ಆ್ಯಪ್ನಗರ

ಕೆಕೆಆರ್‌ನಲ್ಲಿ ಎಲ್ಲವೂ ಸರಿಯಿಲ್ಲವೇ? ಕಾರ್ತಿಕ್ ಸಿಟ್ಟಾಗಿದ್ದೇಕೆ?

ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮಗದೊಮ್ಮ ಸಾಬೀತುಗೊಂಡಿದೆ.

Vijaya Karnataka Web 4 May 2019, 4:24 pm
ಮೊಹಾಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ಫ್ರಾಂಚೈಸಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮಗದೊಮ್ಮೆಸಾಬೀತಾಗಿದೆ. ಶುಕ್ರವಾರ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯ ನಡೆಯುತ್ತಿರುವಾಗಲೇ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಸಹ ಆಟಗಾರರ ಮೇಲೆ ಸಿಟ್ಟಾಗಿರುವುದು ಕಂಡುಬಂದಿದೆ.
Vijaya Karnataka Web karthik-russell


ಸ್ಟ್ರಾಟೆಜಿಕ್ ಬ್ರೇಕ್ ಪಡೆದ ವೇಳೆಯಲ್ಲಿ ಸಹ ಆಟಗಾರರ ಮೇಲೆ ಗರಂ ಆದ ಕಾರ್ತಿಕ್ ಬುದ್ಧಿ ಮಾತನ್ನು ಹೇಳಿದರು. ಅಲ್ಲಿಂದ ಬಳಿಕ ಎಚ್ಚೆತ್ತುಕೊಂಡು ಕೆಕೆಆರ್ ಪಂದ್ಯ ಗೆಲ್ಲುವ ಮೂಲಕ ಪ್ಲೇ-ಆಫ್ ಪ್ರವೇಶವನ್ನು ಜೀವಂತವಾಗಿರಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾರ್ತಿಕ್, ಆಟಗಾರರಿಂದ ಉತ್ತಮ ಪ್ರದರ್ಶನ ಹೊರತರಲು ಕೆಲವೊಂದು ಬಾರಿ ಸಿಟ್ಟುಗೊಳ್ಳುವುದು ಸಹ ಉತ್ತಮ ಎಂದಿದ್ದಾರೆ.

ಕಳೆದ ಕೆಲವು ದಿನಗಳು ತುಂಬಾನೇ ಕಠಿಣವೆನಿಸಿದೆ. ಬೌಲರ್‌ಗಳು ಹಾಗೂ ಫೀಲ್ಡರ್‌ಗಳ ನಿರ್ವಹಣೆಯಿಂದ ನಾನು ಸಂತುಷ್ಟಿಗೊಂಡಿರಲಿಲ್ಲ. ಆ ಸಂದರ್ಭದಲ್ಲಿ ನನಗೇನು ಅನಿಸಿದೆಯೋ ಅದನ್ನು ಸಹ ಆಟಗಾರರು ಮನದಟ್ಟು ಆಗಲಿ ಎಂದು ಅಂದುಕೊಂಡೆ. ಇದು ತುಂಬಾನೇ ವಿರಳ. ನಾನು ಕೋಪಗೊಳ್ಳುವುದನ್ನು ಹಲವರು ನೋಡಿಲ್ಲ ಎಂದರು.

ಬಳಿಕ ಕಾರ್ತಿಕ್ ಏನನ್ನು ಹೇಳಿದ್ದರು ಎಂಬುದರ ಬಗ್ಗೆ ಹೇಳಿಕೆ ನೀಡಿದ ಸಂದೀಪ್ ವಾರಿಯರ್, ನಮಗಿದು ಗೆಲ್ಲಲೇಬೇಕಾದ ಪಂದ್ಯವಾಗಿದ್ದು, ಪ್ರತಿ ಎಸತೆದ ಮೇಲೂ ಗಮನ ಕೇಂದ್ರಿಕರಿಸುವಂತೆ ತಿಳಿಸಿದ್ದರು ಎಂದರು.

ಏತನ್ಮಧ್ಯೆ ಮ್ಯಾಚ್ ವಿನ್ನಿಂಗ್ಸ್ ಅರ್ಧಶತಕ ಬಾರಿಸಿರುವ ಶುಭಮನ್ ಗಿಲ್ ತಮ್ಮ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡಿದ್ದಾರೆ ಎಂದು ಕಾರ್ತಿಕ್ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌