ರಾಯಲ್‌ ಚಾಲೆಂಜರ್ಸ್‌ ಅಬ್ಬರಕ್ಕೆ ತಬ್ಬಿಬ್ಬಾದ ರಾಯಲ್ಸ್‌!

Vijaya Karnataka Web 30 Sep 2021, 12:30 am
  • ​ಚಾಲೆಂಜರ್ಸ್‌ಗೆ ರಾಯಲ್ ಗೆಲುವು!

    ದುಬೈ: ಅಕ್ಷರಶಃ ಅಧಿಕಾರಯುತ ಆಟವಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತನ್ನ 7ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಮತ್ತಷ್ಟು ಭದ್ರಪಡಿಸಿಕೊಂಡು ನಾಕ್‌ಔಟ್‌ ಹಂತಕ್ಕೆ ಮತ್ತೊಂದು ಹೆಜ್ಜೆ ಹತ್ತಿರವಾಗಿದೆ.

    ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ರಾಜಸ್ಥಾನ್ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಐಪಿಎಲ್ 2021 ಟೂರ್ನಿಯ 2ನೇ ಚರಣದಲ್ಲಿ ಬ್ಯಾಕ್‌ ಟು ಬ್ಯಾಕ್‌ ಜಯ ದಾಖಲಿಸಿದೆ. ಆರಂಭದಲ್ಲಿ 2 ಪಂದ್ಯ ಸೋತರೂ ಈಗ ಕಮ್‌ಬ್ಯಾಕ್‌ ಮಾಡಿರುವ ಚಾಲೆಂಜರ್ಸ್‌ ಕಳೆದು ಹೀಗಿದ್ದ ಆತ್ಮವಿಶ್ವಾಸವನ್ನು ಮತ್ತೆ ಕಂಡುಕೊಂಡಿದೆ.

    ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ್‌ ತಂಡ 11 ಓವರ್‌ಗಳಲ್ಲಿ 100 ರನ್‌ ಗಳಿಸಿ 200ಕ್ಕೂ ಹೆಚ್ಚು ರನ್‌ ದಾಖಲಿಸುವತ್ತ ಮುಂದಾಗಿತ್ತು. ಆದರೆ, ಅದ್ಭುತ ಕಮ್‌ಬ್ಯಾಕ್‌ ಮಾಡಿದ ಆರ್‌ಸಿಬಿ ನಂತರ 9 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಪಡೆದು ಕೇವಲ 49 ರನ್ ಮಾತ್ರವೇ ಬಿಟ್ಟುಕೊಟ್ಟಿತು. ನಾಟಕೀಯ ಕುಸಿತ ಕಂಡ ರಾಯಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 149 ರನ್‌ ಮಾತ್ರ ಗಳಿಸಿತು.

    ಗೆಲ್ಲಲು 150 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಆರ್‌ಸಿಬಿಗೆ ಓಪನರ್ಸ್‌ ವಿರಾಟ್‌ ಕೊಹ್ಲಿ (25) ಮತ್ತು ದೇವದತ್ ಪಡಿಕ್ಕಲ್‌ (22) ಬಿರುಸಿನ ಆರಂಭ ಒದಗಿಸಿಕೊಟ್ಟರು. ಸಿಕ್ಕ ಆರಂಭದ ಲಾಭ ಪಡೆದ ಶ್ರೀಕರ್‌ ಭರರ್ 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿ 44 ರನ್‌ಗಳ ಮಹತ್ವದ ಕೊಡುಗೆ ಸಲ್ಲಿಸಿದರು. ಇನಿಂಗ್ಸ್‌ ಅಂತ್ಯದಲ್ಲಿ ಸಿಡಿದೆದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅಜೇಯ 50 ರನ್‌ಗಳನ್ನು ಸಿಡಿಸಿ ಇನ್ನು 17 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಜಯ ತಂದುಕೊಟ್ಟರು.

    ಸಂಕ್ಷಿಪ್ತ ಸ್ಕೋರ್‌

    ರಾಜಸ್ಥಾನ್‌ ರಾಯಲ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 149 ರನ್‌ (ಎವಿನ್‌ ಲೂಯಿಸ್‌ 58, ಯಶಸ್ವಿ ಜೈಸ್ವಾಲ್ 31, ಸಂಜು ಸ್ಯಾಮ್ಸನ್‌ 18, ಕ್ರಿಸ್‌ ಮಾರಿಸ್‌ 14; ಹರ್ಷಲ್ ಪಟೇಲ್ 34ಕ್ಕೆ 3, ಯುಜ್ವೇಂದ್ರ ಚಹಲ್ 18ಕ್ಕೆ 3, ಶಹಬಾಝ್ ಅಹ್ಮದ್ 10ಕ್ಕೆ 2).

    ರಾಯಲ್ ಚಾಲೆಂಜರ್ಸ್‌ ಬೆಂಗಳೂರು: 17.1 ಓವರ್‌ಗಳಲ್ಲಿ 3 ವಿಕೆಟ್‌ಗೆ 153 ರನ್ (ವಿರಾಟ್‌ ಕೊಹ್ಲಿ 25, ದೇವದತ್ ಪಡಿಕ್ಕಲ್ 22, ಶ್ರೀಕರ್‌ ಭರತ್ 44, ಗ್ಲೆನ್ ಮ್ಯಾಕ್ಸ್‌ವೆಲ್‌ 50*; ಮುಸ್ತಾಫಿಝುರ್ ರೆಹಮಾನ್ 20ಕ್ಕೆ 2).

    ಪಂದ್ಯಶ್ರೇಷ್ಠ: ಯುಜ್ವೇಂದ್ರ ಚಹಲ್‌

  • ಬಿರುಸಿನ 44 ರನ್‌ಗಳ ಕೊಡುಗೆ ಕೊಟ್ಟ ಶ್ರೀಕರ್ ಭರತ್.

  • ಗ್ಲೆನ್‌ ಮ್ಯಾಕ್ಸ್‌ವೆಲ್‌ ಬ್ಯಾಟಿಂಗ್‌ ವೈಖರಿ.

  • ಬ್ಯಾಕ್‌ ಟು ಬ್ಯಾಕ್‌ ಅರ್ಧಶತಕ ಬಾರಿಸಿದ ಮ್ಯಾಕ್ಸ್‌ವೆಲ್.

  • ಇನ್ನಷ್ಟು ಚಿತ್ರಗಳುಡೌನ್‌ಲೋಡ್‌ ಆ್ಯಪ್‌
  • ಫಿಫ್ಟಿ ಬಾರಿಸಿದ ಸಂಭ್ರಮದಲ್ಲಿ ಮ್ಯಾಕ್ಸ್‌ವೆಲ್.

  • ಪಂದ್ಯದ ಬಳಿಕ ಎಬಿಡಿ ಕಾಣಿಸಿಕೊಂಡಿದ್ದು ಹೀಗೆ.

  • ವಿರಾಟ್‌ ಕೊಹ್ಲಿ ರನ್‌ಔಟ್‌ ಆದ ಕ್ಷಣ.

  • ಎರಡು ವಿಕೆಟ್‌ ಪಡೆದ ಶಹಬಾಝ್ ನದೀಮ್.

  • ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಯುಜ್ವೇಂದ್ರ ಚಹಲ್.

  • ಕ್ಯಾಚ್‌ ಸಲುವಾಗಿ ಜೈಸ್ವಾಲ್ ನಡೆಸಿದ ಪ್ರಯತ್ನ.

  • ಅರ್ಧಶತಕ ಬಾರಿಸಿದ ಎವಿನ್‌ ಲೂಯಿಸ್‌.

  • ಜಾರ್ಜ್‌ ಗಾರ್ಟನ್‌ ಬೌಲಿಂಗ್‌ ವೈಖರಿ.

  • 31 ರನ್‌ ಗಳಿಸಿದ ಯಶಸ್ವಿ ಜೈಸ್ವಾಲ್‌ ಬ್ಯಾಟಿಂಗ್‌ ವೈಖರಿ.