ್ಲಿ ಆರಂಭವಾಯಿತು. ಮಹಿಳೆಯರ ದಿ ಹಂಡ್ರೆಡ್ ಅನ್ನು ಕಳೆದ ಋತುವಿನಲ್ಲಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಪ್ರಾರಂಭಿಸಿದೆ. ಕಿಯಾ ಸೂಪರ್ ಲೀಗ್ ಅನ್ನು 2016 ಮತ್ತು 2019 ರ ನಡುವೆ ಇಂಗ್ಲೆಂಡ್‌ನಲ್ಲಿ ಆಯೋಜಿಸಲಾಗಿತ್ತು. ಭಾರತದಲ್ಲೂ ಬಿಸಿಸಿಐ ಪ್ರಯೋಗಾರ್ಥ ಮಹಿಳಾ ಟಿ20 ಚಾಲೆಂಜ್‌ ಟೂರ್ನಿಗಳನ್ನು ಕಳೆದ ಮೂರು ಆವೃತ್ತಿಗಳಿಂದ ಆಯೋಜಿಸಿದೆ.
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌