ಆ್ಯಪ್ನಗರ

ಟಿ20 ಚಾಲೆಂಜ್‌ಗೆ ಇನ್ನಷ್ಟು ತಂಡಗಳು ಬೇಕು: ಹರ್ಮನ್‌ಪ್ರೀತ್‌

ಶನಿವಾರ ನಡೆದ ಫೈನಲ್‌ನಲ್ಲಿ ಸೂಪರ್‌ನೋವಾಸ್‌ ತಂಡ 4 ವಿಕೆಟ್‌ ಅಂತರದಿಂದ ವೆಲಾಸಿಟಿ ತಂಡವನ್ನು ಸೋಲಿಸಿತ್ತು.

PTI 13 May 2019, 11:09 am
Vijaya Karnataka Web Herman
ಜೈಪುರ: ಇದೇ ಮೊದಲ ಬಾರಿಗೆ ಆಯೋಜಿಸಲಾದ ಮಹಿಳೆಯರ ಟಿ20 ಚಾಲೆಂಜ್‌ ಕ್ರಿಕೆಟ್‌ ಟೂರ್ನಿ ಅತ್ಯುತ್ತಮ ಪರಿಕಲ್ಪನೆ. ಆದರೆ, ಟೂರ್ನಿ ಅತ್ಯಂತ ಚುಟುಕಾಗಿದೆ. ಅಲ್ಲದೆ, ಸ್ಪರ್ಧೆಯಲ್ಲಿ ಇನ್ನಷ್ಟು ತಂಡಗಳಿರಬೇಕಿತ್ತು ಎಂದು ಚಾಂಪಿಯನ್‌ ಸೂಪರ್‌ನೋವಾಸ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹೇಳಿದ್ದಾರೆ.

ಟೂರ್ನಿಯ ಚೊಚ್ಚಲ ಚಾಂಪಿಯನ್‌ ಪಟ್ಟ ಹರ್ಮನ್‌ಪ್ರೀತ್‌ ನಾಯಕತ್ವದ ಸೂಪರ್‌ನೋವಾಸ್‌ಗೆ ಒಲಿದಿದೆ. ಶನಿವಾರ ನಡೆದ ಫೈನಲ್‌ನಲ್ಲಿ ಸೂಪರ್‌ನೋವಾಸ್‌ ತಂಡ 4 ವಿಕೆಟ್‌ ಅಂತರದಿಂದ ವೆಲಾಸಿಟಿ ತಂಡವನ್ನು ಸೋಲಿಸಿತ್ತು. ಸ್ಪರ್ಧೆಯಲ್ಲಿದ್ದ 3ನೇ ತಂಡ ಟ್ರೇಲ್‌ಬೇಜರ್ಸ್‌ ಶುಕ್ರವಾರವೇ ಪ್ರಶಸ್ತಿ ಸ್ಪರ್ಧೆಯಿಂದ ಹೊರಬಿದ್ದಿತ್ತು.

ಚಾಲೆಂಜ್‌ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ವಿದೇಶಿ ಆಟಗಾರ್ತಿಯರು ಕೂಡ ಮುಂದಿನ ವರ್ಷ ದೊಡ್ಡ ಮಟ್ಟದಲ್ಲಿ ಟೂರ್ನಿ ಆಯೋಜಿಸುವಂತೆ ಸಲಹೆ ನೀಡಿರುವುದಾಗಿ ಹರ್ಮನ್‌ಪ್ರೀತ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌